Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಸಾಧನೆ ಸಾಲಿಗೆ ರವೀಂದ್ರ ಜಡೇಜಾ!

Ravindra Jadeja joins Sachin Tendulkar, Kapil Dev in elite list

ನಾಗ್ಪುರ್, ಮಾರ್ಚ್ 5: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಸಾಧನೆಗಾಗಿ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಕಪಿಲ್ ದೇವ್ ಸಾಲಿನಲ್ಲಿ ಸೇರಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 2,000 ರನ್ ಮತ್ತು 150 ವಿಕೆಟ್‌ ಸಾಧನೆಗಾಗಿ ಜಡೇಜಾ ಗುರುತಿಸಿಕೊಂಡರು.

ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45586

ನಾಗ್ಪುರದಲ್ಲಿ ಮಂಗಳವಾರ (ಮಾರ್ಚ್ 5) ನಡೆದ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಣ ದ್ವಿತೀಯ ಏಕದಿನ ಪಂದ್ಯದಲ್ಲಿ 21 ರನ್ ಗಳಿಸಿದ ಜಡೇಜಾ ಒಟ್ಟಾರೆ 2,011 ರನ್ ಕಲೆ ಹಾಕಿದ್ದಾರೆ. ಇಲ್ಲಿಗೆ ಜಡೇಜಾ 149 ಪಂದ್ಯಗಳಲ್ಲಿ 2011 ರನ್, 171 ವಿಕೆಟ್ ಪಡೆದಂತಾಗಿದೆ.

ಈ ಸಾಧನೆಯೊಂದಿಗೆ ಜಡೇಜಾ ವಿಶ್ವದ 26ನೇ ಆಲ್ ರೌಂಡರ್ ಮತ್ತು ಭಾರತದ ಮೂರನೇ ಆಲ್ ರೌಂಡರ್ ಆಟಗಾರನಾಗಿ ಗುರುತಿಸಿಕೊಂಡರು. ಇದೇ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ 116 ರನ್‌ನೊಂದಿಗೆ 40ನೇ ಅಂತಾರಾಷ್ಟ್ರೀಯ ಏಕದಿನ ಶತಕ ಪೂರೈಸಿಕೊಂಡರು.

1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡವನ್ನು ಮುನ್ನಡೆಸಿದ್ದ ಕಪಿಲ್ ದೇವ್ 225 ಏಕದಿನ ಪಂದ್ಯಗಳಲ್ಲಿ 3,783 ರನ್ ಮತ್ತು 253 ವಿಕೆಟ್ ಪಡೆದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 436 ಏಕದಿನ ಪಂದ್ಯಗಳಲ್ಲಿ 18,426 ರನ್ ಮತ್ತು 154 ವಿಕೆಟ್ ಸಾಧನೆ ಹೊಂದಿದ್ದಾರೆ.

Story first published: Tuesday, March 5, 2019, 18:39 [IST]
Other articles published on Mar 5, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+