'ನಮ್ಮನ್ನು ನಿನ್ನ ತಂದೆ - ತಾಯಿಯಾಗಿ ಆರಿಸಿದ್ದಕ್ಕೆ ಧನ್ಯವಾದ' ಎನ್ನುತ್ತಾ ತಮ್ಮ ಮಗುವನ್ನು ಪರಿಚಯಿಸಿದ ಉತ್ತಪ್ಪ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ರಾಬಿನ್ ಉತ್ತಪ್ಪ ಮತ್ತು ಅವರ ಪತ್ನಿ ಶೀತಲ್ ಎರಡನೇ ಬಾರಿಗೆ ತಂದೆ ತಾಯಿ ಆದ ಖುಷಿಯಲ್ಲಿದ್ದಾರೆ. ರಾಬಿನ್ ಉತ್ತಪ್ಪ ಅವರ ಪತ್ನಿ ಶೀತಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕ್ರಿಕೆಟಿಗ ತಮ್ಮ ಪುಟ್ಟ ಕಂದಮ್ಮನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.
ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಇಂದು ( ಜುಲೈ 14 ) ತಮ್ಮ ನೂತನ ಮಗುವಿನ ಜನನದ ವಿಷಯವನ್ನು ತುಂಬಾ ಸಂತಸದಿಂದ ವ್ಯಕ್ತಪಡಿಸಿರುವ ರಾಬಿನ್ ಉತ್ತಪ್ಪ ತಮ್ಮ ಮುದ್ದು ಮಗಳನ್ನು ಹಿಡಿದು ಪೋಸ್ ನೀಡಿದ್ದರೆ, ಇದೇ ಚಿತ್ರದಲ್ಲಿ ರಾಬಿನ್ ಉತ್ತಪ್ಪ ಪುತ್ರ ಹಾಗೂ ಪತ್ನಿ ಶೀತಲ್ ಕೂಡ ಇದ್ದಾರೆ. ಹೀಗೆ ತಮ್ಮ ಕುಟುಂಬಕ್ಕೆ ನೂತನ ಸದಸ್ಯೆಯ ಆಗಮನವಾಗಿರುವ ವಿಷಯವನ್ನು ಬಹಳ ವಿಭಿನ್ನವಾಗಿ ರಾಬಿನ್ ಉತ್ತಪ್ಪ ಈ ಕೆಳಕಂಡಂತೆ ಹಂಚಿಕೊಂಡಿದ್ದಾರೆ.
ಮನಮುಟ್ಟುವ ಸಾಲುಗಳನ್ನು ಬರೆದು ತಮ್ಮ ಮಗುವಿನ ಹೆಸರನ್ನು ರಿವೀಲ್ ಮಾಡಿದ ಉತ್ತಪ್ಪ
ರಾಬಿನ್ ಉತ್ತಪ್ಪ ತಮ್ಮ ಎರಡನೇ ಮಗುವಿಗೆ ಟ್ರಿನಿಟಿ ಥಿಯಾ ಉತ್ತಪ್ಪ ಎಂದು ನಾಮಕರಣ ಮಾಡಿದ್ದಾರೆ. ತಾವು ಹಂಚಿಕೊಂಡಿರುವ ಚಿತ್ರದೊಂದಿಗೆ 'ತುಂಬಿರುವ ಹೃದಯದೊಂದಿಗೆ ನಮ್ಮ ಜೀವನಕ್ಕೆ ಆಗಮಿಸಿರುವ ನಮ್ಮ ಪುಟ್ಟ ದೇವತೆಯನ್ನು ಪರಿಚಯಿಸಲು ಇಷ್ಟಪಡುತ್ತೇವೆ. ಟ್ರಿನಿಟಿ ಥಿಯಾ ಉತ್ತಪ್ಪ ಅವರನ್ನು ಪರಿಚಯಿಸುತ್ತಿದ್ದೇವೆ. ನಿನ್ನನ್ನು ಈ ಜಗತ್ತಿಗೆ ಪರಿಚಯಿಸಲು ನಮ್ಮನ್ನು ಆರಿಸಿದ್ದಕ್ಕಾಗಿ ಹಾಗೂ ನಿನ್ನ ಪೋಷಕರಾಗಿ ಮತ್ತು ಸಹೋದರನಾಗಿ ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಕೃತಜ್ಞರಾಗಿರುತ್ತೇವೆ' ಎಂದು ರಾಬಿನ್ ಉತ್ತಪ್ಪ ಬರೆದುಕೊಂಡಿದ್ದಾರೆ.

ಉತ್ತಪ್ಪ ಪೋಸ್ಟ್‌ಗೆ ಮೆಚ್ಚುಗೆಯ ಸುರಿಮಳೆ
ಉತ್ತಪ್ಪ ತಮ್ಮ ಮಗಳನ್ನು ತುಂಬಾ ವಿಭಿನ್ನವಾಗಿ ಪರಿಚಯಿಸಿದ್ದಾರೆ. ತಾನು ಮತ್ತು ತನ್ನ ಪತ್ನಿಯನ್ನು ತಂದೆ ತಾಯಿಯಾಗಿ ಆರಿಸಿಕೊಂಡಿದ್ದಕ್ಕೆ ಹಾಗೂ ತಮ್ಮ ಮಗನನ್ನು ಸಹೋದರನನ್ನಾಗಿ ಆರಿಸಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ರಾಬಿನ್ ಉತ್ತಪ್ಪ ತಮ್ಮ ಮಗಳ ಕುರಿತಾಗಿ ಬರೆದಿರುವ ಸಾಲುಗಳಿಗೆ ನೆಟ್ಟಿಗರು ಮನಸೋತಿದ್ದಾರೆ.

ಕ್ರಿಕೆಟಿಗರು ಮತ್ತು ಸೆಲೆಬ್ರಿಟಿಗಳ ಶುಭಾಶಯ
ರಾಬಿನ್ ಉತ್ತಪ್ಪ ಅವರ ಈ ಹೃದಯಸ್ಪರ್ಶಿ ಪೋಸ್ಟ್‌ಗೆ ಹಲವಾರು ಕ್ರಿಕೆಟಿಗರು ಹಾಗೂ ಸೆಲೆಬ್ರಿಟಿಗಳು ಕಾಮೆಂಟ್ ಮಾಡುವ ಮೂಲಕ ರಾಬಿನ್ ಉತ್ತಪ್ಪ ಮತ್ತು ಪತ್ನಿ ಶೀತಲ್ ಅವರಿಗೆ ಶುಭ ಕೋರಿದ್ದಾರೆ. ಕೆಎಲ್ ರಾಹುಲ್ ಹೃದಯದ ಇಮೋಜಿಗಳನ್ನು ಕಮೆಂಟ್ ಮಾಡಿದ್ದರೆ, ಪಿಯೂಷ್ ಚಾವ್ಲಾ, ಇರ್ಫಾನ್ ಪಠಾಣ್ ಮತ್ತು ಧರ್ಮೇಂದ್ರ ಜಡೇಜಾ ಶುಭಾಶಯಗಳು ಎಂದು ಕಾಮೆಂಟ್ ಮಾಡಿದ್ದಾರೆ. ಕ್ರೀಡಾಪಟು ತನ್ವಿ ಶಾ ಮತ್ತು ಖ್ಯಾತ ಚಲನಚಿತ್ರ ನಟಿ ಹನ್ಸಿಕಾ ಮೊಟ್ವಾನಿ ಕೂಡ ರಾಬಿನ್ ಉತ್ತಪ್ಪ ದಂಪತಿಗಳಿಗೆ ಶುಭ ಕೋರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications