For Quick Alerts
ALLOW NOTIFICATIONS  
For Daily Alerts
 

ದಿನೇಶ್ ಕಾರ್ತಿಕ್‌ಗೆ ಹೊಗಳಿದ್ರೆ ಆಗಲ್ಲ, ತೆಗಳಿದ್ರೆ ಇಷ್ಟ: ಬಸು ಶಂಕರ್

Basu and DK

ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್‌ಗೆ ಹೊಗಳಿಕೆಯ ಮಾತನಾಡುವವರನ್ನ ಕಂಡ್ರೆ ಅಷ್ಟು ಇಷ್ಟವಾಗುವುದಿಲ್ಲ, ಆದ್ರೆ ಟೀಕಿಸುವವರನ್ನ ಇಷ್ಟಪಡುತ್ತಾರೆ ಎಂದು ಆರ್‌ಸಿಬಿ ಸ್ಟ್ರೆಂಥ್ ಅಂಡ್ ಕಂಡೀಷನಿಂಗ್ ಕೋಚ್ ಬಸು ಶಂಕರ್ ಹೇಳಿದ್ದಾರೆ.

ರಣವೀರ್ ಅಲ್ಲಾಬಾಡಿಯಾ ಅವರೊಂದಿಗಿನ ಸಂದರ್ಶನದಲ್ಲಿ ಬಸು, ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಮತ್ತು ಅವರು ವಿರುದ್ಧವಾದ ಮಾರ್ಗವನ್ನು ಹೇಗೆ ಇಷ್ಟಪಡುತ್ತಾರೆ ಎಂಬುದರ ಕುರಿತು ಮಾತನಾಡಿದ್ದಾರೆ. ಜೊತೆಗೆ ಕಾರ್ತಿಕ್‌ ತೆಗಳುಕುವಿಕೆಯನ್ನ ಇಷ್ಟಪಡುತ್ತಾರೆ ಎಂದಿದ್ದಾರೆ.

ಟೀಂ ಇಂಡಿಯಾಗೆ ಅದ್ಭುತ ಕಂಬ್ಯಾಕ್ ಮಾಡಿದ ದಿನೇಶ್ ಕಾರ್ತಿಕ್

ಟೀಂ ಇಂಡಿಯಾಗೆ ಅದ್ಭುತ ಕಂಬ್ಯಾಕ್ ಮಾಡಿದ ದಿನೇಶ್ ಕಾರ್ತಿಕ್

2006 ರಲ್ಲಿ ತಮ್ಮ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ದಿನೇಶ್ ಕಾರ್ತಿಕ್, ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗಾಗಿ ಅವರ ಗಮನಾರ್ಹ ಪ್ರದರ್ಶನದ ನಂತರ ಭಾರತ ತಂಡಕ್ಕೆ ಮರಳಿದರು. ಐಪಿಎಲ್‌ನಲ್ಲಿ ಅವರು 183.33 ಸ್ಟ್ರೈಕ್ ರೇಟ್‌ನಲ್ಲಿ 330 ರನ್ ಗಳಿಸಿದರು.

ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ ಬಳಿಕ ಕಾರ್ತಿಕ್, ಮೊದಲು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗವಹಿಸಿದರು. ಜೊತೆಗೆ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಕೂಡ ಭಾಗವಹಿಸಿದ್ರು.

ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ರಾಜ್‌ಕೋಟ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದ ಕಾರ್ತಿಕ್, ಈ ಸಾಧನೆ ಮಾಡಿದ ಭಾರತದ ಹಿರಿಯ ಕ್ರಿಕೆಟಿಗ ಎಂಬ ಸಾಧನೆಗೂ ಪಾತ್ರರಾದ್ರು.

Ind vs Eng 3rd ODI: ಟಾಸ್ ವರದಿ, ಪ್ಲೇಯಿಂಗ್ ಇಲೆವೆನ್‌ LIVE SCORE

ದಿನೇಶ್ ಕಾರ್ತಿಕ್‌ಗೆ ಹೊಗಳಿದ್ರೆ ಆಗಲ್ಲ, ತೆಗಳಿದ್ರೆ ಇಷ್ಟ

ದಿನೇಶ್ ಕಾರ್ತಿಕ್‌ಗೆ ಹೊಗಳಿದ್ರೆ ಆಗಲ್ಲ, ತೆಗಳಿದ್ರೆ ಇಷ್ಟ

ದಿನೇಶ್ ಕಾರ್ತಿಕ್‌ಗೆ ವಿರುದ್ಧವಾದ ಹೇಳಿಕೆಗಳು ಹೆಚ್ಚು ಇಷ್ಟವಾಗುತ್ತವೆ ಎಂದು ಟ್ರೈನರ್ ಬಸು ಶಂಕರ್ ಹೇಳಿದ್ದಾರೆ.

"ಅವನಿಗೆ ಬಹಳಷ್ಟು ನಂಬಿಕೆಗಳಿದೆ.. ಹಾಗಂತ ನಾನು ಮೂಢನಂಬಿಕೆಗಳು ಎಂದು ಹೇಳುವುದಿಲ್ಲ. ಅವನು ಅದನ್ನು 'ದೇಜಾ ವಸ್' ಎಂದು ಕರೆಯುತ್ತಾನೆ. ಅವನು ಮಾನಸಿಕವಾಗಿ ತುಂಬಾ ಬಲಿಷ್ಠವಾಗಿದ್ದಾನೆ, ಆದರೆ ಆಕಸ್ಮಿಕವಾಗಿ, ನೀವು ಅವನಿಗೆ 'ದಿನೇಶ್, ನೀವು ಉತ್ತಮವಾಗಿ ಆಡುತ್ತಿದ್ದೀರಿ. ನೀವು ಸೆಂಚುರಿ ಸ್ಕೋರ್ ಮಾಡುತ್ತೀರಿ, ಎಂದು ಹೇಳಿದ್ರೆ ಅವರು ನಿಮಗೆ ಹಲೋ ಎಂದು ಹೇಳುವುದನ್ನು ನಿಲ್ಲಿಸುತ್ತಾನೆ, "ಎಂದು ಶಂಕರ್ ಬಹಿರಂಗಪಡಿಸಿದರು.

ಅದೇ ನೀವು ಆತನನ್ನು ತೆಗಳಿದ್ರೆ, 'ನೀವು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿಲ್ಲ, ನೀವು ಇಂದು ಬೇಗ ಔಟ್ ಆಗಿದ್ದೀರ' ಎಂದೆಲ್ಲಾ ಹೇಳಿದ್ರೆ, ಅವನು ನಿನ್ನನ್ನು ತಬ್ಬಿಕೊಳ್ಳುತ್ತಾನೆ. ಏಕೆಂದರೆ ಆತನು ವಿರುದ್ಧವಾದ ಮಾರ್ಗವನ್ನು ಇಷ್ಟಪಡುತ್ತಾನೆ.

ನಾನು ಕೂಡ ಕೊಹ್ಲಿಯ ಅಸಂಖ್ಯಾತ ಅಭಿಮಾನಿಗಳಲ್ಲಿ ಒಬ್ಬಾತ, ಆತ ಫಾರ್ಮ್‌ಗೆ ಮರಳುವುದು ಖಂಡಿತ: ಕಮ್ರಾನ್ ಅಕ್ಮಲ್

ಬ್ಯಾಟಿಂಗ್‌ಗೂ ಮುನ್ನ ಒಬ್ಬರನ್ನ ನಿರಂತರ ಮಾತನಾಡಿಸುವ ಕಾರ್ತಿಕ್

ಬ್ಯಾಟಿಂಗ್‌ಗೂ ಮುನ್ನ ಒಬ್ಬರನ್ನ ನಿರಂತರ ಮಾತನಾಡಿಸುವ ಕಾರ್ತಿಕ್

ದಿನೇಶ್ ಕಾರ್ತಿಕ್ ಪ್ರತಿ ಬಾರಿಯು ಬ್ಯಾಟಿಂಗ್‌ ಮಾಡುವ ಮುನ್ನ ಒಬ್ಬರನ್ನ ಆರಿಸಿ ನಿರಂತರ ಮಾತನಾಡುವ ಹವ್ಯಾಸ ಮಾಡಿಕೊಂಡಿದ್ದಾರೆ. ಇದು ಸೂಪರ್‌ಸ್ಟೀಶನ್ ಎಂದು ನಾನು ಹೇಳುವುದಿಲ್ಲ ಎಂದು ಶಂಕರ್ ಬಸು ಹೇಳಿದ್ದಾರೆ.

"ಅವನು ಬ್ಯಾಟಿಂಗ್‌ಗೆ ಹೋಗುವ ಮೊದಲು, ಅವನು ಒಬ್ಬ ವ್ಯಕ್ತಿಯನ್ನು ಆರಿಸುತ್ತಾನೆ ಮತ್ತು ಅವನು ಅವನೊಂದಿಗೆ ಮಾತನಾಡುತ್ತಾನೆ. ಅವನು ತನ್ನ ದಿನಚರಿಗಳನ್ನು ಹೊಂದಿದ್ದು, ನಾನು ಅವನನ್ನು ತುಂಬಾ ತಮಾಷೆ ಮಾಡುತ್ತೇನೆ. ಅವನೊಂದಿಗೆ ಪ್ರವಾಸಕ್ಕೆ ಹೋಗುವುದು(ಟೀಂ ಇಂಡಿಯಾ ವಿದೇಶಿ ಸರಣಿ ವೇಳೆ) ತುಂಬಾ ಚೆನ್ನಾಗಿರುತ್ತದೆ'' ಎಂದು ಬಸು ದಿನೇಶ್‌ ಕಾರ್ತಿಕ್‌ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

Story first published: Sunday, July 17, 2022, 16:04 [IST]
Other articles published on Jul 17, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+