Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: 'ಇಂಡಿಯಾ ಲೆಜೆಂಡ್ಸ್‌'ಗೆ ವಿನಯ್ ಸೇರ್ಪಡೆ

Road Safety World Series 2021: Karnatakas Vinay Kumar joins India Legends squad

ಬೆಂಗಳೂರು: ನಿವೃತ್ತಿ ಘೋಷಿಸಿದ ಕ್ರಿಕೆಟ್‌ ದಂತಕತೆಗಳ ಆಟವನ್ನು ಮತ್ತೆ ನೋಡುವುದೆಂದರೆ ಅದು ರೋಡ್ ಸೇಪ್ಟಿ ವರ್ಲ್ಡ್ ಸೀರೀಸ್ ಮೂಲಕ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದ ಕರ್ನಾಟಕದ ಆಟಗಾರ ವಿನಯ್ ಕುಮಾರ್ ಕೂಡ ಈ ಬಾರಿಯ ರೋಡ್ ಸೇಫ್ಟಿ ಆವೃತ್ತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

'ದಾವಣಗೆರೆ ಎಕ್ಸ್‌ಪ್ರೆಸ್' ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಭಾರತದ ವೇಗಿ ವಿನಯ್ ಕುಮಾರ್, ಇಂಡಿಯಾ ಲೆಜೆಂಡ್ಸ್‌ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. 37ರ ಹರೆಯದ ವಿನಯ್ ಫೆಬ್ರವರಿ 26ರಂದು ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಜಿ ಆಟಗಾರ ವಿನಯ್ ಅಲ್ಲದೆ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್‌ ಹೀಗೆ ಭಾರತದ ಪ್ರಮುಖ ಆಟಗಾರರು ಇಂಡಿಯಾ ಲೆಜೆಂಡ್ಸ್‌ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಚ್ 5ರಿಂದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಆರಂಭಗೊಳ್ಳಲಿದ್ದು, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಭಾರತ, ಇಂಗ್ಲೆಂಡ್, ಬಾಂಗ್ಲಾದೇಶ ಹೀಗೆ ಒಟ್ಟಿಗೆ 6 ತಂಡಗಳು 2021ರ ಟೂರ್ನಿಯಲ್ಲಿ ಸ್ಪರ್ಧಿಸಲಿವೆ.

ಇಂಡಿಯಾ ಲೆಜೆಂಡ್ಸ್‌ ತಂಡ
ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಪ್ರಗ್ಯಾನ್ ಓಜಾ, ನೋಯೆಲ್ ಡೇವಿಡ್, ಮುನಾಫ್ ಪಟೇಲ್, ಇರ್ಫಾನ್ ಪಠಾಣ್, ಮನ್‌ಪ್ರೀತ್ ಗೋನಿ, ಯೂಸುಫ್ ಪಠಾಣ್, ನಮನ್ ಓಜಾ, ಎಸ್ ಬದ್ರಿನಾಥ್ ಮತ್ತು ವಿನಯ್ ಕುಮಾರ್.

Story first published: Thursday, March 4, 2021, 12:55 [IST]
Other articles published on Mar 4, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+