ಪತ್ನಿಯಿಂದ ಮೋಸಕ್ಕೊಳಗಾದ ಮೂವರು ಅಂತರಾಷ್ಟ್ರೀಯ ಕ್ರಿಕೆಟಿಗರ ಕಥೆ-ವ್ಯಥೆ

ಅಂತರಾಷ್ಟ್ರೀಯ ಕ್ರಿಕೆಟರ್ಸ್ ಅಂದಕೂಡಲೇ ನೇಮು-ಫೇಮು ಎರಡು ಹಿಂಬಾಲಿಸುತ್ತದೆ. ಕೋಟಿ ಕೋಟಿ ಸಂಭಾವನೆಯ ಜೊತೆಗೆ ಜಾಹೀರಾತುಗಳಿಂದ ಸಾಕಷ್ಟು ಹಣ ಹರಿದು ಬರುತ್ತದೆ. ಹೀಗಾಗಿಯೇ ಅವರ ಜೀವನ ಕೂಡ ಲಕ್ಸುರಿಯಾಗಿ ಇರುತ್ತದೆ.
ನಿರಂತರ ಕ್ರಿಕೆಟ್ ಸರಣಿಗಳು ನಡೆಯುತ್ತಿರುವುದರಿಂದ ಕ್ರಿಕೆಟರ್ಸ್ ವಿಶ್ವದಾದ್ಯಂತ ಪ್ರವಾಸ ಮಾಡುತ್ತಲೇ ಇರುತ್ತಾರೆ. ಇದರ ಜೊತೆಗೆ ವಿವಿಧ ಬ್ಲಾಕ್ ಬಸ್ಟರ್ ಜಾಹೀರಾತು ಒಪ್ಪಂದಗಳು ಲಭಿಸುತ್ತವೆ. ತನ್ನ ವೃತ್ತಿ ಜೀವನದಲ್ಲಿ ಅನೇಕ ರೆಕಾರ್ಡ್‌ಗಳನ್ನ ಮಾಡುತ್ತಾ ಸಾಗುವುದರ ಜೊತೆಗೆ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿರುತ್ತಾರೆ.
ಹೀಗೆ ಕ್ರಿಕೆಟ್ ವೃತ್ತಿ ಜೀವನವು ಒಂದೆಡೆಯಾದ್ರೆ ವೈಯಕ್ತಿಕ ಜೀವನವೂ ಸಹ ಸಾಕಷ್ಟು ಏರಿಳಿತಗಳನ್ನು ಕಂಡಿರುತ್ತದೆ. ದುರದೃಷ್ಟವಶಾತ್ ಕೆಲವು ಕ್ರಿಕೆಟಿಗರ ಜೀವನವು ಬೇಸರದಿಂದ , ಆಘಾತದಿಂದ ಕೂಡಿರುತ್ತದೆ. ಶಾಂತಿಯುತ ಜೀವನ ನಡೆಸಲು ಕೆಲವರಿಂದ ಸಾಧ್ಯವಾಗಿರುವುದಿಲ್ಲ. ಅದ್ರಲ್ಲೂ ಕೆಲವರು ತಮ್ಮ ಪತ್ನಿಯಿಂದಲೇ ಮೋಸಕ್ಕೊಳಗಾಗಿರುವ ಉದಾಹರಣೆಗಳಿವೆ.
ಹೀಗೆ ತನ್ನ ಪತ್ನಿಯಿಂದಲೇ ಮೋಸಕ್ಕೊಳಗಾಗಿ ಬೇರೆ ಮದುವೆಯಾದ ಮೂವರು ಕ್ರಿಕೆಟಿಗರ ಕುರಿತಾದ ಮಾಹಿತಿ ಈ ಕೆಳಗಿದೆ.

ದಿನೇಶ್ ಕಾರ್ತಿಕ್
ಟೀಂ ಇಂಡಿಯಾದ ಟೆಸ್ಟ್ ಕ್ರಿಕೆಟಿಗ ಮುರಳಿ ವಿಜಯ್ ನಿಕಿತಾ ವಂಜರಾರನ್ನು 2012ರ ಕೊನೆಯಲ್ಲಿ ಮದುವೆಯಾದ್ರು. ಈ ದಂಪತಿಗೆ ಪ್ರಸ್ತುತ ಐದು ವರ್ಷದ ಮಗ ಸಹ ಇದ್ದಾನೆ. ಆದ್ರೆ ಮುರಳಿ ವಿಜಯ್ ಈ ಮದುವೆಗೂ ಮುನ್ನ ತನ್ನ ತಮಿಳುನಾಡಿದ ಸಹ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದರು.
