Dinesh Karthik Helmet : ಆರ್‌ಸಿಬಿ ಪಾಲಿನ ಹೊಸ ಆಪದ್ಬಾಂಧವ ಡಿಕೆ ಹೆಲ್ಮೆಟ್ ಮೇಲೆ ಎಲ್ಲರ ಕಣ್ಣು!

ಐಪಿಎಲ್ 2022ರ ರಾಯಲ್ಸ್ ಕದನದಲ್ಲಿ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬೀಗಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಮುಗ್ಗರಿಸಿದೆ. ಶಾಬಾಜ್ ಹಾಗೂ ದಿನೇಶ್ ಜೋಡಿ ಮಾಡಿದ ಮೋಡಿಗೆ ಎಲ್ಲರೂ ಬೆರಗಾಗಿದ್ದಾರೆ.
ಅದರಲ್ಲೂ ಸತತವಾಗಿ ಪಂದ್ಯಕ್ಕೆ ಫಿನಿಶಿಂಗ್ ಸ್ಪರ್ಶ ನೀಡುತ್ತಾ ಬಂದಿರುವ ದಿನೇಶ್ ಕಾರ್ತಿಕ್ (ಡಿಕೆ) ಬಗ್ಗೆ ಆರ್‌ಸಿಬಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಎ ಬಿ ಡಿ ವಿಲಿಯರ್ಸ್ ಇಲ್ಲದ ಕೊರತೆಯನ್ನು ಡಿಕೆ ನೀಗಿಸಿದ್ದಾರೆ ಎಂದು ಸಂತಸದಿಂದ ಕುಣಿದಾಡಿದ್ದಾರೆ. ರನ್ ಚೇಸಿಂಗ್ ಮಾಡುವಾಗ ಒಂದು ಹಂತದಲ್ಲಿ 11 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ದುಃಸ್ಥಿತಿಯಲ್ಲಿದ್ದ ಆರ್ ಸಿಬಿಯನ್ನು ಮಣಿಸುವ ರಾಜಸ್ಥಾನ್ ರಾಯಲ್ಸ್ ಕನಸು ಭಗ್ನಗೊಳಿಸಿದ್ದು ಡಿಕೆ.
62ಕ್ಕೆ 4 ಸ್ಕೋರ್ ಮಾಡಿ ಸಂಕಷ್ಟದಲ್ಲಿದ್ದ ಬೆಂಗಳೂರು ತಂಡಕ್ಕೆ ಶಾಬಾದ್ ಅಹ್ಮದ್ (26 ಎಸೆತಗಳಲ್ಲಿ 45ರನ್) ಹಾಗೂ ದಿನೇಶ್ ಕಾರ್ತಿಕ್ (23ಎಸೆತಗಳಲ್ಲಿ 44 ಅಜೇಯ) ಆಸರೆಯಾಗಿ, ಗೆಲುವಿನ ದಡ ಮುಟ್ಟಿಸಿದರು. ಈ ಜೋಡಿ 33 ಎಸೆತಗಳಲ್ಲಿ 67ರನ್ ಗಳಿಸಿ ಗೆಲುವಿನ ಮುದ್ರೆ ಹಾಕಿದರು.

ಇನ್ನು ಐದು ಎಸೆತ ಬಾಕಿ ಇರುವಂತೆಯೇ ಗುರಿ ದಾಟಿದ ಬೆಂಗಳೂರು, ಮೂರು ಪಂದ್ಯಗಳಲ್ಲಿ ಎರಡನೇ ಜಯ ದಾಖಲಿಸಿತು. ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ ಶೈಲಿ ಜೊತೆಗೆ ಅವರ ಹೆಲ್ಮೆಟ್ ಕೂಡಾ ಗಮನ ಸೆಳೆಯುತ್ತದೆ. ಬೇರೆ ಆಟಗಾರರಿಗಿಂತ ಭಿನ್ನವಾದ ಹೆಲ್ಮೆಟ್ ಧರಿಸುತ್ತಾರೆ.
ಹೆಲ್ಮೆಟ್ ಧರಿಸಲು ಏನಾದರೂ ವಿಶೇಷ ಕಾರಣ?
ಈ ರೀತಿ ಹೆಲ್ಮೆಟ್ ಧರಿಸಲು ಏನಾದರೂ ವಿಶೇಷ ಕಾರಣ ಇದೆಯೇ ಎಂಬ ಕುತೂಹಲ ಮೂಡುತ್ತದೆ. ಆದರೆ, ಈ ಬಗ್ಗೆ ಹಿಂದೆಯೇ ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ ಕೂಡಾ. ಹೆಲ್ಮೆಟ್ ಗುರವಾದ ಆಗಿರುವ ಕಾರಣ ಕಾರ್ತಿಕ್ ಈ ರೀತಿ ಹೆಲ್ಮೆಟ್ ಆಗಿ ಮಾಡಿಕೊಂಡಿದ್ದಾರೆ.
ಸಾಂಪ್ರದಾಯಿಕ ರೀತಿಯ ಹೆಲ್ಮೆಟ್ ಬದಲಿಗೆ ಬೇಸ್ ಬಾಲ್ ಆಟದ ಕೀಪರ್ ಬಳಸುವ ಗ್ರಿಲ್ ಇರುವ ಹೆಲ್ಮೆಟ್ ಬಳಕೆ ಕ್ರಿಕೆಟ್ ಆಟದಲ್ಲಿ ವಿರಳ. ಆದರೆ, ಉತ್ತಮ ಉಕ್ಕಿನಿಂದ ಗ್ರಿಲ್ ಹೊಂದಿರುವ ಸುರಕ್ಷಿತವಾಗಿರುವ ಹೆಲ್ಮೆಟ್ ಗಳನ್ನು ವಿಕೆಟ್ ಕೀಪರ್ ಆಗಿ ದಿನೇಶ್ ಬಳಸಿದ್ದಲ್ಲದೆ, ಬ್ಯಾಟ್ ಮಾಡುವಾಗಲೂ ಹಗುರ ಹೆಲ್ಮೆಟ್ ಬಳಸಲು ಆರಂಭಿಸಿದರು. ವಿವಿಧ ರೀತಿಯ ಹವಾಮಾನಕ್ಕೆ ತಕ್ಕಂತೆ, ಕಾಲಕಾಲಕ್ಕೆ ಹೆಲ್ಮೆಟ್ ಆಕಾರ, ಗಾತ್ರ, ವಿನ್ಯಾಸ ಕೂಡಾ ಬದಲಾಗಿದೆ. ಬೌನ್ಸರ್ ಹೊಡೆದ ತಿಂದರೂ ಬ್ಯಾಟ್ಸ್ ಮನ್ ತಲೆ ಕಾಯಬಲ್ಲ ಹೆಲ್ಮೆಟ್ ಗಳಿಗಾಗಿ ಐಸಿಸಿ, ಬಿಸಿಸಿಐ ಸೇರಿದಂತೆ ಹಲವು ಕ್ರಿಕೆಟ್ ಮಂಡಳಿ ಮಾನದಂಡ ಕೂಡಾ ರೂಪಿಸಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಅಲ್ಲದೆ, ಐಪಿಎಲ್ ಪಂದ್ಯಗಳಲ್ಲೂ ಡಿಕೆ ಈ ರೀತಿ ಹೆಲ್ಮೆಟ್ ಬಳಸಿದ ಉದಾಹರಣೆಗಳಿವೆ. ಆದರೆ, ಈ ರೀತಿ ಹೆಲ್ಮೆಟ್ ಬಳಸುವ ಕ್ರಿಕೆಟರ್ಸ್ ವಿರಳ ಎನ್ನಬಹುದು. ಬೇಸ್ ಬಾಲ್ ನಲ್ಲಿ ಕೀಪರ್ ಮುಖ ರಕ್ಷಿಸಬಲ್ಲ ಹೆಲ್ಮೆಟ್ ಗಳನ್ನು ಕ್ರಿಕೆಟ್ ಪಂದ್ಯದ ವೇಳೆಯೂ ಬಳಸಲು ಅನುಮತಿ ಇದೆ.
ದಿನೇಶ್ ಕಾರ್ತಿಕ್ ಅಲ್ಲದೆ ಕೆಕೆಆರ್ ತಂಡದಲ್ಲಿದ್ದಾಗ ರಾಹುಲ್ ತ್ರಿಪಾಠಿ(ಸದ್ಯ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾರೆ) ಕೂಡಾ ಈ ರೀತಿ ಹೆಲ್ಮೆಟ್ ಧರಿಸಿದ್ದರು. ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಕುಮಾರ್ ಸಂಗಕ್ಕಾರ, ಇಂಗ್ಲೆಂಡ್ ಬ್ಯಾಟ್ಸ್ ಮನ್ ಜೇಮ್ಸ್ ಟೇಲರ್ ಹಾಗೂ ಮೈಕಲ್ ಕಾರ್ಬೆರಿ ಕೂಡಾ ಈ ರೀತಿ ಹೆಲ್ಮೆಟ್ ಧರಿಸಿ ಕಣಕ್ಕಿಳಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications