For Quick Alerts
ALLOW NOTIFICATIONS  
For Daily Alerts
 

ರಿಷಭ್ ಪಂತ್ ಟೀಂ ಇಂಡಿಯಾದ ಬಹುದೊಡ್ಡ ಆಸ್ತಿ: ತಾಳ್ಮೆಯಿಂದ ಕಾಯಿರಿ ಎಂದ ಆಶಿಶ್ ನೆಹ್ರಾ

Rishabh pant

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್‌ ಟೀಂ ಇಂಡಿಯಾದ ಬಹುದೊಡ್ಡ ಆಸ್ತಿಯಾಗಿದ್ದು, ಆತ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲೂ ಮಿಂಚಲು ಜನರು ತಾಳ್ಮೆಯಿಂದ ಕಾಯಬೇಕು ಎಂದು ಭಾರತದ ಮಾಜಿ ಆಟಗಾರ ಹಾಗೂ ಗುಜರಾತ್ ಟೈಟನ್ಸ್ ತಂಡದ ಹೆಡ್ ಕೋಚ್ ಆಶಿಶ್ ನೆಹ್ರಾ ಹೇಳಿದ್ದಾರೆ.

ಭಾರತದ ಮೂರು ಫಾರ್ಮೆಟ್‌ನ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್‌ 24 ವರ್ಷದ ರಿಷಭ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಯಶಸ್ಸು ಸಾಧಿಸಿದ್ದಾರೆ. ಅನೇಕ ಬಾರಿ ಕುಸಿದ ತಂಡಕ್ಕೆ ಆಧಾರವಾಗಿರುವುದಲ್ಲದೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಲ್ಕು ಬಾರಿ ಮೂರಂಕಿ ಗಡಿದಾಟಿದ್ದಾರೆ. ಆದ್ರೆ ಇದೇ ರೀತಿಯ ಪ್ರದರ್ಶನವನ್ನ ರಿಷಭ್ ಪಂತ್ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲೂ ತೋರಬೇಕಿದೆ. ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಪಂತ್ ನಿರ್ಣಾಯಕ ಇನ್ನಿಂಗ್ಸ್‌ ಆಡಿ ತನ್ನ ಸಾಮರ್ಥ್ಯ ಪ್ರದರ್ಶಿಸಬೇಕೆಂದು ನೆಹ್ರಾ ಹೇಳಿದ್ದಾರೆ.

ಪಂತ್ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗ

ಪಂತ್ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗ

ರಿಷಭ್ ಪಂತ್ ಟೀಂ ಇಂಡಿಯಾದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗನಾಗಿದ್ದಾನೆ. ಆತ ರಾಷ್ಟ್ರೀಯ ತಂಡದ ಪರ ಕಷ್ಟದ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಭಾರತದ ಮಾಜಿ ಪೇಸರ್ ನೆಹ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ರಿಷಭ್ ಪಂತ್ ಅವರು ಪ್ರತಿಭಾವಂತ ಆಟಗಾರರಾಗಿರುವುದರಿಂದ ಅವರು ಯಾವ ರೀತಿಯ ಪ್ರತಿಭೆ ಎಂದು ನಾವು ಚರ್ಚಿಸಬೇಕಾಗಿಲ್ಲ. ಕಷ್ಟದ ಪರಿಸ್ಥಿತಿಯಲ್ಲಿ ಅವರು ಅದನ್ನು ತೋರಿಸಿದ್ದಾರೆ. ಆದ್ದರಿಂದ, ನಾವು ಸ್ವಲ್ಪ ತಾಳ್ಮೆಯಿಂದಿರಬೇಕು, ಅವರೊಂದಿಗೆ ನಮ್ಮ ತಾಳ್ಮೆಯನ್ನು ಇಟ್ಟುಕೊಳ್ಳಬೇಕು "ಎಂದು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಇತ್ತೀಚಿನ ಸಂವಾದದಲ್ಲಿ ನೆಹ್ರಾ ಹೇಳಿದರು.

ದಿನೇಶ್ ಕಾರ್ತಿಕ್‌ಗೆ ಹೊಗಳಿದ್ರೆ ಆಗಲ್ಲ, ತೆಗಳಿದ್ರೆ ಇಷ್ಟ: ಬಸು ಶಂಕರ್

ರಿಷಭ್ ಓಪನಿಂಗ್ ಬ್ಯಾಟಿಂಗ್ ಮಾಡಿ ಅವಕಾಶ ಸೃಷ್ಟಿಸಿದ್ದಾರೆ!

ರಿಷಭ್ ಓಪನಿಂಗ್ ಬ್ಯಾಟಿಂಗ್ ಮಾಡಿ ಅವಕಾಶ ಸೃಷ್ಟಿಸಿದ್ದಾರೆ!

ರಿಷಭ್ ಪಂತ್ ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸುವ ಮೂಲಕ ನಾಯಕನಿಗೆ ಹೆಚ್ಚು ಅವಕಾಶವನ್ನು ಸೃಷ್ಟಿಸಿದ್ದಾರೆ. ಕೆ.ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಓಪನರ್ ಆಗಿ ಕಣಕ್ಕಿಳಿಯುವ ಅವಕಾಶ ಒದಗಿಸಿದ್ದಾರೆ. ಈ ಕುರಿತಾಗಿ ನೆಹ್ರಾ ಭಾರತದ ಬ್ಯಾಟಿಂಗ್ ಆರ್ಡರ್‌ ಅವಕಾಶಗಳನ್ನ ತಿಳಿಸಿದ್ದಾರೆ.

"ಪಂತ್ ಅವರಂತಹ ವ್ಯಕ್ತಿ ಮೊದಲ ಆರು ಓವರ್‌ಗಳಲ್ಲಿ ಏನು ಮಾಡಬಹುದು ಎಂದು ನಿಮಗೆ ತಿಳಿದಿದೆ ಮತ್ತು ಫೀಲ್ಡ್ ನಿರ್ಬಂಧದೊಂದಿಗೆ, ಭವಿಷ್ಯದಲ್ಲಿ ಹೆಚ್ಚಿನ ಅನುಭವದೊಂದಿಗೆ, ರಿಷಬ್ ಪಂತ್ ಆಲ್ ರೌಂಡರ್ ಆಗಿದ್ದಾರೆ. ಅವರು ಯಾವುದೇ ಸ್ವರೂಪದಲ್ಲಿ ಭಾರತೀಯ ತಂಡಕ್ಕೆ ದೊಡ್ಡ ಆಸ್ತಿಯಾಗಿದ್ದಾರೆ " ಎಂದು ನೆಹ್ರಾ ಹೊಗಳಿಕೆಯ ಮಾತನಾಡಿದ್ದಾರೆ.

ಪಾಕ್ vs ಶ್ರೀಲಂಕಾ: ಪಾಕಿಸ್ತಾನ ಪರ ವಿಶೇಷ ಸಾಧನೆ ಮಾಡಿದ ನಾಯಕ ಬಾಬರ್ ಅಜಂ

ಪಂತ್ ಅಗ್ರೆಸ್ಸಿವ್ ಬ್ಯಾಟಿಂಗ್‌ನಿಂದಾಗಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ

ಪಂತ್ ಅಗ್ರೆಸ್ಸಿವ್ ಬ್ಯಾಟಿಂಗ್‌ನಿಂದಾಗಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ

ರಿಷಭ್ ಪಂತ್ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ ಎಂದು ಸಾಕಷ್ಟು ಬಾರಿ ಟೀಕೆಗೆ ಒಳಗಾಗಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ರಿಷಭ್ ಕೇವಲ 5 ರನ್‌ಗೆ ಔಟ್ ಆಗುವ ಮೂಲಕ ತಂಡಕ್ಕೆ ಹಿನ್ನಡೆ ಆಗುವಂತೆ ಬ್ಯಾಟಿಂಗ್ ಮಾಡಿದರು. ಆದ್ರೆ ರಿಷಭ್‌ರ ಅಗ್ರೆಸ್ಸಿವ್ ಬ್ಯಾಟಿಂಗ್ ಶೈಲಿಯು ಆತನಿಗೆ ಸ್ಥಿರ ಪ್ರದರ್ಶನ ನೀಡಲು ಕಷ್ಟವಾಗುತ್ತಿದೆ ಎಂದು ಆಶಿಶ್ ನೆಹ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಸತತವಾಗಿ ಪ್ರದರ್ಶನವನ್ನು ಮುಂದುವರಿಸುವುದು ತುಂಬಾ ಕಷ್ಟ. ರಿಷಬ್ ಪಂತ್ ಎಂತಹ ಆಟಗಾರ? ಆ ವಿಚಾರ ಬಂದಾಗ, ಅವರು ರನ್ ಗಳಿಸಬೇಕು ಮತ್ತು ಪ್ರತಿ ಫಾರ್ಮ್ಯಾಟ್‌ನಲ್ಲಿ ಆ ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡಬೇಕು ಎಂದು ನಾವು ಬಯಸುತ್ತೇವೆ. ಹೆಚ್ಚು ಸ್ಥಿರತೆಯು ಹೆಚ್ಚು ಸಮಯದೊಂದಿಗೆ ಮಾತ್ರ ಬರುತ್ತದೆ. ಏಕೆಂದರೆ ಅವನು ಯಾವ ರೀತಿಯ ಆಟಗಾರ, ಅವನು ಆಡುವ ರೀತಿ, ಸ್ಥಿರತೆಯನ್ನು ಪಡೆಯುವುದು ತುಂಬಾ ಕಷ್ಟ, "ಎಂದು ಅವರು ಹೇಳಿದರು.

ರಿಷಭ್ ಪಂತ್ ಬ್ಯಾಟಿಂಗ್ ಇಳಿಯುವ ಸಮಯವು ತುಂಬಾ ಕಡಿಮೆಯಿರುತ್ತದೆ. ಕಡಿಮೆ ಎಸೆತಕ್ಕೆ ಹೆಚ್ಚಿನ ರನ್‌ಗಳ ಅವಶ್ಯಕತೆ ಅಥವಾ ಹೆಚ್ಚು ವಿಕೆಟ್ ಉರುಳಿ ಒತ್ತಡದ ಸನ್ನಿವೇಶವು ಅವರ ಮುಂದಿರುತ್ತದೆ. ಹೀಗಿರುವಾಗ ಒಂದೇ ರೀತಿಯ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಲು ಸಾಧ್ಯವಾಗುವುದಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಆತನಿಗೆ ಹೆಚ್ಚಿನ ಸಮಯಾವಕಾಶ ಸಿಕ್ಕಿರುವ ಹಿನ್ನಲೆಯಲ್ಲಿ ಆತನ ಸಾಮರ್ಥ್ಯ ಏನು ಎಂಬುದು ಬಹಿರಂಗಗೊಂಡಿದೆ. ವೈಟ್ ಬಾಲ್ ಕ್ರಿಕೆಟ್‌ನಲ್ಲೂ ಆತನು ಮಿಂಚಲು ಕಾದು ನೋಡಿ ಎಂಬುದು ನೆಹ್ರಾ ಒಟ್ಟಾರೆ ಮಾತಿನ ಸಾರಾಂಶವಾಗಿದೆ.

Story first published: Sunday, July 17, 2022, 18:42 [IST]
Other articles published on Jul 17, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+