IPL 2023: ಹರಾಜಿಗೂ ಮುನ್ನ 10 ತಂಡಗಳ ಬಳಿ ಉಳಿದಿರುವ ಪರ್ಸ್ ಮೊತ್ತ

2023ರ 16ನೇ ಐಪಿಎಲ್ ಆವೃತ್ತಿಗೆ ಎಲ್ಲಾ 10 ತಂಡಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಹಿನ್ನೆಲೆ ಆಯಾ ಫ್ರಾಂಚೈಸಿಗಳು ತಮ್ಮ ಬಲಿಷ್ಠ ತಂಡಗಳನ್ನು ಕಟ್ಟಿಕೊಳ್ಳಲು ಕಿರು ಹರಾಜಿಗೆ ಸಜ್ಜಾಗಿವೆ.
ಐಪಿಎಲ್ 2023ರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದ್ದು, ಹೀಗಾಗಿ ಎಲ್ಲಾ ಹತ್ತು ಫ್ರಾಂಚೈಸಿಗಳಿಗೆ ಉಳಿಸಿಕೊಂಡ ಮತ್ತು ಕೈಬಿಟ್ಟ ಆಟಗಾರರ ಪಟ್ಟಿಯನ್ನು ನವೆಂಬರ್ 15ರೊಳಗೆ ಸಲ್ಲಿಸುವಂತೆ ಬಿಸಿಸಿಐ ಗಡುವು ನೀಡಿತ್ತು. ಇದೀಗ ಎಲ್ಲಾಲ ತಂಡಗಳು ತಮ್ಮ ಅಂತಿಮ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿವೆ.
ತಮ್ಮ ಆಟಗಾರರನ್ನು ಉಳಿಸಿಕೊಂಡ ಮತ್ತು ಬಿಡುಗಡೆಗೊಳಿಸಿದ ಬಳಿಕ ಎಲ್ಲಾ ಸ್ಥಾನಗಳನ್ನು 10 ತಂಡಗಳು ಭರ್ತಿ ಮಾಡಿಲ್ಲ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ 2023ರ ಮಿನಿ ಹರಾಜಿನಲ್ಲಿ ಎಲ್ಲಾಲ ಫ್ರಾಂಚೈಸಿಗಳು ಉಳಿದ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ಎದುರು ನೋಡುತ್ತಿವೆ.

ಪಂಜಾಬ್ ಮತ್ತು ಹೈದರಾಬಾದ್ ತಂಡಗಳಿಗೆ ಹೊಸ ನಾಯಕ
ಭಾರತ ರಾಷ್ಟ್ರೀಯ ತಂಡದ ಹಿರಿಯ ಬ್ಯಾಟರ್ ಶಿಖರ್ ಧವನ್ ಅವರು ಪಂಜಾಬ್ ಕಿಂಗ್ಸ್ ತಂಡದ ಹೊಸ ನಾಯಕನಾಗಿ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ಈ ಹಿಂದೆ ಮಯಾಂಕ್ ಅಗರ್ವಾಲ್ ನಾಯಕನಾಗಿದ್ದರು ಮತ್ತು ಅವರು ಬ್ಯಾಟಿಂಗ್ ಮೇಲೆ ಗಮನಹರಿಸುವ ಸಲುವಾಗಿ ನಾಯಕ ಹುದ್ದೆ ಹಿಂದೆ ಸರಿದಿದ್ದಾರೆ.
ಈ ವರ್ಷದ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಅವರನ್ನು ಕೈಬಿಟ್ಟಿದ್ದರಿಂದ ಹೊಸ ನಾಯಕನನ್ನು ಹುಡುಕಲಿದೆ. ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಅವರನ್ನು ಕೈಬಿಟ್ಟಿದ್ದರಿಂದ ಹರಾಜಿನಲ್ಲಿ ಪ್ರಮುಖ ಆಟಗಾರನಿಗೆ ಗಾಳ ಹಾಕಲಿದೆ.

ಆರ್‌ಸಿಬಿಗೆ ನಾಯಕ ಫಾಫ್ ಡು ಪ್ಲೆಸಿಸ್ ಮುಂದುವರಿಕೆ
ಇನ್ನುಳಿದಂತೆ ಸಿಎಸ್‌ಕೆ ತಂಡದ ನಾಯಕನಾಗಿ ಎಂಎಸ್ ಧೋನಿ, ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ರೋಹಿತ್ ಶರ್ಮಾ, ಲಕ್ನೋ ಸೂಪರ್ ಜೈಂಟ್ಸ್ ನಾಯಕನಾಗಿ ಕೆಎಲ್ ರಾಹುಲ್, ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಮುಂದುವರೆದಿದ್ದಾರೆ.
ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫಾಫ್ ಡು ಪ್ಲೆಸಿಸ್ ಅವರನ್ನು ಉಳಿಸಿಕೊಂಡಿದ್ದರಿಂದ, ಅವರೇ ನಾಯಕನಾಗಿ ಮುಂದುವರೆಯಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೊಮ್ಮೆ ರಿಷಭ್ ಪಂತ್ ಮೇಲೆ ನಂಬಿಕೆ ಇಟ್ಟಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್ ಮುಂದುವರೆಯಲಿದ್ದಾರೆ. ಕೇರಳದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರು ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಐಪಿಎಲ್‌ನ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ದೀಪಕ್ ಚಹಾರ್, ಗ್ಲೆನ್ ಮ್ಯಾಕ್ಸವೆಲ್ ಸೇರಿದಂತೆ ಅನೇಕ ಕ್ರಿಕೆಟಿಗರು ತಮ್ಮ ತಂಡಗಳಲ್ಲಿಯೇ ಉಳಿದುಕೊಂಡಿದ್ದಾರೆ.

ಪ್ರತಿ ಐಪಿಎಲ್ ಫ್ರಾಂಚೈಸಿ ಹೊಂದಿರುವ ಪರ್ಸ್ ಮೌಲ್ಯ
ಮುಂಬೈ ಇಂಡಿಯನ್ಸ್- 20.55 ಕೋಟಿ ರೂ.
ಚೆನ್ನೈ ಸೂಪರ್ ಕಿಂಗ್ಸ್ - 20.45 ಕೋಟಿ ರೂ.
ದೆಹಲಿ ಕ್ಯಾಪಿಟಲ್ಸ್ - 19.45 ಕೋಟಿ ರೂ.
ರಾಜಸ್ಥಾನ್ ರಾಯಲ್ಸ್ - 13.2 ಕೋಟಿ ರೂ.
ಲಕ್ನೋ ಸೂಪರ್ ಜೈಂಟ್ - 23.35 ಕೋಟಿ ರೂ.
ರಾಯಲ್ ಚಾಲೆಂಜರ್ಸ್ ಬೆಂಗಳೂರು - 8.75 ಕೋಟಿ ರೂ.
ಗುಜರಾತ್ ಟೈಟಾನ್ಸ್ - 19.25 ಕೋಟಿ ರೂ.
ಕೋಲ್ಕತ್ತಾ ನೈಟ್ ರೈಡರ್ಸ್ - 7.05 ಕೋಟಿ ರೂ.
ಪಂಜಾಬ್ ಕಿಂಗ್ಸ್ - 32.2 ಕೋಟಿ ರೂ.
ಸನ್‌ರೈಸರ್ಸ್ ಹೈದರಾಬಾದ್ - 42.25 ಕೋಟಿ ರೂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications