For Quick Alerts
ALLOW NOTIFICATIONS  
For Daily Alerts
 

ಭಾರತದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ ರಿಕಿ ಪಾಂಟಿಂಗ್

By Mahesh

ಮುಂಬೈ, ಮಾ.31: ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕ, ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಅವರು ಭಾರತದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ಉತ್ಸುಕರಾಗಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಅವರ ಸಲಹೆ ಮೇರೆಗೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ 8 ಟೂರ್ನಿ ಏ.8ರಿಂದ ಆರಂಭಗೊಳ್ಳಲಿದೆ. ಕೋಲ್ಕತ್ತಾ ಈಡನ್ ಗಾರ್ಡನ್ ನಲ್ಲಿ ರಾತ್ರಿ 8 ಗಂಟೆಗೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ ಎದುರಿಸಲಿದೆ.[ಐಪಿಎಲ್ 8: ಯುವರಾಜ್ ಸ್ಟಾರ್; ಶ್ರೇಯಸ್, ಕಾರ್ಯಪ್ಪ ಅಚ್ಚರಿ]

ಚೊಚ್ಚಲ ಪಂದ್ಯಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದ ತಯಾರಿ ಭರ್ಜರಿಯಾಗಿ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದೆ. ವಿಶ್ವಕಪ್ 2003 ಹಾಗೂ 2007ರಲ್ಲಿ ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ರಿಕಿ ಪಾಂಟಿಂಗ್ ಅವರು ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

Ricky Ponting starts new innings as Mumbai Indians coach

2013ರ ಐಪಿಎಲ್ ಚಾಂಪಿಯನ್ಸ್ ಮುಂಬೈ ತಂಡಕ್ಕೆ ಈ ಬಾರಿ ರೋಹಿತ್ ಶರ್ಮ ನಾಯಕರಾಗಿದ್ದಾರೆ. ಕರ್ನಾಟಕ ರಣಜಿ ಚಾಂಪಿಯನ್ ವೇಗಿಗಳಾದ ಆರ್ ವಿನಯ್ ಕುಮಾರ್ ಹಾಗೂ ಅಭಿಮನ್ಯು ಮಿಥುನ್ ಅವರು ಟ್ರೈನಿಂಗ್ ಕ್ಯಾಂಪಿನಲ್ಲಿ ಕಾಣಿಸಿಕೊಂಡ ಮೊದಲಿಗರಾಗಿದ್ದರು. ಮುಂಬೈ ರಣಜಿ ನಾಯಕ ಆದಿತ್ಯ ತಾರೆ, ಗುಜರಾತ್ ನಾಯಕ ಪಾರ್ಥೀವ್ ಪಾಟೀಲ್ ಅವರು ನಂತರ ತರಬೇತಿ ಶಿಬಿರ ಸೇರಿಕೊಂಡಿದ್ದಾರೆ. [ಐಪಿಎಲ್ 8 ಹರಾಜು ಸಂಪೂರ್ಣ ಅಪ್ದೇಟ್ಸ್]

ಏ.4ರಂದು ತಂಡದ ಆಯ್ಕೆಯಾಗಿ ಟ್ರಯಲ್ ಪಂದ್ಯವನ್ನು ನಡೆಸಲು ಉದ್ದೇಶಿಸಲಾಗಿದೆ. ಏ.5ರಂದು ಕೋಲ್ಕತ್ತಾಗೆ ತಂಡ ತೆರಳಲಿದೆ ಎಂದು ಮುಂಬೈ ಟೀಂ ಸಲಹೆಗಾರ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಮುಂಬೈ ತಂಡ ಹೀಗಿದೆ: ರೋಹಿತ್ ಶರ್ಮ (ನಾಯಕ), ಅಭಿಮನ್ಯು ಮಿಥುನ್, ಆದಿತ್ಯಾ ತಾರೆ, ಅಂಬಟಿ ರಾಯುಡು, ಹರ್ಭಜನ್ ಸಿಂಗ್, ಜಸ್ಪ್ರೀತ್ ಬರುವಾ, ಪಾರ್ಥೀವ್ ಪಟೇ, ಪ್ರಗ್ನಾನ್ ಓಜಾ, ವಿನಯ್ ಕುಮಾರ್, ಅಕ್ಷಯ್ ವಾಖರೆ, ಹಾರ್ದಿಕ್ ಪಾಂಡ್ಯ, ಜೆ ಸುಚಿತ್, ನಿತೀಶ್ ರಾಣಾ, ಪವನ್ ಸುಯಾಲ್, ಸಿದ್ದೇಶ್ ಲಾಡ್, ಶ್ರೇಯಸ್ ಗೋಪಾಲ್, ಉನ್ಮುಕ್ತ್ ಚಂದ್.

ವಿದೇಶಿ ಆಟಗಾರರು: ಅರೋನ್ ಫಿಂಚ್, ಐಡನ್ ಬ್ಲಿಜಾರ್ಡ್, ಜೋಶ್ ಹೇಜಲ್ ವುಡ್ (ಆಸ್ಟ್ರೇಲಿಯಾ), ಕೋರೆ ಆಂಡರ್ಸನ್, ಮಿಚೆಲ್ ಮೆಕ್ಲೆನಾಘನ್(ನ್ಯೂಜಿಲೆಂಡ್), ಕಿರೋನ್ ಪೊಲಾರ್ಡ್, ಲೆಂಡ್ಲ್ ಸಿಮನ್ಸ್ (ವೆಸ್ಟ್ ಇಂಡೀಸ್), ಲಸೀತ್ ಮಾಲಿಂಗ (ಶ್ರೀಲಂಕಾ), ಮರ್ಚಂಟ್ ಡಿ ಲಾಂಗ್ (ದಕ್ಷಿಣ ಆಫ್ರಿಕಾ)

Story first published: Wednesday, January 3, 2018, 10:02 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+