ಟೀಂ ಇಂಡಿಯಾ ಕೋಚ್ : ದ್ರಾವಿಡ್ ಪರ ಪಾಂಟಿಂಗ್ ಬ್ಯಾಟಿಂಗ್
ಮುಂಬೈ, ಮೇ 26: ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ಟೀಂ ಇಂಡಿಯಾದ ಹೊಸ ಕೋಚ್ ಹುದ್ದೆಗೆ ಅರ್ಜಿ ಆಹ್ವಾನ ಕರೆಯಲಾಗಿದೆ. ಈ ನಡುವೆ ಈ ಹುದ್ದೆಗೆ ರಾಹುಲ್ ದ್ರಾವಿಡ್ ಗಿಂತ ಸೂಕ್ತ ವ್ಯಕ್ತಿ ಬೇರೊಬ್ಬರಿಲ್ಲ ಎಂದು ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ರಾಹುಲ್ ದ್ರಾವಿಡ್ ಅವರು ಭಾರತ ಎ ತಂಡ, ಕಿರಿಯರ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿ ಯಶಸ್ಸು ಸಾಧಿಸಿದ್ದಾರೆ. ಅನೇಕ ಯುವ ಪ್ರತಿಭೆಗಳನ್ನು ಪರಿಚಯಿಸಿದ್ದಾರೆ.[ಬೌಲಿಂಗ್ ಕೋಚ್ ಆಗಿ ಜಹೀರ್ ನೇಮಿಸಿ: ಕುಂಬ್ಳೆ ಶಿಫಾರಸು]
ಟೀಂ ಇಂಡಿಯಾ ತಂಡದ ಮುಂದಿನ ಕೋಚ್ ಆಗಲು ರಾಹುಲ್ ದ್ರಾವಿಡ್ ಅವರೇ ಸೂಕ್ತ ವ್ಯಕ್ತಿ, ಅವರಿಗೆ ಅನುಭವ, ಆಟದ ಬಗ್ಗೆ ಅರಿವು, ಎಲ್ಲಾ ಆಟಗಾರರ ಜತೆ ಹೊಂದಾಣಿಕೆ ಚೆನ್ನಾಗಿದೆ ಎಂದು ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಕೋಚ್ ಆಯ್ಕೆ ವಿಷಯದಲ್ಲಿ ಸಚಿನ್ ತೆಂಡೂಲ್ಕರ್ , ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿರುವ ತ್ರಿಸದಸ್ಯ ಸಲಹಾ ಸಮಿತಿ ಸೂಚಿಸುವ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪರಿಗಣಿಸಲಿದೆ.[ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನ: ಕುಂಬ್ಳೆಗೆ ಮುಜುಗರ]
ಕೋಚ್ ಆಯ್ಕೆ ವಿಷಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯವೂ ತುಂಬಾ ಮುಖ್ಯವೆನಿಸುತ್ತದೆ. ಟೆಸ್ಟ್ ತಂಡಕ್ಕೆ ಸೂಕ್ತವಾದ ಕೋಚ್ ಆಯ್ಕೆ ಮಾಡುವುದಾದರೆ ದ್ರಾವಿಡ್ ಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಆದರೆ, ಈ ಹಿಂದೆ ಕೂಡಾ ರಾಷ್ಟ್ರೀಯ ತಂಡದ ಕೋಚ್ ಹುದ್ದೆ ಹುಡುಕಿಕೊಂಡು ಬಂದರೂ ದ್ರಾವಿಡ್ ಅವರು ಕಿರಿಯರ ತಂಡದ ಕೋಚ್ ಆಗಿ ಇರಲು ಬಯಸಿದ್ದರು. ಈಗ ಮನಸ್ಸು ಬದಲಾಯಿಸುವರೇ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications