T20 World Cup 2022 : ಸೆಮಿಫೈನಲ್ ಪಂದ್ಯದಲ್ಲಿ ಆತನಿಗಿಂತ ಈತನ ಅವಶ್ಯಕತೆ ಇದೆ; ರವಿಶಾಸ್ತ್ರಿ

ಜಿಂಬಾಬ್ವೆ ವಿರುದ್ಧ ತಮ್ಮ ಕೊನೆಯ ಸೂಪರ್ 12 ಪಂದ್ಯವನ್ನು ಆಡುವ ಮೊದಲೇ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು ಮತ್ತು ಭಾನುವಾರದ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಮಣಿಸಿ ಗುಂಪು 2ರಲ್ಲಿ ಅಗ್ರಸ್ಥಾನಿಯಾಗಿ ಸೆಮಿಸ್‌ಗೆ ಲಗ್ಗೆ ಇಟ್ಟಿತು.
ನವೆಂಬರ್ 10ರಂದು ಅಡಿಲೇಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಬಹು ನಿರೀಕ್ಷಿತ ಸೆಮಿಫೈನಲ್‌ಗಾಗಿ ಭಾರತದ ಆಡುವ 11ರ ಬಳಗದಲ್ಲಿ ಆಡಲು ವಿಕೆಟ್ ಕೀಪರ್- ಬ್ಯಾಟರ್ ದಿನೇಶ್ ಕಾರ್ತಿಕ್ ಅವರಿಗಿಂತ ರಿಷಭ್ ಪಂತ್ ಅವರನ್ನು ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಬೆಂಬಲಿಸಿದ್ದಾರೆ.
ಭಾರತ ತಂಡವು ವಿಶ್ವಕಪ್‌ನಲ್ಲಿ ದಿನೇಶ್ ಕಾರ್ತಿಕ್‌ನೊಂದಿಗೆ ಹೋಗುತ್ತಿತ್ತು, ಆದರೆ ರೋಹಿತ್ ಶರ್ಮಾ ನಾಯಕತ್ವದ ತಂಡ ಮೆಲ್ಬೋರ್ನ್‌ನಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಅಂತಿಮ ಸೂಪರ್ 12 ಪಂದ್ಯಕ್ಕೆ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಿದರು.

5 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ವಿಕೆಟ್
ಸೆಮಿಫೈನಲ್‌ಗೆ ಮುಂಚಿತವಾಗಿ ರಿಷಭ್ ಪಂತ್‌ಗೆ ಅವಕಾಶ ನೀಡಲಾಯಿತು. ಆದರೆ ಯುವ ವಿಕೆಟ್‌ಕೀಪರ್-ಬ್ಯಾಟರ್ ಅದನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಜಿಂಬಾಬ್ವೆ ವಿರುದ್ಧ ಮಧ್ಯಮ ಓವರ್‌ಗಳಲ್ಲಿ ಬ್ಯಾಟಿಂಗ್‌ಗೆ ಬಂದು 5 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ಜಿಂಬಾಬ್ವೆಯ ಎಡಗೈ ಸ್ಪಿನ್ನರ್ ಸೀನ್ ವಿಲಿಯಮ್ಸ್ ಅವರ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಲು ಪ್ರಯತ್ನಿಸಿದರು ಮತ್ತು ಮಿಡ್-ವಿಕೆಟ್ ಡೀಪ್‌ನ ಬೌಂಡರಿ ಲೈನ್‌ನಲ್ಲಿ ರಿಯಾನ್ ಬರ್ಲ್ ಅವರು ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಕಡೆ ನಿರಾಸೆಯ ಮುಖ ಹೊತ್ತು ನಡೆದರು.

ರಿಷಭ್ ಪಂತ್ ಅವರನ್ನು ಸಮರ್ಥಿಸಿಕೊಂಡ ರಾಹುಲ್ ದ್ರಾವಿಡ್
ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನಂತರ ರಿಷಭ್ ಪಂತ್ ಅವರನ್ನು ಸಮರ್ಥಿಸಿಕೊಂಡರು. ಜಿಂಬಾಬ್ವೆ ವಿರುದ್ಧದ ಔಟಾದ ಬಗ್ಗೆ ನನಗೆ ಯಾವುದೇ ತೊಂದರೆಯಾಗಿಲ್ಲ ಎಂದ ಅವರು, ಇದು ಎಡಗೈ ಸ್ಪಿನ್ನರ್ ವಿರುದ್ಧ ರಿಷಭ್ ಪಂತ್ ಅವರ ಸರಿಯಾದ ಬ್ಯಾಟಿಂಗ್ ವಿಧಾನವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನ ಮೊದಲ ನಾಲ್ಕು ಪಂದ್ಯಗಳಲ್ಲಿ ಬೆಂಚು ಕಾಯಿಸಿದ್ದ ಪಂತ್ ಮೇಲೆ ತಂಡವು ಎಂದಿಗೂ ನಂಬಿಕೆಯನ್ನು ಕಳೆದುಕೊಂಡಿಲ್ಲ,'' ಎಂದು ರಾಹುಲ್ ದ್ರಾವಿಡ್ ತಿಳಿಸಿದರು.
ಅಂತಿಮ ಸೂಪರ್ 12ರ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಜಯಗಳಿಸಿದ ನಂತರ ಮಾತನಾಡಿದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಆಡುವ 11ರ ಬಳಗದಲ್ಲಿ ರಿಷಭ್ ಪಂತ್ ಉಪಸ್ಥಿತಿಯು ಇಂಗ್ಲೆಂಡ್‌ನ ಬೌಲಿಂಗ್ ಘಟಕದಲ್ಲಿನ ವೈವಿಧ್ಯತೆಯನ್ನು ಎದುರಿಸಲು ಭಾರತಕ್ಕೆ ಸಹಾಯ ಮಾಡುತ್ತದೆ. ವಿಶೇಷವಾಗಿ ಅಡಿಲೇಡ್‌ನಲ್ಲಿ ಚಿಕ್ಕ ಬೌಂಡರಿಗಳನ್ನು ಹೊಂದಿದೆ ಎಂದರು.

ಭಾರತಕ್ಕೆ ದೃಢವಾದ ಎಡಗೈ ಆಟಗಾರನ ಅಗತ್ಯವಿದೆ
"ದಿನೇಶ್ ಕಾರ್ತಿಕ್ ಒಬ್ಬ ಸುಂದರ ತಂಡದ ಆಟಗಾರ. ಆದರೆ ಇಂಗ್ಲೆಂಡ್ ಅಥವಾ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಬಂದಾಗ, ಅವರ ಬೌಲಿಂಗ್ ದಾಳಿಯನ್ನು ನೋಡಿದಾಗ, ನಿಮಗೆ ದೃಢವಾದ ಎಡಗೈ ಆಟಗಾರನ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಎಡಗೈ ಆಟಗಾರ ರಿಷಭ್ ಪಂತ್ ಅದನ್ನು ಮಾಡಬಹುದು ಮತ್ತು ಮ್ಯಾಚ್ ವಿನ್ನರ್," ಎಂದು ರವಿಶಾಸ್ತ್ರಿ ಹೇಳಿದರು.
"ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ತನ್ನ ಗೆಲುವಿನ ಪಂದ್ಯವನ್ನು ಆಡಿದ್ದರು. ದಿನೇಶ್ ಕಾರ್ತಿಕ್ ಅವರ ಬದಲಿ ನಾನು ರಿಷಭ್ ಪಂತ್ ಅವರೊಂದಿಗೆ ಹೋಗುತ್ತೇನೆ. ಈ ಹಿಂದೆ ಅವರು ಇಲ್ಲಿ ಆಡಿದ್ದರಿಂದ ಸೆಮಿಫೈನಲ್‌ನಲ್ಲಿ ಸಹಾಯವಾಗಲಿದೆ," ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟರು.

ದಿನೇಶ್ ಕಾರ್ತಿಕ್ 4 ಪಂದ್ಯಗಳಲ್ಲಿ 14 ರನ್
"ಭಾರತ ತಂಡದಲ್ಲಿ ಎಡಗೈ ಆಟಗಾರನ ಅಗತ್ಯವಿದೆ, ಅವರು ಅಪಾಯಕಾರಿಯಾಗಬಹುದು ಮತ್ತು ನೀವು ಅಗ್ರ ಕ್ರಮಾಂಕದಲ್ಲಿ 3 ಅಥವಾ 4 ವಿಕೆಟ್‌ಗಳನ್ನು ಕಳೆದುಕೊಂಡಿದ್ದರೂ ಸಹ ಕೊನೆಯ ಓವರ್‌ಗಳಲ್ಲಿ ಪಂದ್ಯವನ್ನು ಗೆಲ್ಲಬಹುದು," ಎಂದು ರವಿಶಾಸ್ತ್ರಿ ತಿಳಿಸಿದರು.
ಆಸ್ಟ್ರೇಲಿಯಾದಲ್ಲಿ ನಡೆದ ಮೆಗಾ ಟೂರ್ನಾಮೆಂಟ್‌ಗೆ ಮುನ್ನ ದಿನೇಶ್ ಕಾರ್ತಿಕ್ ಅವರು 2022ರ ಟಿ20 ವಿಶ್ವಕಪ್‌ನಲ್ಲಿ ಫಿನಿಶರ್ ಪಾತ್ರವನ್ನು ವಹಿಸಲು ಬೆಂಬಲಿಸಿದರು. ಆದರೆ, ದಿನೇಶ್ ಕಾರ್ತಿಕ್ 4 ಪಂದ್ಯಗಳಲ್ಲಿ 14 ರನ್ ಗಳಿಸುವ ಮೂಲಕ ನಿರೀಕ್ಷೆಗೆ ತಕ್ಕಂತೆ ಆಟವಾಡಲು ಸಾಧ್ಯವಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications