ಬೆಂಗಳೂರು ಕಿತ್ತು ಹಾಕಿದ RCB Tweets ವಿರುದ್ಧ ಫ್ಯಾನ್ಸ್ ಗರಂ!

ಬೆಂಗಳೂರು, ನವೆಂಬರ್ 24: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಇಲ್ಲಿ ತನಕ ಒಂದು ಕಪ್ ಗೆಲ್ಲಲು ಸಾಧ್ಯವಾಗದಿದ್ದರೂ ಬೆಂಗಳೂರಿನ ತಂಡ ಎಂಬ ಕಾರಣಕ್ಕೆ ಅಭಿಮಾನಿಗಳಿಂದ ಕಷ್ಟಕಾಲದಲ್ಲೂ ಇಷ್ಟಪಡುವಂಥ ತಂಡವಾಗಿದ್ದ ಆರ್ ಸಿಬಿಗೆ ಈಗ ಕೇಡುಗಾಲ ಶುರುವಾಗಿದೆ.
ರಾಯಲ ಚಾಲೆಂಜರ್ಸ್ ಬೆಂಗಳೂರು ತಂಡದ ಅಧಿಕೃತ ಟ್ವಿಟ್ಟರ್ ಖಾತೆ @RCBTweetsನ ಹೆಸರು ಬದಲಾಗಿದೆ. Royal Challengers Bangalore ಎಂದಿದ್ದ ಖಾತೆ ಹೆಸರಿನಲ್ಲಿ Bangalore ಮಾಯವಾಗಿದೆ. ಈಗ ಬರೀ ರಾಯಲ್ ಚಾಲೆಂಜರ್ಸ್ ಎಂದು ಕಾಣಿಸುತ್ತಿದೆ. ಈ ಬಗ್ಗೆ ಕನ್ನಡ ಚಿತ್ರರಂಗದ ನಿರ್ದೇಶಕ, ಆರ್ ಸಿಬಿ ಅಪ್ಪಟ ಅಭಿಮಾನಿ ಸಿಂಪಲ್ ಸುನಿ ಅವರು ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಭಾರಿ ಪ್ರತಿಕ್ರಿಯೆ ಬರುತ್ತಿದೆ.
ಹಲವಾರು ಮಂದಿ ಬೆಂಗಳೂರು ಎಫ್ ಸಿ ಟ್ವಿಟ್ಟರ್ ಖಾತೆ ನೋಡಿ ಕಲಿಯಿರಿ ಎಂದು ಆರ್ ಸಿಬಿಗೆ ಸಲಹೆ ನೀಡಿದ್ದಾರೆ. ಬೆಂಗಳೂರಿನ ತಂಡವಾಗಿ ಕನ್ನಡ ಬಳಸಲು ಹಿಂಜರಿಯುವ, ಇಲ್ಲಿನ ಕಲೆ, ಸಂಸ್ಕೃತಿಗೆ ಬೆಲೆ ಕೊಡದ ಹೋಗಲಿ, ಸ್ಥಳೀಯ ಆಟಗಾರರನ್ನು ತಂಡದಲ್ಲಿ ಸರಿಯಾಗಿ ಹೊಂದಿರದ ತಂಡವಾಗಿ ಆರ್ ಸಿಬಿ ವರ್ಷದಿಂದ ವರ್ಷಕ್ಕೆ ಉಳಿದುಕೊಂಡಿದೆ.
ಬೆಂಗಳೂರು ಬಿಟ್ಟರೆ ಸರಿ ಇರಲ್ಲ
ಕನ್ನಡಿಗರನ್ನು ತಂಡದಲ್ಲಿ ಹೊಂದಿಲ್ಲದಿದ್ದರೂ ಬೆಂಗಳೂರಿನ ತಂಡ ಎಂಬ ಕಾರಣಕ್ಕೆ ನಿಮ್ಮನ್ನು ಎಲ್ಲಾ ಸಂದರ್ಭದಲ್ಲೂ ಬೆಂಬಲಿಸಿದ್ದೇವೆ. ಬೆಂಗಳೂರು ತೆಗೆದು ಹಾಕಿದರೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತೀರಿ. ಸೋಲೋ ಗೆಲುವೋ ಜೊತೆಗಂತು ಇರುತ್ತೇವೆ. ಎಂದು ಸುನಿ ಬರೆದುಕೊಂಡಿದ್ದಾರೆ.
ನಮ್ಮತನ ನ ಬಿಟ್ಟುಕೊಡದ ತಂಡ
ಬೆಂಗಳೂರು ಫುಟ್ಬಾಲ್ ತಂಡವನ್ನು ನೋಡಿ ಕಲಿಯಿರಿ, ಇಲ್ಲಿನ ಭಾಷೆ, ಕಲೆಗೆ ಬೆಲೆ ಕೊಡುತ್ತಾರೆ, ಆರ್ ಸಿಬಿ ಬದಲು ಬಿ ಎಫ್ ಸಿ ಬೆಂಬಲಿತ್ತಾ ಇದ್ದೀವಿ ಎಂದ ಅಭಿಮಾನಿಗಳು.
ಐಪಿಎಲ್ 2020ರ ಆವೃತ್ತಿಗೆ ಆಟಗಾರರ ಹರಾಜಿನ ದಿನಾಂಕ, ಸ್ಥಳ ನಿಗದಿ
ನಾನು ಈ ಬಗ್ಗೆ ಪ್ರಶ್ನೆ ಮಾಡಿದ್ದೆ
ನಾನು ಈ ಬಗ್ಗೆ ಪ್ರಶ್ನೆ ಮಾಡಿದ್ದೆ, ಅವರಿಗೆ ಈ ಬಗ್ಗೆ ತಿಳಿಸಿ, ತಪ್ಪು ಸರಿಪಡಿಸಿಕೊಳ್ಳುವಂತೆ ಸೂಚಿಸಿದ್ದೆ. ಆದರೆ, ಅವರು ಬದಲಾಗುವಂತೆ ಕಾಣುತ್ತಿಲ್ಲ, ಎಂದು ಸುನಿಗೆ ಬೆಂಬಲ ವ್ಯಕ್ತಪಡಿಸಿದ ಅಭಿಮಾನಿಗಳು.
ಬೆಂಗಳೂರು ಇಲ್ಲಾಂದ್ರೆ ಯಾರು ಬೆಂಬಲಿಸುತ್ತಾರೆ
RCB ಅಲ್ಲಿ ನಮ್ಮ ಹೆಮ್ಮೆಯ ಬೆಂಗಳೂರು ಇದೆ ಅಂತ ಅಷ್ಟೆ ನಾವು ಬೆಂಬಲಿಸುತ್ತಾ ಇರೋದು, ಇಲ್ಲಾಂದ್ರೆ ಯಾರು ಬೆಂಬಲಿಸುತ್ತಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications