ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ರೆನ್ ಹೆಲ್ತ್‌ ಇನಿಶಿಯೇಟಿವ್ ಕಾರ್ಯಕ್ರಮದ ರಾಯಭಾರಿಯಾಗಿ ರಾಬಿನ್ ಉತ್ತಪ್ಪ ನೇಮಕ

Robin uttappa appointed As brand ambassador of brain health initiative programme

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೇಂದ್ರ ಸರ್ಕಾರದ ನೀತಿ ಆಯೋಗ ಮತ್ತು ನಿಮಾನ್ಸ್ ಇವರ ಸಹಯೋಗದ ನೂತನ ಕಾರ್ಯಕ್ರಮವಾದ ಬ್ರೆನ್ ಹೆಲ್ತ ಇನಿಶಿಯೇಟಿವ್ ರಾಯಭಾರಿಯಾಗಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರನ್ನು ನೇಮಕ ಮಾಡಲಾಗಿದೆ.

ಒಟ್ಟು ಮೂರು ವರ್ಷದ ಅವಧಿಯ ವರೆಗೆ ರಾಬಿನ್ ಉತ್ತಪ್ಪ ಅವರನ್ನ ಈ ಕಾರ್ಯಕ್ರಮದ ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ.

ಮೆದುಳಿನ ಅಸ್ವಸ್ಥತೆಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಮಾಜಕ್ಕೆ ಮತ್ತು ಅರೋಗ್ಯ ವ್ಯವಸ್ಥೆಗಳ ಸುಸ್ಥಿರತೆಗೆ ಸವಾಲಾಗಿದ್ದು, ಈ ಬಗ್ಗೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆಯುವುದರಿಂದ ಮರಣ ದರ ಮತ್ತು ಅಂಗವೈಕಲ್ಯವನ್ನು ತಗ್ಗಿಸಲು ಸಹಾಯಕವಾಗುವುದು. ನರ ರೋಗವಿರುವ 60ರಿಂದ 90 ಪ್ರತಿಶತ ಜನರು ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯದೆ ಬಳಲುತ್ತಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Dinesh Karthik ಕ್ರಿಕೆಟ್ ಕೆರಿಯರ್ ಗೆ ಧೋನಿ ವಿಲನ್ ಆಗಿ ಕಾಡಿದ್ದು ಹೇಗೆ? | Oneindia kannada

ಪ್ರಸ್ತುತದ ಸಾಮಾನ್ಯ ನರರೋಗ ಮತ್ತು ಮಾನಸಿಕ ಅಸ್ವಸ್ಥತೆಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಮೆದುಳಿನ ಅಸ್ವಸ್ಥತೆ ಕುರಿತು ಆರಂಭಿಕ ಹಂತದಲ್ಲಿ ತಪಾಸನೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಾಯಕವಾಗಲಿದೆ. ರಾಜ್ಯಾದ್ಯಂತ ದುರ್ಬಲ ಜನರ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಬಿನ್ ಉತ್ತಪ್ಪ ಅವರನ್ನು ಸಂಭಾವನೆ ರಹಿತ ರಾಯಬಾರಿಯನ್ನಾಗಿ ಸರ್ಕಾರ ನೇಮಿಸಿದೆ.

Story first published: Saturday, April 9, 2022, 16:32 [IST]
Other articles published on Apr 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X