
ಬೌಲಿಂಗ್‌ನದ್ದೇ ಸಮಸ್ಯೆ
ಆರ್‌ಸಿಬಿಯಲ್ಲಿ ಉತ್ತಮ ಬೌಲರ್‌ಗಳಿದ್ದರೂ ಅವರಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಉಮೇಶ್ ಯಾದವ್ ಆರಂಭದಲ್ಲಿ ಚೆನ್ನಾಗಿ ಬೌಲ್ ಮಾಡಿದರೂ ಸ್ಥಿರತೆ ಉಳಿಸಿಕೊಳ್ಳುತ್ತಿಲ್ಲ. ಕ್ರಿಸ್ ವೋಕ್ಸ್, ಖೆಜ್ರೋಲಿಯಾ, ಯುಜುರ್ವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್ ಅವರ ಬೌಲಿಂಗ್ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರುವಷ್ಟು ಪರಿಣಾಮಕಾರಿಯಾಗಿಲ್ಲ. ಶುರುವಿನಲ್ಲಿ ವಿಕೆಟ್ ಕಿತ್ತರೂ, ಅದರ ಲಾಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಉಳಿದ ಬೌಲರ್‌ಗಳು ವಿಫಲರಾಗುತ್ತಿದ್ದಾರೆ.

ಕೊಹ್ಲಿ, ಎಬಿಡಿ ಮೇಲೆ ಅವಲಂಬಿತ
ಬ್ರೆಂಡನ್ ಮೆಕಲಮ್ ವಿಫಲರಾದ ಬಳಿಕ ಅವರ ಸ್ಥಾನಕ್ಕೆ ಆಲ್‌ರೌಂಡರ್ ಕೋರಿ ಅಂಡರ್‌ಸನ್ ಅವರನ್ನು ಕಳೆದ ಪಂದ್ಯದಲ್ಲಿ ಆಡಿಸಲಾಗಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅವರಿಂದ ಪ್ರಯೋಜನವಾಗಲಿಲ್ಲ. ಇಡೀ ತಂಡ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ಮೇಲೆ ಅವಲಂಬಿತವಾಗಿದೆ.
ಆರ್‌ಸಿಬಿ ಹರಾಜಿಗೆ ಬಿಡದೆ ತನ್ನಲ್ಲೇ ಇರಿಸಿಕೊಂಡ ಸರ್ಫರಾಜ್ ಖಾನ್ ಫಾರ್ಮ್ ತಂಡಕ್ಕೆ ತಲೆನೋವಾಗಿದೆ. ಅವರ ಬದಲು ಪಾರ್ಥಿವ್ ಪಟೇಲ್ ಅಥವಾ ಕರ್ನಾಟಕದ ಆಟಗಾರರಾದ ಪವನ್ ದೇಶಪಾಂಡೆ, ಅನಿರುದ್ಧ್ ಜೋಶಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಮೊದಲ ಆರು ಓವರ್‌ಗಳಲ್ಲಿ ಹೆಚ್ಚು ರನ್ ಹರಿದುಬರುತ್ತಿಲ್ಲ. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಮನ್‌ದೀಪ್ ಸಿಂಗ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಬಲ್ಲವರಾದರೂ, ಅವರಿಗೆ ಹೆಚ್ಚು ಅವಕಾಶ ಸಿಗುತ್ತಿಲ್ಲ.

ಡೆಲ್ಲಿ ಕಥೆಯೂ ಬೇರೆಯಲ್ಲ
ಡೆಲ್ಲಿ ಡೇರ್ ಡೆವಿಲ್ಸ್ ಕೂಡ ಆರ್‌ಸಿಬಿಯಂತೆಯೇ ಸಮಸ್ಯೆಗಳಲ್ಲಿ ಸಿಲುಕಿದೆ. ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಮೊದಲ ಪಂದ್ಯದಲ್ಲಿ ಆಡಿದ ಆಟವನ್ನು ಪುನರಾವರ್ತಿಸುವಲ್ಲಿ ಸೋಲುತ್ತಿದೆ. ನಾಯಕ ಗಂಭೀರ್, ಶಾರ್ಟ್, ಮುನ್ರೋ, ಶ್ರೇಯಸ್ ಅಯ್ಯರ್, ವಿಜಯ ಶಂಕರ್ ಬ್ಯಾಟಿಂಗ್ ಸಾಮರ್ಥ್ಯ ಸರಿಯಾಗಿ ಬಳಕೆಯಾಗುತ್ತಿಲ್ಲ.
ರಿಷಭ್ ಪಂತ್ ಮಾತ್ರ ದಿಟ್ಟತನದಿಂದ ಬೌಲರ್‌ಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಪದೇಪದೇ ತಂಡವನ್ನು ಬದಲಿಸುವ ಅನಿವಾರ್ಯತೆಗೆ ಗಂಭೀರ್ ಒಳಗಾಗುತ್ತಿದ್ದಾರೆ. ಜೇಸನ್ ರಾಯ್ ಮತ್ತು ಮ್ಯಾಕ್ಸ್‌ವೆಲ್ ಸಿಡಿದರೆ ಆರ್‌ಸಿಬಿ ವಿರುದ್ಧ ಉತ್ತಮ ಮೊತ್ತ ಪೇರಿಸಲು ಸಾಧ್ಯ.

ಬೌಲರ್‌ಗಳ ಸಮಸ್ಯೆ
ಟ್ರೆಂಟ್ ಬೋಲ್ಟ್ ಆರಂಭದಲ್ಲಿ ಉತ್ತಮ ಬೌಲಿಂಗ್ ಮಾಡಿದರೂ ಅವರಿಗೆ ಉಳಿದ ಬೌಲರ್‌ಗಳಿಂದ ಬೆಂಬಲ ಸಿಗುತ್ತಿಲ್ಲ. ಮಹಮದ್ ಶಮಿ ತೀರಾ ದುಬಾರಿಯಾಗುತ್ತಿದ್ದಾರೆ. ಆಲ್‌ರೌಂಡರ್ ವಿಜಯ್ ಶಂಕರ್ ಅವರನ್ನು ಗಂಭೀರ್ ಸರಿಯಾಗಿ ಬಳಸಿಕೊಂಡಿಲ್ಲ. ಟೆವಾಟಿಯಾ ಇದುವರೆಗಿನ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಅಮಿತ್ ಮಿಶ್ರಾ ಬೌಲಿಂಗ್ ಮೋಡಿ ನಡೆಯದ ಕಾರಣಕ್ಕೆ ನದೀಮ್ ಅವರನ್ನು ಆಡಿಸಲಾಗಿತ್ತು. ಅವರೂ ಕೂಡ ಆ ಸ್ಥಾನಕ್ಕೆ ನ್ಯಾಯ ತುಂಬಿಲ್ಲ.


Click it and Unblock the Notifications