ರಿಷಭ್ ಪಂತ್ ಇತ್ತೀಚಿನ ಪ್ರದರ್ಶನ ನೋಡಿದ್ರೆ, ಟಿ20 ತಂಡಕ್ಕೆ ಸೇರಿಸಿಕೊಳ್ಳಲಾಗದು: ವಾಸಿಂ ಜಾಫರ್

ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಇತ್ತೀಚಿನ ಪ್ರದರ್ಶನ ಕಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅದ್ರಲ್ಲೂ ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಮೂಲಕ ರಿಷಭ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ಕೆ.ಎಲ್ ರಾಹುಲ್ ಗಾಯಗೊಂಡು ಸರಣಿಯಿಂದ ಹೊರಬಿದ್ದ ಬಳಿಕ ದಿಢೀರ್ ನಾಯಕತ್ವ ಸ್ಥಾನಕ್ಕೇರಿದ ಪಂತ್ ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ್ದಾರೆ. ಇದಕ್ಕೂ ಐಪಿಎಲ್ 2022ರ ಸೀಸನ್‌ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಪರ ಉತ್ತಮ ಆಟ ಪ್ರದರ್ಶಿಸಲು ಪಂತ್ ವಿಫಲರಾದರು.
14 ಪಂದ್ಯಗಳಲ್ಲಿ ಕೇವಲ 1 ಅರ್ಧಶತಕ ದಾಖಲಿಸಿದ ರಿಷಭ್ ಪಂತ್ 151.78ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು 340 ರನ್ ಕಲೆಹಾಕಿದ್ದಾರೆ.

ಪಂತ್‌ಗೆ ಒಲಿದು ಬಂದ ನಾಯಕತ್ವದ ಅದೃಷ್ಟ
ರಿಷಭ್ ಪಂತ್ ದಕ್ಷಿಣ ಆಫ್ರಿಕಾ ವಿರುದ್ಧ ಘೋಷಣೆಯಾದ ನಾಯಕನಾಗಿರಲಿಲ್ಲ. ಆದ್ರೆ ಕೆ.ಎಲ್ ರಾಹುಲ್ ಸ್ನಾಯು ಸೆಳೆತದಿಂದಾಗಿ ಇಡೀ ಟೂರ್ನಿಯಿಂದಲೇ ಹೊರಬೀಳಬೇಕಾಯಿತು. ಇದ್ರಿಂದಾಗಿ ರಿಷಭ್ ಪಂತ್‌ಗೆ ಇದ್ದಕ್ಕಿದ್ದಂತೆ ನಾಯಕತ್ವ ಪಟ್ಟ ಕಟ್ಟಲಾಯಿತು.
ಆದ್ರೆ ನಾಯಕನಾಗಿ ಮೊದಲೆರಡು ಪಂದ್ಯ ಸೋತಿದ್ದ ಪಂತ್ ಮೂರನೇ ಪಂದ್ಯ ಜಯಿಸಿದ್ರೂ ಸಹ ವೈಯಕ್ತಿಕ ಪ್ರದರ್ಶನ ಮಾತ್ರ ಉತ್ತಮವಾಗಿಲ್ಲ. ಮೂರು ಪಂದ್ಯಗಳಲ್ಲಿ 29, 5, 6 ರನ್ ಕಲೆಹಾಕುವ ಮೂಲಕ ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ್ದಾರೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ಗೆ ಹೋಲಿಸಿದ್ರೆ, ಟಿ20 ಕ್ರಿಕೆಟ್‌ನಲ್ಲಿ ಪಂತ್ ಪ್ರದರ್ಶನ ಚೆನ್ನಾಗಿಲ್ಲ.
ಪತ್ನಿಯಿಂದ ಮೋಸಕ್ಕೊಳಗಾದ ಮೂವರು ಅಂತರಾಷ್ಟ್ರೀಯ ಕ್ರಿಕೆಟಿಗರ ಕಥೆ-ವ್ಯಥೆ

ರಿಷಭ್ ಪಂತ್ ಸ್ಕೋರ್ ಮಾಡಬೇಕಿದೆ, ಸ್ಥಿರ ಪ್ರದರ್ಶನವನ್ನೂ ತೋರಬೇಕಿದೆ!
ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಪ್ರಕಾರ ರಿಷಭ್ ಪಂತ್ ಸ್ಥಿರ ಪ್ರದರ್ಶನ ಮೂಲಕ ರನ್‌ಗಳನ್ನು ಕಲೆಹಾಕಬೇಕಿದೆ. ಏಕೆಂದರೆ ಕೆ.ಎಲ್ ರಾಹುಲ್ ರಿಟರ್ನ್ ಆದ ಬಳಿಕ ಕೀಪಿಂಗ್ ಮಾಡುವ ಸಾಮರ್ಥ್ಯವನ್ನು ಸಹ ಹೊಂದಿದ್ದಾರೆ. ಜೊತೆಗೆ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಟಿ20 ಕ್ರಿಕೆಟ್‌ಗೆ ಮರಳಿರುವ ಕಾರಣ ಸ್ಪರ್ಧೆ ತೀವ್ರವಾಗಿದೆ.
ಹೀಗಾಗಿ ಪಂತ್ ಸ್ಥಿರತೆಯನ್ನು ತೋರುವುದರ ಜೊತೆಗೆ ತನ್ನ ಕಳಪೆ ಫಾರ್ಮ್‌ನಿಂದ ಹೊರಬರಬೇಕಿದೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲಿ ರಿಷಭ್ ಪಂತ್ ಉತ್ತಮವಾಗಿ ಕಾಣಿಸಿಕೊಳ್ಳಲಿಲ್ಲ.
"ಕೆಎಲ್ ರಾಹುಲ್ ಅವರು ಹಿಂತಿರುಗಿದ ನಂತರ, ಅವನು(ಪಂತ್) ಬದಿಗೆ ಹೋಗುತ್ತಾನೆ. ಅವರು ವಿಕೆಟ್ ಕೀಪರ್ ಕೂಡ. ದಿನೇಶ್ ಕಾರ್ತಿಕ್ ಆಡುವುದು ಖಚಿತವಾದರೆ ಮತ್ತೊಮ್ಮೆ ವಿಕೆಟ್ ಕೀಪರ್ ಕೂಡ ಆಗಿದ್ದಾರೆ. ಆದ್ದರಿಂದ, ರಿಷಬ್ ಪಂತ್ ಇತ್ತೀಚೆಗೆ ಆಡಿದ ರೀತಿಯಲ್ಲಿ ನೋಡಿದ್ರೆ, ನಾನು ಆತನನ್ನ ಮತ್ತೆ ಖಚಿತವಾಗಿ ತಂಡಕ್ಕೆ ಕರೆಯುವುದಿಲ್ಲ, "ಎಂದು ಜಾಫರ್ ಇಎಸ್‌ಪಿಎನ್ ಕ್ರಿಕ್‌ಇನ್‌ಫೋಗೆ ತಿಳಿಸಿದರು.
Ind vs SA: 4ನೇ ಟಿ20 ಪಂದ್ಯದಲ್ಲಿ ಭಾರತದ ಆಡುವ 11ರ ಬಳಗ; ಅವೇಶ್ ಖಾನ್ ಬದಲು ಅರ್ಶ್‌ದೀಪ್?

ಟಿ20ಯಲ್ಲಿ ರಿಷಭ್ ಇನ್ನೂ ಉತ್ತಮ ಇನ್ನಿಂಗ್ಸ್ ಆಡಿಲ್ಲ
''ನಾನು ಈ ಹಿಂದೆಯೇ ತಿಳಿಸಿದಂತೆ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿರುವ ಇನ್ನಿಂಗ್ಸ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಕೆಲ ಇನ್ನಿಂಗ್ಸ್‌ಗಳನ್ನ ನೋಡಿದ್ದೇ ಆದಲ್ಲಿ, ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ ರಿಷಭ್ ಪಂತ್ ಉತ್ತಮ ಆಟವಾಡುವಲ್ಲಿ ವಿಫಲಗೊಂಡಿದ್ದಾರೆ. ಆದ್ದರಿಂದ ಆತ ಸ್ಥಿರತೆಯ ಆಟದೊಂದಿಗೆ ಹೆಚ್ಚು ರನ್ ಕಲೆಹಾಕಬೇಕಿದೆ'' ಎಂದು ವಾಸಿಂ ಜಾಫರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications