ರೋಜರ್ ಬಿನ್ನಿಗೆ BCCI ಅಧ್ಯಕ್ಷ ಪಟ್ಟ? ಕಾರ್ಯದರ್ಶಿಯಾಗಿ ಮುಂದುವರಿಯಲಿರುವ ಜಯ್ ಷಾ

1983ರ ಐಸಿಸಿ ವಿಶ್ವಕಪ್ ವಿಜೇತ ತಂಡದ ಸದಸ್ಯ ಹಾಗೂ ಪ್ರಸ್ತುತ ಕೆಎಸ್‌ಸಿಎ ಅಧ್ಯಕ್ಷರಾಗಿರುವ ರೋಜರ್ ಬಿನ್ನಿ ಮುಂದಿನ ಬಿಸಿಸಿಐ ಅಧ್ಯಕ್ಷನಾಗುವ ಹಾದಿಯಲ್ಲಿ ಸಾಗಿದ್ದು, ದಾದಾ ಸೌರವ್ ಗಂಗೂಲಿ ಸ್ಥಾನಕ್ಕೆ ನಾಮ ನಿರ್ದೇಶನಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಸೌರವ್ ಗಂಗೂಲಿ ಯಶಸ್ವಿಯಾಗಿ ಬಿಸಿಸಿಐ ಅಧ್ಯಕ್ಷ ಹುದ್ದೆ ನಿಭಾಯಿಸಿದ ಬಳಿಕ ಐಸಿಸಿ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ರೋಜರ್ ಬಿನ್ನಿ ಇಂದು ಮುಂಬೈನಲ್ಲಿ ಚುನಾವಣೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ಅಮಿತ್ ಶಾ ಪುತ್ರ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿಯೇ ಮುಂದುವರಿಯಲಿದ್ದಾರೆ ಎನ್ನಲಾಗಿದೆ.

ಟೀಂ ಇಂಡಿಯಾ ಆಯ್ಕೆಗಾರರ ಮಂಡಳಿ ಅಧ್ಯಕ್ಷರಾಗಿದ್ದ ಬಿನ್ನಿ
ಹೌದು, ಅನೇಕ ಹುದ್ದೆಗಳನ್ನ ನಿಭಾಯಿಸಿರುವ ರೋಜರ್ ಬಿನ್ನಿ 2015ರ ಐಸಿಸಿ ಏಕದಿನ ವಿಶ್ವಕಪ್ ವೇಳೆಯಲ್ಲಿ ಹಿರಿಯ ಆಟಗಾರರ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಸೇವೆಯನ್ನ ಸಲ್ಲಿಸಿದ್ದಾರೆ. ಗಮನಾರ್ಹವಾಗಿ, ಬಿನ್ನಿ ಅವರ ಹೆಸರು ತಿಂಗಳ ಆರಂಭದಲ್ಲಿ ಬಿಸಿಸಿಐ ಚುನಾವಣೆಯ ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿತು ಮತ್ತು ಅವರನ್ನು ಬಿಸಿಸಿಐ ಎಜಿಎಂಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರತಿನಿಧಿಯಾಗಿ ಹೆಸರಿಸಲಾಯಿತು.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಸ್ಪರ್ಧಿಸುವುದಿಲ್ಲವೇ?
ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಬಹುತೇಕ ಸ್ಪರ್ಧಿಸುವುದು ಅನುಮಾನವಾಗಿದೆ. ಅಕ್ಟೋಬರ್ 18 ರಂದು ನಡೆಯಲಿರುವ ಚುನಾವಣೆಯಲ್ಲಿ ಗಂಗೂಲಿ ರೋಜರ್ ಬಿನ್ನಿಯನ್ನ ಬೆಂಬಲಿಸಿದ್ದು, ಅವರೇ ಬಹುತೇಕ ಗೆಲ್ಲುವ ಸಾಧ್ಯತೆಯಿದೆ.
ಗಂಗೂಲಿ ಐಸಿಸಿ ಕಡೆಗೆ ಮುಖಮಾಡಿದ್ದು, ಬಿನ್ನಿ ಬಿಸಿಸಿಐ ಅಧ್ಯಕ್ಷರಾದ್ರೆ, ಜಯ್ ಷಾ ಭಾರತೀಯ ಕ್ರಿಕೆಟ್‌ನ ಅತ್ಯುನ್ನತ ಹುದ್ದೆಯನ್ನು (ಕಾರ್ಯದರ್ಶಿ) ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಪ್ರಸ್ತುತ ಖಜಾಂಚಿ ಅರುಣ್ ಧುಮಾಲ್ ಅವರ ಸ್ಥಾನ ಏನು ಎಂಬುದು ತಿಳಿದುಬಂದಿಲ್ಲ. ವರ್ಷದ ಕೂಲಿಂಗ್ ಅವಧಿಯನ್ನು ಪೂರ್ಣಗೊಳಿಸಿರುವ ಬಿಸಿಸಿಐ ಮಾಜಿ ಖಜಾಂಚಿ ಅನಿರುದ್ಧ್ ಚೌಧರಿ ಸ್ಪರ್ಧಿಸಬಹುದು. ರೋಹನ್ ಜೇಟ್ಲಿಯನ್ನು ಮಂಡಳಿಯಲ್ಲಿ ಯಾವುದೇ ಪ್ರಮುಖ ಸ್ಥಾನದಲ್ಲಿ ಕಾಣಬಹುದು. ರಾಜೀವ್ ಶುಕ್ಲಾ ಅವರನ್ನು ಐಪಿಎಲ್ ಅಧ್ಯಕ್ಷರಾಗಿ ಕಾಣಬಹುದು.

ಭಾರತದ ಪರ ಎರಡು ವಿಶ್ವಕಪ್ ಪ್ರತಿನಿಧಿಸಿರುವ ರೋಜರ್ ಬಿನ್ನಿ
ರೋಜರ್ ಬಿನ್ನಿ ಕಪಿಲ್ ದೇವ್ ನಾಯಕತ್ವದ ಟೀಂ ಇಂಡಿಯಾದಲ್ಲಿ ಭಾರತದ ಪ್ರಮುಖ ಆಟಗಾರರಾಗಿ ಕಾಣಿಸಿಕೊಂಡರು. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಇವರು, 27 ಟೆಸ್ಟ್ ಪಂದ್ಯಗಳು ಮತ್ತು 72 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನ ಪ್ರತಿನಿಧಿಸಿದ್ದು 1979ರಿಂದ 1987ರವರೆಗೆ ಭಾರತದ ಪರ ಆಡಿದ್ದಾರೆ.
ಭಾರತ, ಪಾಕಿಸ್ತಾನಕ್ಕೆ ಗೌರವ ನೀಡಲು ಶುರು ಮಾಡಿದೆ: ರಮೀಜ್ ರಾಜಾ ಹೇಳಿಕೆಗೆ R ಅಶ್ವಿನ್ ಜಾಣ್ಮೆಯ ಉತ್ತರ

ಪ್ರತಿ ವರ್ಷದಂತೆ ಈ ವರ್ಷವು ನಡೆಯಲಿದೆ AGM
ಬಿಸಿಸಿಐ ನಿಯಮಗಳ ಪ್ರಕಾರ, ವಾರ್ಷಿಕ ಸಭೆಯನ್ನು ಪ್ರತಿ ವರ್ಷ ನಡೆಸಬೇಕು ಮತ್ತು ದಿನಾಂಕ ಮತ್ತು ಸ್ಥಳವನ್ನು ಅಧ್ಯಕ್ಷರು ನಿಗದಿಪಡಿಸುತ್ತಾರೆ. ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕು. ವಾರ್ಷಿಕ ಸಾಮಾನ್ಯ ಸಭೆಗಳು ಮತ್ತು ಚುನಾವಣೆಗಳಿಗೆ ಪ್ರತಿನಿಧಿಗಳ ಹೆಸರನ್ನು ಕಳುಹಿಸಲು ರಾಜ್ಯ ಸಂಸ್ಥೆಗಳನ್ನು ಕೇಳಲಾಗಿದೆ. ಸೌರವ್ ಗಂಗೂಲಿ ಅವರು ಬಂಗಾಳದಿಂದ CAB ಅನ್ನು ಪ್ರತಿನಿಧಿಸುತ್ತಿದ್ದಾರೆ. ಹೊಸ ನಿಯಮಗಳು ಮಂಡಳಿಯಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಪ್ರತಿನಿಧಿಸಲು ಅವಕಾಶ ನೀಡುತ್ತವೆ. ಅದರಂತೆ, ಸೌರವ್ ಯಾವುದೇ ಕಾರಣಕ್ಕೂ ಪ್ರತಿನಿಧಿಸಲು ಸಾಧ್ಯವಾಗದಿದ್ದರೆ ಸಿಎಬಿ ಪರವಾಗಿ ಅಭಿಷೇಕ್ ದಾಲ್ಮಿಯಾ ಮಂಡಳಿಯ ಸಭೆಗೆ ಹಾಜರಾಗುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications