ಕೊಹ್ಲಿಯ ಬ್ಯಾಟಿಗೂ, ರಾಯುಡು ಬ್ಯಾಟಿಂಗೂ ಏನದು ಲಿಂಕು?!


ಚೆನ್ನೈ, ಮೇ 31: ಐಪಿಎಲ್ 2018ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂಬಾಟಿ ರಾಯುಡು ಹೆಚ್ಚಿನ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಅವರ ಈ ಸ್ಫೋಟಕ ಬ್ಯಾಟಿಂಗ್ ಗೆ ಕಾರಣವೇನೆನ್ನುವ ಗುಟ್ಟನ್ನು ಇಂದು ರಟ್ಟು ಮಾಡಿದ್ದಾರೆ.
ಈ ಐಪಿಎಲ್ ಸೀಸನ್ ನಲ್ಲಿ ಒಟ್ಟು 16 ಪಂದ್ಯಗಳನ್ನಾಡಿದ್ದ ಸಿಎಸ್ಕೆ ತಂಡದ ರಾಯುಡು ಒಟ್ಟು 602 ರನ್ ಗಳಿಸಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನಿಗರಾಗಿ ಗುರುತಿಸಿಕೊಂಡಿದ್ದರು. ಅವರ ಭರ್ಜರಿ ಬ್ಯಾಟಿಂಗ್ ಗೆ ಕೊಹ್ಲಿ ನೀಡಿರುವ ಬ್ಯಾಟ್ ಕಾರಣ ಎಂಬ ವಿಚಾರವನ್ನು ರಾಯುಡು ಬಾಯ್ಬಿಟ್ಟಿದ್ದಾರೆ.
2018ರ ಐಪಿಎಲ್ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ರಾಯುಡು ಬ್ಯಾಟ್ ನಿಂದ ಒಟ್ಟು 53 ಬೌಂಡರಿಗಳು ಮತ್ತು 34 ಸಿಕ್ಸರ್ ಗಳು ಸಿಡಿದಿದ್ದವು. ಹೀಗೆ ತಾನು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ಸಾಧ್ಯವಾಗಿದ್ದು ಟೀಮ್ ಇಂಡಿಯಾ ಮತ್ತು ಆರ್ಸಿಬಿ ಕ್ಯಾಪ್ಟನ್ ಆಗಿದ್ದ ವಿರಾಟ್ ಕೊಹ್ಲಿ ನೀಡಿದ್ದ ಬ್ಯಾಟ್ ನಿಂದ ಎಂದು ರಾಯುಡು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಅವರಿಂದ ರಾಯುಡು ಪ್ರತಿ ವರ್ಷವೂ ಒಂದು ಬ್ಯಾಟ್ ಪಡೆದುಕೊಳ್ಳುತ್ತಾರಂತೆ. ಹೀಗೆ ಪಡೆದ ಬ್ಯಾಟ್ ರನ್ ಸಿಡಿಸಲು ನೆರವಾಗುತ್ತಿದೆ ಎಂದು ರಾಯುಡು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಚೆನ್ನೈ ತಂಡದ ಆಟಗಾರ ಹರ್ಭಜನ್ ಸಿಂಗ್ ಮತ್ತು ರಾಯುಡು ಅವರು ಅತಿಥಿಯಾಗಿ ಭಾಗವಹಿಸಿದ್ದು ಈ ವೇಳೆ ರಾಯುಡು ತಮ್ಮ ಬ್ಯಾಟಿಂಗ್ ಸೀಕ್ರೆಟ್ ಅನ್ನು ಬಹಿರಂಗಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications