ಬಲಾಡ್ಯ ಸನ್ ರೈಸರ್ಸ್ ಕೆಳಗಿಳಿಸುವರೇ ರಾಯಲ್ ಚಾಲೆಂಜರ್ಸ್?

ಬೆಂಗಳೂರು, ಮೇ 17: ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ಮತ್ತು 7ನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮಧ್ಯೆ ಇಂದು ಐಪಿಎಲ್ 51ನೇ ಹಣಾಹಣಿ ನಡೆಯಲಿದೆ.
ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 10 ವಿಕೆಟ್ ಭರ್ಜರಿ ಜಯ ಗಳಿಸಿತ್ತು. ಇತ್ತ ಹೈದರಾಬಾದ್ ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್ ಸೋಲನುಭವಿಸಿತ್ತು.
ಐಪಿಎಲ್ ಈಗಿನ ಅಂಕಪಟ್ಟಿಯನ್ನು ಗಮನಿಸಿದರೆ ಹೈದರಾಬಾದ್ ನಿಜಕ್ಕೂ ಬಲಾಡ್ಯ ತಂಡವೆ. ಇಂದಿನ ಪಂದ್ಯದಲ್ಲಿ ಹೈದರಾಬಾದ್ ತಂಡ ಬೆಂಗಳೂರಿಗೆ ಪ್ರಬಲ ಸ್ಪರ್ಧೆ ನೀಡುವಲ್ಲಿ ಅನುಮಾನವಿಲ್ಲ. ಆದರೆ ಆರ್ಸಿಬಿಗೆ ಗೆಲುವು ಮರ್ಯಾದೆ ಪ್ರಶ್ನೆಯಾಗಿರುವುದರಿಂದ ಇಂದು ಆರ್ಸಿಬಿಯೂ ಗೆಲ್ಲುವೆಡೆಯಲ್ಲಿ ಶಕ್ತಿಮೀರಿ ಪ್ರಯತ್ನಿಸಬಲ್ಲದು.
ಒಟ್ಟು 12 ಪಂದ್ಯಗಳನ್ನು ಆಡಿರುವ ಹೈದರಾಬಾದ್ 9 ಗೆಲುವುಗಳೊಂದಿಗೆ 3 ಪಂದ್ಯಗಳನ್ನು ಸೋತಿದೆ. ಆದರೆ ಅಂಕಪಟ್ಟಿಯಲ್ಲಿ 18 ಅಂಕಗಳನ್ನು ಕಲೆ ಹಾಕಿರುವ ಹೈದರಾಬಾದ್ ತನಗಿಂತ ಕೆಳಗಿರುವ ಚೆನ್ನೈಗಿಂತಲೂ 2 ಹೆಚ್ಚುವರಿ ಅಂಕಗಳನ್ನು ಗಳಿಸಿದೆ.
ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹಣಾಹಣಿಯಲ್ಲಿ ಗೆಲುವು ಯಾರ ಕಡೆಗೆ ಜಾರಲಿದೆ ಎಂಬುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications