'ಇಂಡಿಯಾ ಸಿಮೆಂಟ್ಸ್' ಹೆಸರು ತೋರಿಸಿ ಟ್ರೋಲ್‌ಗೆ ಗುರಿಯಾದ ಜಡೇಜಾ

ದುಬೈ ಇಂಟರ್‌ನ್ಯಾಷ್‌ನಲ್ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಗೆಲುವಿನ ದಡ ತಲುಪಿದ ಸಿಎಸ್‌ಕೆ ಆಲ್‌ರೌಂಡರ್ ರವೀಂದ್ರ ಜಡೇಜಾ ಪಂದ್ಯ ಮುಗಿದ ಬಳಿಕ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಕೆಕೆಆರ್ ನೀಡಿದ 173 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಓಪನರ್ ರುತುರಾಜ್ ಗಾಯಕ್ವಾಡ್ 72, ಅಂಬಟಿ ರಾಯುಡು 38, ಕೊನೆಯಲ್ಲಿ ರವೀಂದ್ರ ಜಡೇಜಾ ಸ್ಪೋಟಕ 31ರನ್‌ಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಆರು ವಿಕೆಟ್‌ಗಳ ಗೆಲುವು ಸಾಧಿಸಿತು.
ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಆಲ್‌ರೌಂಡರ್ ರವೀಂದ್ರ ಜಡೇಜಾ ಕೇವಲ 11 ಎಸೆತಗಳಲ್ಲಿ 31 ರನ್ ಸಿಡಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿದ್ದವು.
ಸಿಎಸ್‌ಕೆಗೆ ಗೆಲುವು ತಂದುಕೊಟ್ಟ ಜಡೇಜಾ ಜಯದ ಸಂಭ್ರಾಮಾಚರಣೆ ವೇಳೆ ತಮ್ಮ ಜೆರ್ಸಿ ಹಿಂದಿನ ಮೇಲಿನ ಹೆಸರನ್ನು ಎರಡು ಮೂರು ಬಾರಿ ಬೊಟ್ಟು ಮಾಡಿ ತೋರಿಸಿದರು. ವಿಜಯೋತ್ಸವವನ್ನು ಆಚರಿಸಲು, ಜಡ್ಡು ಕ್ಯಾಮೆರಾದತ್ತ ಬೆನ್ನು ತಿರುಗಿಸಿ ಅಂಗಿಯ ಮೇಲ್ಭಾಗಕ್ಕೆ ಸನ್ನೆ ಮಾಡಿದರು. ಅಲ್ಲಿ ಪ್ರಾಯೋಜಕರಾದ 'ಇಂಡಿಯಾ ಸಿಮೆಂಟ್ಸ್' ಹೆಸರನ್ನು ಉಲ್ಲೇಖಿಸಲಾಗಿದೆ.
ಭಾರತೀಯ ತಂಡದ ಜರ್ಸಿಯಲ್ಲಿರುವಂತೆ ಇದು ತದ್ವಿರುದ್ದ ಎಂದು ಪರಿಗಣಿಸಬಹುದು, ಏಕೆಂದರೆ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಆಟಗಾರನ ಹೆಸರನ್ನು ಸಂಖ್ಯೆಯ ಮುಂದೆ ಇರಿಸಲಾಗುತ್ತದೆ, ಆದಾಗ್ಯೂ, ಸಿಎಸ್‌ಕೆ ಜೆರ್ಸಿಯಲ್ಲಿ ಪ್ರಾಯೋಜಕರ ಹೆಸರನ್ನು ಮೇಲ್ಭಾಗದಲ್ಲಿ ಬರೆಯಲಾಗಿದೆ.
ಆಲ್ರೌಂಡರ್ ಪ್ರಾಯೋಜಕರಾದ 'ಇಂಡಿಯಾ ಸಿಮೆಂಟ್ಸ್' ಕಡೆಗೆ ತೋರಿಸುತ್ತಿರುವ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ಸಾಕಷ್ಟು ಸಂಖ್ಯೆಯಲ್ಲಿ ಟ್ವಿಟ್ಟಿಗರು ಜಡೇಜಾರನ್ನು ಟ್ರೋಲ್ ಮಾಡಿದ್ದಾರೆ. ಪ್ರಾಯೋಜಕರನ್ನು ಇಷ್ಟೊಂದು ಪ್ರಚಾರ ಮಾಡುವ ಜಡ್ಡುಗೆ ಇಂಡಿಯಾ ಸಿಮೆಂಟ್ಸ್ ಶೇ. 50ರಷ್ಟು ಷೇರುಗಳನ್ನು ನೀಡಬೇಕು ಎಂದು ಕಾಲೆಳೆದಿದ್ದಾರೆ.
ಜಡೇಜಾ ಟೀಮ್ ಇಂಡಿಯಾ ಜೆರ್ಸಿ ರೀತಿಯಲ್ಲಿ ತನ್ನ ಹೆಸರು ಮೇಲ್ಬಾಗದಲ್ಲಿ ಇದೆ ಎಂದು ಅಂದುಕೊಂಡು ಈ ರೀತಿಯಾಗಿ ಸಂಭ್ರಮಿಸಿದರೋ ಅಥವಾ ಉದ್ದೇಶಪೂರ್ವಕಾಗಿ ಇಂಡಿಯಾ ಸಿಮೆಂಟ್ಸ್ ತೋರಿಸಿದರೋ ಅನ್ನೋದನ್ನು ಅವರೇ ಸ್ವತಃ ಬಹಿರಂಗಪಡಿಸಬೇಕಿದೆ. ಆದರೆ ಜಡ್ಡು ಸೆಲೆಬ್ರೇಷನ್ ಕುರಿತು ಆಗಿರುವ ಟ್ರೋಲ್ ಈ ಕೆಳಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications