Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟ್ವಿಟ್ಟರ್‌ನಲ್ಲಿ ಆರ್‌ಸಿಬಿಯ ಜನ್ಮ ಜಾಲಾಡಿದ ನೆಟ್ಟಿಗರು

RCB loss to Hyderabad in big margin, here is the social media reactions

ಬೆಂಗಳೂರು, ಏಪ್ರಿಲ್ 01: ಆರ್‌ಸಿಬಿ ತಂಡವು ಮತ್ತೆ ಸೋತಿದೆ. ಸೋಲುವುದು ಅದಕ್ಕೆ ಅಭ್ಯಾಸವಾಗಿಬಿಟ್ಟಿದೆ ಎನ್ನುವ ಮಟ್ಟಿಗೆ ಅದು ಸೋಲುತ್ತಲೇ ಇದೆ. ಈ ಐಪಿಎಲ್ ಪಂದ್ಯಾವಳಿಯ ಮೂರನೇ ಸೋಲು ಇದೆ.

ತಂಡವೇನೋ ಸೋತು ಮತ್ತೊಂದು ಪಂದ್ಯಕ್ಕೆ ತಯಾರಾಗುವತ್ತ ಗಮನ ಬದಲಾಯಿಸುತ್ತದೆ. ಆದರೆ ಫ್ಯಾನ್ಸ್‌ಗಳ ಗತಿಯೇನು? ಮೊದಲ ಸೀಸನ್‌ನಿಂದಲೂ ಆರ್‌ಸಿಬಿ ಫ್ಯಾನ್ಸ್‌ಗಳು ಐಪಿಎಲ್‌ ಕಪ್ ಗೆಲ್ಲುವ ಅದೊಂದು ಕ್ಷಣಕ್ಕಾಗಿ ಕಾಯುತ್ತಲೇ ಇದ್ದಾರೆ, ಆದರೆ ಅದಿನ್ನೂ ಸಾಧ್ಯವಾಗಿಲ್ಲ.

ಮಿಕ್ಕೆಲ್ಲಾ ಐಪಿಎಲ್ ತಂಡಗಳ ಅಭಿಮಾನಿಗಳ ಅಭಿಮಾನದ ತೀವ್ರತೆಗಿಂತಲೂ ಆರ್‌ಸಿಬಿ ಫ್ಯಾನ್ಸ್‌ಗಳ ತಂಡದ ಮೇಲಿನ ಅಭಿಮಾನ ತುಸು ಹೆಚ್ಚು. ಆರ್‌ಸಿಬಿ ಫ್ಯಾನ್ಸ್‌ ಐಪಿಎಲ್‌ ಎಲ್ಲ ತಂಡದ ಫ್ಯಾನ್ಸ್‌ಗಳಿಗಿಂತಲೂ ಬೆಸ್ಟ್‌. ಆದರೆ ಪಾಪ ಈಗ ಅವರೇ ಟ್ರೋಲ್‌ಗೆ ತುತ್ತಾಗುತ್ತಿದ್ದಾರೆ. ಅದಕ್ಕೆ ಆರ್‌ಸಿಬಿ ತಂಡದ ಕಳಪೆ ಪ್ರದರ್ಶನ ಕಾರಣ.

ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಅಭಿಮಾನಿಗಳನ್ನು, ಆರ್‌ಸಿಬಿ ನಿನ್ನೆ ಅನುಭವಿಸಿದ ಭಾರಿ ಸೋಲನ್ನು ವ್ಯಂಗ್ಯ ಮಾಡಲಾಗಿದೆ. ಇಲ್ಲಿವೆ ಕೆಲವು ಆಯ್ದ ಫನ್ನಿ ಟ್ವೀಟ್‌ಗಳು.

ದುಖಃದಲ್ಲಿ ಮುಳುಗಿದ ಆರ್‌ಸಿಬಿ ಫ್ಯಾನ್

ಮಳೆಯಲ್ಲಿ ಒಂಟಿಯಾಗಿ ಕೂತ ಪಿಂಕ್ ಪ್ಯಾಂತರ್‌ ನ ಚಿತ್ರ ಹಾಕಿ, ಆರ್‌ಸಿಬಿ ಅಭಿಮಾನಿಯ ಸದ್ಯದ ಪರಿಸ್ಥಿತಿ ಇದು ಎಂದು ಟ್ವೀಟ್ ಮಾಡಿದ್ದಾನೆ ಇಲ್ಲೊಬ್ಬ ಪುಣ್ಯಾತ್ಮ.

ಆರ್‌ಸಿಬಿ ಬೌಲರ್‌ಗಳು ಜೊಮೆಟೋ ಡೆಲಿವರಿ ಬಾಯ್‌ಗಳು

ಆರ್‌ಸಿಬಿ ಬೌಲರ್‌ಗಳು ಜೊಮೆಟೊ, ಸ್ವಿಗ್ಗಿಯ ಡೆಲಿವರಿ ಬಾಯ್‌ಗಳ ಥರ. ಅವರ ಪ್ರತಿ ಎಸೆತ (ಇಂಗ್ಲಿಷ್‌ನಲ್ಲಿ ಡೆಲಿವರಿ) ಎದುರಾಳಿಗಳಿಗೆ ರುಚಿಕರವಾಗಿ ಕಾಣುತ್ತಿದೆ ಎಂದು ಟ್ರೋಲ್ ಹೈಕ್ಳು ಆರ್‌ಸಿಬಿ ಬೌಲಿಂಗ್ ಅನ್ನು ಹಾಸ್ಯಮಯವಾಗಿ ಟೀಕಿಸಿದ್ದಾರೆ.

ಈವರೆಗಿನ ಅತ್ಯಂತ ಹೀನಾಯ ಸೋಲು ಇದು: ಕೊಹ್ಲಿ ಬೇಸರ

ಆರ್‌ಸಿಬಿ ಅಭಿಯನ್ನು ಕಣ್ಣು ಮುಚ್ಚಿ ಮದುವೆಯಾಗಿ

ಹುಡುಗಿಯರೇ ನಿಮ್ಮ ಬಾಯ್ ಫ್ರೆಂಡ್ ಆರ್‌ಸಿಬಿ ಫ್ಯಾನ್ ಆಗಿದ್ದರೆ, ಕಣ್ಣು ಮುಚ್ಚಿಕೊಂಡು ಆತನನ್ನು ಮದುವೆಯಾಗಿರಿ, ಆತನಷ್ಟು ಪ್ರಾಮಾಣಿಕ ಇನ್ನಾರು ಇರಲು ಸಾಧ್ಯವಿಲ್ಲ, ಆರ್‌ಸಿಬಿ ಇಷ್ಟು ವರ್ಷಗಳಿಂದ ಸೋಲುತ್ತಿದ್ದರೂ ಸಹ ಆತ ತನ್ನ ಅಭಿಮಾನ ಬದಲಿಸಿಲ್ಲ, ಹೀಗೆ ಸಿಹಿಯಾಗಿ ಕಾಲೆಳೆಯುವ ಟ್ವೀಟ್ ಮಾಡಿದವರು ವಿಶಾಲ್ ರಾಜ್.

ಬ್ರೆಸ್ಟೊ ಒಬ್ಬನೇ ಆರ್‌ಸಿಬಿಯ ಸೋಲಿಸಿದ

ನಿನ್ನೆಯ ಪಂದ್ಯದಲ್ಲಿ ಜಾನಿ ಬ್ರೆಸ್ಟೊ ಒಬ್ಬನೇ 114 ರನ್ ಚೆಚ್ಚಿದ್ದ, ಆದರೆ ಆರ್‌ಸಿಬಿಯ ಎಲ್ಲ ಆಟಗಾರರು ಸೇರಿ 113 ರನ್ ಹೊಡೆದರು. ಬ್ರೆಸ್ಟೋವ್ ಒಬ್ಬನೇ ಆರ್‌ಸಿಬಿಯನ್ನು ಒಂದು ರನ್‌ನಿಂದ ಸೋಲಿಸಿದಂತಾಯಿತು.

ಆರ್‌ಸಿಬಿ ಬೌಲರ್‌ಗಳ ಕತೆ

ಬೆಳಿಗ್ಗೆ ಏಳು, ಸ್ನಾನ ಮಾಡು, ಚೆನ್ನಾಗಿ ಹೊಡೆಸಿಕೊ, ರಾತ್ರಿ ನಿದ್ದೆ ಮಾಡು, ಮತ್ತೆ ನಾಳೆ ಅದನ್ನೇ ಪುನರಾವರ್ತನೆ ಮಾಡು ಇಷ್ಟೆ ಆರ್‌ಸಿಬಿ ಬೌಲರ್‌ಗಳ ಕತೆ.

ಆರ್‌ಸಿಬಿ ಕಪ್ ಗೆಲ್ಲಲ್ಲ

ಯಾರು ಬೇಕಾದರೂ ಐಪಿಎಲ್ ಗೆಲ್ಲಬಹುದು ಆದರೆ ಬೆಂಗಳೂರು ಕಪ್ ಗೆಲ್ಲಲ್ಲ ಎಂದವರೊಬ್ಬರು ಸಾಕ್ಷಿಯಾಗಿ ಚಿತ್ರವೊಂದನ್ನು ಹಾಕಿದ್ದಾರೆ. ಬೆಂಗಳೂರು ದಂಡು ಪ್ರದೇಶದ ರೈಲ್ವೆ ಸ್ಟೇಷನ್‌ನ ಚಿತ್ರದಲ್ಲಿ ಬೆಂಗಳೂರು ಕಂಟೋನ್ಮೆಂಟ್ ಅನ್ನು ಇಂಗ್ಲಿಷ್‌ನಲ್ಲಿ 'Bengaluru Cant.' ಎಂದು ಬರೆಯಲಾಗಿದೆ, ಇದರ ಕನ್ನಡ ಅನುವಾದ ಬೆಂಗಳೂರಿಗೆ ಸಾಧ್ಯವಿಲ್ಲ ಎಂದು.

Story first published: Monday, April 1, 2019, 12:26 [IST]
Other articles published on Apr 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+