ಮುರಳಿ ವಿಜಯ್‌ರ ಪತ್ನಿ ಮೊದಲು ದಿನೇಶ್ ಕಾರ್ತಿಕ್‌ರ ಪತ್ನಿಯಾಗಿದ್ದರು. ಆದ್ರೆ ಮುರಳಿ ವಿಜಯ್ ಪತ್ನಿ ನಿಕಿತಾ ಮುರಳಿ ವಿಜಯ್ ಜೊತೆಗೆ ಸಂಬಂಧವಿಟ್ಟುಕೊಂಡಿರುವುದು ಬಹಿರಂಗಗೊಂಡ ಬಳಿಕ ಕಾರ್ತಿಕ್ ದಾಂಪತ್ಯ ಮುರಿದು ಬಿತ್ತು. 2012 ರಲ್ಲಿ ವಿಜಯ್ ಹಜಾರೆ ಟ್ರೋಫಿ ಪಂದ್ಯದ ಸಂದರ್ಭದಲ್ಲಿ, ಕಾರ್ತಿಕ್ ತನ್ನ ಪತ್ನಿಯೊಂದಿಗೆ ಮುರಳಿ ಅವರ ಸಂಬಂಧದ ಬಗ್ಗೆ ತಿಳಿದುಕೊಂಡರು.
ತಕ್ಷಣವೇ, ಕಾರ್ತಿಕ್ ತನ್ನ ವಿಚ್ಛೇದನವನ್ನು ಹಸ್ತಾಂತರಿಸಿದಾಗ ಅವಳು ಗಂಡು ಮಗುವಿಗೆ ಗರ್ಭಿಣಿಯಾಗಿದ್ದಳು. ಇದಾದ ಕೆಲವೇ ದಿನಗಳಲ್ಲಿ ನಿಕಿತಾ ಮುರಳಿ ವಿಜಯ್ ಅವರನ್ನು ವಿವಾಹವಾದರು. ಇದಾದ ಬಳಿಕ ಸಾಕಷ್ಟು ಹತಾಶರಾಗಿದ್ದ ಕಾರ್ತಿಕ್ ಜೀವನದಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಎಂಟ್ರಿಯಾದರು.
2013ರಲ್ಲಿ ದೀಪಿಕಾ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ದಿನೇಶ್ ಕಾರ್ತಿಕ್ 2015ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ದೀಪಿಕಾರನ್ನ ವರಿಸಿದರು.
ಯಾವ ನಟಿಗೂ ಕಡಿಮೆ ಇಲ್ಲ ಎನ್ನುವಂತಿವೆ ಮೊಹಮ್ಮದ್ ಶಮಿ ಪತ್ನಿ ವೈರಲ್ ಫೋಟೋಗಳು

ತಿಲಕರತ್ನೆ ದಿಲ್ಷಾನ್
ಶ್ರೀಲಂಕಾದ ಹಿರಿಯ ಕ್ರಿಕೆಟಿಗ, ಸ್ಫೋಟಕ ಓಪನರ್ ತಿಲಕರತ್ನೆ ದಿಲ್ಷಾನ್ ವೈಯಕ್ತಿಕ ಜೀವನದಲ್ಲೂ ಆಘಾತ ಸಂಭವಿಸಿದ್ದನ್ನು ನಾವಿಲ್ಲ ನೆನಪಿಸಿಕೊಳ್ಳಬಹುದು. ಟೀಂ ಇಂಡಿಯಾದ ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್ ರೀತಿಯಲ್ಲೇ ದಿಲ್ಷಾನ್ ಹಾಗೂ ಉಪುಲ್ ತರಂಗ ಕೂಡ ಒಟ್ಟಿಗೆ ಆಡಿದ್ದ ಆಟಗಾರರು.
ಏಕದಿನ ಕ್ರಿಕೆಟ್‌ನಲ್ಲಿ ಈ ಇಬ್ಬರು ಆಟಗಾರರು ಶ್ರೀಲಂಕಾದ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆರಂಭಿಕ ಜೋಡಿಗಳಲ್ಲಿ ಒಂದಾಗಿದ್ದರು.ಇವರಿಬ್ಬರು ಶ್ರೀಲಂಕಾಕ್ಕಾಗಿ ಹಲವಾರು ಸ್ಮರಣೀಯ ಜೊತೆಯಾಟದ ಮೂಲಕ ತಂಡದ ಗೆಲುವಿನಲ್ಲಿ ಪಾತ್ರಾಗಿದ್ದಾರೆ. ಆದ್ರೆ ಇವರಿಬ್ಬರ ವೈಯಕ್ತಿಕ ಜೀವನವೂ ಕೂಡ ಪಾಲುದಾರಿಕೆಯಿಂದ ಕೂಡಿದ್ದು ದುರಾದೃಷ್ಟಕರ. ಉಪುಲ್ ತರಂಗಾ ಅವರು ದಿಲ್ಷಾನ್ ಅವರ ಮಾಜಿ ಪತ್ನಿ ನೀಲಂಕಾ ವಿತಾನಗೆ ಅವರನ್ನು ವಿವಾಹವಾದರು.
ದಿಲ್ಷಾನ್ ಜೊತೆಗೆ ಕ್ರಿಕೆಟ್‌ನಲ್ಲಿ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದ ಉಪುಲ್ ತರಂಗ ಆತನ ಖಾಸಗಿ ಜೀವನದಲ್ಲೂ ಎಂಟ್ರಿ ಕೊಡಬಹುದು ಎಂದು ತಿಲಕರತ್ನೆ ದಿಲ್ಷಾನ್ ಭಾವಿಸಿರಲಿಲ್ಲ. ಇದರಿಂದಲೇ ಆತನ ಪತ್ನಿ ನಿಲಂಕಾಗೆ ವಿಚ್ಚೇದನ ನೀಡುವಂತಹ ಸಂದರ್ಭ ಸೃಷ್ಟಿಯಾಯಿತು.
ಪತ್ನಿ ನಿಲಂಕಾ ಮತ್ತು ದಿಲ್ಷಾನ್‌ಗೆ ರೆಸಾಡು ತಿಲಕರತ್ನೆ ಎಂಬ ಮಗನಿದ್ದಾನೆ. ಆದರೆ ವಿಚ್ಚೇದನ ಬಳಿಕ ಶ್ರೀಲಂಕಾದ ನಿವೃತ್ತ ಕ್ರಿಕೆಟಿಗ ಟೆಲಿಡ್ರಾಮ ನಟಿ ಮಂಜುಳಾ ತಿಲಿನಿ ಅವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಪುತ್ರಿಯರು ಮತ್ತು ಇಬ್ಬರು ಪುತ್ರರು ಇದ್ದಾರೆ.
ಜನಾಂಗೀಯ ಟೀಕೆ: ಖಡಕ್ ರಿಪ್ಲೇ ಕೊಟ್ಟ ಮ್ಯಾಕ್ಸ್ ವೆಲ್ ಗೆಳತಿ

ಬ್ರೆಟ್ ಲೀ
ಆಸ್ಟ್ರೇಲಿಯಾ ಕ್ರಿಕೆಟ್ ಕಂಡಂತಹ ಬ್ರೆಟ್ ಲೀ ಅತ್ಯಂತ ಮಾರಕ ಮತ್ತು ವೇಗದ ಬೌಲರ್‌ಗಳಲ್ಲಿ ಬ್ರೆಟ್ ಲೀ ಕೂಡ ಪ್ರಮುಖರಾಗಿದ್ದಾರೆ. ತನ್ನ ವೇಗದ ಜೊತೆಗೆ ವೇರಿಯೇಷನ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನ ಕಾಡುತ್ತಿದ್ದರು. ಅದೇನೇ ಇದ್ದರೂ, ಅವರ ವೈಯಕ್ತಿಕ ಜೀವನವು ಸುಗಮವಾಗಿರಲಿಲ್ಲ ಮತ್ತು ಸಾಕಷ್ಟು ಏರಿಳಿತಗಳನ್ನ ಒಳಗೊಂಡಿತ್ತು.
ನ್ಯೂ ಸೌತ್ ವೇಲ್ಸ್‌ನಲ್ಲಿ ಜನಿಸಿದ ಬ್ರೆಟ್‌ಲೀ 2006 ರಲ್ಲಿ ಎಲಿಜಬೆತ್ ಕೆಂಪ್ ಅವರನ್ನು ವಿವಾಹವಾದರು, ಅವರಿಗೆ ಒಬ್ಬ ಮಗನೂ ಸಹ ಇದ್ದನು. ಆದ್ರೆ ಮದುವೆಯಾಗಿ ಎರಡು ವರ್ಷಗಳ ಬಳಿಕ ಈ ಜೋಡಿ 2009ರಲ್ಲಿ ವಿಚ್ಚೇದನದ ಮೂಲಕ ಬೇರ್ಪಟ್ಟಿತು.
ಬ್ರೆಟ್ ಲೀ ದಾಂಪತ್ಯ ಜೀವನ ಮುರಿದು ಬೀಳುವುದಕ್ಕೆ ಕಾರಣ ಆಕೆಯ ಪತ್ನಿ ಪರಪುರುಷನ ಸಂಬಂಧ ಎಂದು ವದಂತಿಗಳು ಹರಿದಾಡಿದವು. ಲೀ ಪತ್ನಿ ಕೆಂಪ್ ಬ್ರಿಸ್ಬೇನ್‌ನಲ್ಲಿ ರಗ್ಬಿ ಆಟಗಾರನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವ್ಯಾಪಕವಾಗಿ ವರದಿಯಾಯಿತು. ಆದ್ರೆ ಈ ವಿಚಾರವನ್ನ ಬ್ರೆಟ್ ಲೀ ಎಲ್ಲಿಯೂ ಬಹಿರಂಗಪಡಿಸಲಿಲ್ಲ. ಆದ್ರೆ ಇದಾದ ಬಳಿಕ ಲೀ 2014 ರಲ್ಲಿ ಲಾನಾ ಆಂಡರ್ಸನ್ ಅವರನ್ನು ವಿವಾಹವಾದರು ಮತ್ತು ಅವರಿಗೆ ಇಬ್ಬರು ಮಕ್ಕಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications