Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಖ್ತರ್ ವಿರುದ್ಧ ದೂರು ದಾಖಲಿಸಿದ್ದು ರಿಝ್ವಿ, ಪಿಸಿಬಿ ಅಲ್ಲ: ಬೋರ್ಡ್ ಸ್ಪಷ್ಟನೆ

‘Rizvi filed complaint against Akhtar, not PCB,’ clarifies board

ಲಾಹೋರ್, ಜೂನ್ 5: ಸೈಬರ್ ಕ್ರೈಮ್ ಯುನಿಟ್ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎಫ್‌ಐಎ) ಮೂಲಕ ಮಾಜಿ ವೇಗಿ ಶೋಯೆಬ್ ಅಖ್ತರ್ ವಿರುದ್ಧ ದೂರು ದಾಖಲಿಸಿದ್ದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಕಾನೂನು ಸಲಹೆಗಾರ ತಫಾಝುಲ್ ರಿಝ್ವಿ, ಪಿಸಿಬಿ ಅಲ್ಲ ಎಂದು ಪಾಕ್ ಬೋರ್ಡ್ ಸ್ಪಷ್ಟನೆ ನೀಡಿದೆ.

'ಲಾಹೋರ್‌ನ ಎಫ್‌ಐಎಯಿಂದ ಸಂಪೂರ್ಣವಾಗಿ ಅಸ್ಪಷ್ಟ, ಗ್ರಹಿಸಲಾಗದ, ನಿಖರವಲ್ಲದ ಮತ್ತು ಅಸ್ಪಷ್ಟ ನೋಟೀಸ್ ಅನ್ನು ಪಡೆದುಕೊಂಡಿದ್ದೇನೆ. ನನ್ನ ವಕೀಲ ಸಲ್ಮಾನ್ ನಿಯಾಜಿ ಅವರೊಂದಿಗೆ ಸರಿಯಾದ ಸಮಾಲೋಚನೆಯ ನಂತರ ನಾನು ನನ್ನ ಪ್ರತಿಕ್ರಿಯೆಯನ್ನು ನೀಡುತ್ತೇನೆ,' ಎಂದು ಅಖ್ತರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ರಿಝ್ವಿ ದೂರಿನ ಮೇರೆಗೆ ಅಖ್ತರ್‌ಗೆ ಸಮನ್ಸ್ ನೀಡಲಾಗಿದೆ. ಈ ವಿಚಾರದಲ್ಲಿ ಬೋರ್ಡ್ ಏನೂ ಮಾಡುವಂತಿಲ್ಲ ಎಂದು ಪಿಸಿಬಿ ವಕ್ತಾರ ಹೇಳಿದ್ದಾರೆ. ತಫಾಝುಲ್ ರಿಝ್ವಿ ತನ್ನ ವೈಯಕ್ತಿಕ ಸಾಮರ್ಥ್ಯದಲ್ಲಿ ಶೋಯೆಬ್ ಅಖ್ತರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಎಫ್‌ಐಎ ಮೂಲಕ ಬೋರ್ಡ್, ಅಖ್ತರ್ ಮೇಲೆ ಯಾವುದೇ ದೂರು ದಾಖಲಿಸಿಲ್ಲ,' ಎಂದು ವಕ್ತಾರ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದಲ್ಲಿ ಕಳುಹಿಸಿದ ನೋಟಿಸ್‌ಗೆ ಅಖ್ತರ್ ಅವರ ವಕೀಲರು ಪ್ರತಿಕ್ರಿಯಿಸಿದ್ದಾರೆ ಆದರೆ ಯುಕೆ ನಿಂದ ಕಳುಹಿಸಲಾದ ನೋಟಿಸ್‌ಗೆ ಉತ್ತರ ಇನ್ನೂ ಬಾಕಿ ಇದೆ ಎಂದು ರಿಜ್ವಿ ಹೇಳಿದ್ದಾರೆ. ತನ್ನ ವಿರುದ್ಧ ತಪ್ಪು ಆರೋಪಗಳನ್ನು ಮಾಡಿರುವುದಕ್ಕಾಗಿ ಅಖ್ತರ್ ವಿರುದ್ಧ ದೂರು ದಾಖಲಿಸಿಲಾಗಿದೆ ಎಂದು ರಿಝ್ವಿ ತಿಳಿಸಿದ್ದಾರೆ.

Story first published: Friday, June 5, 2020, 8:59 [IST]
Other articles published on Jun 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+