2023ರ ವಿಶ್ವಕಪ್‌ಗೆ ಕುಲದೀಪ್-ಚಹಾಲ್ ನಡುವೆ ಯಾರು ಆಯ್ಕೆ?; ರಾಬಿನ್ ಉತ್ತಪ್ಪ ನೀಡಿದ್ರು ಉತ್ತರ!
2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಇನ್ನು ಕೇವಲ ಎರಡು ತಿಂಗಳಿಗಿಂತ ಕಡಿಮೆ ಸಮಯ ಬಾಕಿ ಇದೆ. ಐಸಿಸಿ ಪಂದ್ಯಾವಳಿ ಹತ್ತಿರವಾಗುತ್ತಿದ್ದಂತೆ, ಭಾರತದ ತಂಡದ ಆಯ್ಕೆಯ ಬಗ್ಗೆ ಚರ್ಚೆಯು ಹೆಚ್ಚಾಗುತ್ತಿದೆ.
ಇನ್ನು ಗಾಯಗೊಂಡಿರುವ ಕೆಲವು ಆಟಗಾರರು ಚೇತರಿಸಿಕೊಳ್ಳುತ್ತಿದ್ದು, ಭಾರತ ತಂಡಕ್ಕೆ ಒಳ್ಳೆಯ ಸುದ್ದಿ ನೀಡುತ್ತಿದ್ದರೆ, ಅನೇಕ ಯುವ ಆಟಗಾರರು ಕೂಡ ಮೆಗಾ ಟೂರ್ನಿಗಾಗಿ ಸ್ಪರ್ಧೆಯಲ್ಲಿದ್ದಾರೆ. ಇದೆಲ್ಲದರ ನಡುವೆ, ಭಾರತದ ಸ್ಪಿನ್ ಸಂಯೋಜನೆಯ ಬಗ್ಗೆ ಚರ್ಚೆ ಕೂಡ ದೊಡ್ಡದಾಗಿದೆ.
2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ 12 ವರ್ಷಗಳ ನಂತರ ಭಾರತ ಆತಿಥ್ಯ ವಹಿಸುತ್ತಿದ್ದು, ಟೂರ್ನಿಯಲ್ಲಿ ಸ್ಪಿನ್ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೇಳಬಹುದು.

ಭಾರತದ ಸಂಭಾವ್ಯ ಸ್ಪಿನ್ ಸಂಯೋಜನೆ ಮಾತನಾಡುವುದಾದರೆ, ಕುಲದೀಪ್ ಯಾದವ್ ಅಥವಾ ಯುಜ್ವೇಂದ್ರ ಚಹಾಲ್ ಜೋಡಿ ಸದ್ಯ ಆಯ್ಕೆ ಸಮಿತಿ ಮುಂದಿದೆ. ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಿ, ಒಬ್ಬರನ್ನು ಕೈಬಿಡುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿಭಿನ್ನ ಅಭಿಪ್ರಾಯ ಹೊರಹಾಕಿದ್ದಾರೆ.
ಈ ಇಬ್ಬರೂ ಸ್ಪಿನ್ನರ್‌ಗಳು 'ಸಮಾನವಾಗಿ ಅಪಾಯಕಾರಿ' ಆಗಿರುವುದರಿಂದ ಏಕದಿನ ವಿಶ್ವಕಪ್‌ಗೆ 'ಕುಲ್ಚಾ' ಜೋಡಿಯನ್ನು ಆಯ್ಕೆ ಮಾಡಬೇಕು ಎಂದು ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.
"ನಾನು 2023ರ ಏಕದಿನ ವಿಶ್ವಕಪ್‌ಗೆ ಯುಜ್ವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಇಬ್ಬರನ್ನೂ ಆಯ್ಕೆ ಮಾಡುತ್ತೇನೆ. ಕುಲದೀಪ್ ಯಾದವ್ ಹೆಚ್ಚು ಸುಧಾರಿತ ಬೌಲರ್ ಮತ್ತು ತಂಡದಲ್ಲಿ ಅವರನ್ನು ಆಯ್ಕೆ ಮಾಡಲು ನಾನು ಇಷ್ಟಪಡುತ್ತೇನೆ. ಏಕೆಂದರೆ ಅವರು ಅವಕಾಶ ಪಡೆದಾಗಲೆಲ್ಲಾ ಉತ್ತಮ ಪ್ರದರ್ಶನ ನೀಡಿದ್ದಾರೆ," ಎಂದರು.
"ಯುಜ್ವೇಂದ್ರ ಚಹಾಲ್ ಕೂಡ ಆಯ್ಕೆಯಾಗಬೇಕು ಎಂದು ನಾನು ಭಾವಿಸುತ್ತೇನೆ. ಕುಲದೀಪ್ ಮತ್ತು ಚಹಾಲ್ ಸಮಾನ ಅಪಾಯಕಾರಿ ಸ್ಪಿನ್ನರ್‌ಗಳು. ಕುಲದೀಪ್ ಮತ್ತು ಚಹಾಲ್ ಅವರಿಗೆ ವಿಶ್ವಕಪ್‌ನಲ್ಲಿ ಅವಕಾಶಗಳನ್ನು ನೀಡಬೇಕು," ಎಂದು ಭಾರತದ ಮಾಜಿ ಬ್ಯಾಟರ್ ರಾಬಿನ್ ಉತ್ತಪ್ಪ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು.

ಆಗಸ್ಟ್ 30ರಿಂದ ಆರಂಭವಾಗುವ ಏಷ್ಯಾ ಕಪ್ ಪಂದ್ಯಾವಳಿಯನ್ನು ಪ್ರಾರಂಭಿಸುವ ಮೊದಲು ಭಾರತ ತಂಡವು ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.
ಆ ಬಳಿಕ ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆತಿಥ್ಯ ವಹಿಸಲಿದೆ ಮತ್ತು ನಂತರ, ಅಕ್ಟೋಬರ್ 5ರಿಂದ ತವರಿನಲ್ಲೇ ನಡೆಯುವ ಏಕದಿನ ವಿಶ್ವಕಪ್ ಪಂದ್ಯಾವಳಿ ಪ್ರಾರಂಭವಾಗಲಿದೆ.
ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಶ್‌ದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.
ಐರ್ಲೆಂಡ್ ವಿರುದ್ಧದ ಟಿ20 ಸರಣಿ ವೇಳಾಪಟ್ಟಿ
ಆಗಸ್ಟ್ 18: ಮೊದಲ ಟಿ20 ಪಂದ್ಯ - ವಿಲೇಜ್ ಗ್ರೌಂಡ್, ಮಲಾಹೈಡ್
ಆಗಸ್ಟ್ 20: ಎರಡನೇ ಟಿ20 ಪಂದ್ಯ - ವಿಲೇಜ್ ಗ್ರೌಂಡ್, ಮಲಾಹೈಡ್
ಆಗಸ್ಟ್ 23: ಮೂರನೇ ಟಿ20 ಪಂದ್ಯ - ವಿಲೇಜ್ ಗ್ರೌಂಡ್, ಮಲಾಹೈಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications