ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನ: ಕುಂಬ್ಳೆಗೆ ಮುಜುಗರ
ಮುಂಬೈ, ಮೇ 25: ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರ ಹುದ್ದೆಗೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಹೊಸತಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಮೂಲಗಳ ಪ್ರಕಾರ, ಕುಂಬ್ಳೆಯವರ ಕಾರ್ಯವೈಖರಿ ಬಿಸಿಸಿಐ ಆಡಳಿತ ಮಂಡಳಿಗೆ ಹಿಡಿಸಿಲ್ಲವಾದ್ದರಿಂದ ಅವರನ್ನು ಕೋಚ್ ಹುದ್ದೆಯಲ್ಲಿ ಮುಂದುವರಿಸಲು ಬಿಸಿಸಿಐಗೆ ಇಷ್ಟವಿಲ್ಲ ಎಂದು ಹೇಳಲಾಗಿದೆ.[ಭಾರತ- ಪಾಕ್ ಪಂದ್ಯಕ್ಕೆ ಯುದ್ಧದ ಟಚ್- ಮಾಧ್ಯಮಗಳ ಹೈಪ್ : ಕೊಹ್ಲಿ]
ಹಾಲಿ ಕೋಚ್ ಹುದ್ದೆಯಲ್ಲಿರುವ ಅನಿಲ್ ಕುಂಬ್ಳೆಯವರನ್ನು ಮುಂದುವರಿಸುವ ಬಗ್ಗೆ ಇದ್ದ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದ್ದು, ಖುದ್ದು ಕುಂಬ್ಳೆಯವರಿಗೆ ಇದರಿಂದ ಮುಜುಗರವಾದಂತಾಗಿದೆ.

ಕಳೆದ ವರ್ಷ ಜೂ. 24ರಂದು ಅನಿಲ್ ಕುಂಬ್ಳೆಯವರು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಅವರ ಸೇವಾವಧಿ ಒಂದು ವರ್ಷದ್ದಾಗಿದ್ದು ಇದೇ ಜೂನ್ ನಲ್ಲಿ ಮುಕ್ತಾಯವಾಗಲಿದೆ.[ರವಿಚಂದ್ರನ್ ಅಶ್ವಿನ್ ಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪ್ರದಾನ]
ಆದರೆ, ಕೋಚ್ ಹುದ್ದೆಯಲ್ಲಿ ಅನಿಲ್ ಅವರನ್ನೇ ಮುಂದುವರಿಸಬೇಕೆಂಬುದು ಕೆಲವರ ಅಭಿಲಾಷೆಯೂ ಆಗಿತ್ತು. ಆದರೆ, ಇದು ಹುಸಿಯಾಗಿದೆ.
ಕೋಚ್ ಹುದ್ದೆಗಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿರುವ ಬಿಸಿಸಿಐ, ಮೇ 31ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.[ಸಚಿನ್ ಜೀವನಗಾಥೆ ನೋಡಿ ಸ್ಪೂರ್ತಿ ಪಡೆದ ಕೊಹ್ಲಿ ಅಂಡ್ ಟೀಂ]
ಕಳೆದ ವರ್ಷವೂ ಕುಂಬ್ಳೆಯವರ ನೇಮಕಾತಿ ವೇಳೆ ಕೋಚ್ ಹುದ್ದೆಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆಗ, ವಿಶ್ವದ ಘಟಾನುಘಟಿ ಮಾಜಿ ಕ್ರಿಕೆಟಿಗರುಗಳನ್ನು ಹಿಂದಿಕ್ಕಿದ್ದ ಅನಿಲ್ ಕುಂಬ್ಳೆ ಕೋಚ್ ಹುದ್ದೆಗೆ ಆಯ್ಕೆಯಾಗಿದ್ದರು.[ಜಹೀರ್ ಎಂಗೇಜ್ ಮೆಂಟ್ ಗೆ ಸಾಕ್ಷಿಯಾದ ಕ್ರಿಕೆಟ್ ತಾರೆಯರು]
ಮಾಜಿ ಕ್ರಿಕೆಟರ್ ಗಳಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ನೇತೃತ್ವದ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯು, ಕುಂಬ್ಳೆ ಸೇರಿದಂತೆ ನಾನಾ ಅಭ್ಯರ್ಥಿಗಳ ಸಂದರ್ಶನದ ತರುವಾಯ ಕುಂಬ್ಳೆಯವರನ್ನು ಕೋಚ್ ಆಗಿ ಆರಿಸಿತ್ತು. ಮುಂದಿನ ಕೋಚ್ ಅನ್ನೂ ಇದೇ ಸಮಿತಿಯು ಆರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications