ಭಾರತ, ಪಾಕಿಸ್ತಾನಕ್ಕೆ ಗೌರವ ನೀಡಲು ಶುರು ಮಾಡಿದೆ: ರಮೀಜ್ ರಾಜಾ ಹೇಳಿಕೆಗೆ R ಅಶ್ವಿನ್ ಜಾಣ್ಮೆಯ ಉತ್ತರ

ಪಾಕ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ರಮೀಜ್ ರಾಜಾ ಇತ್ತೀಚಿನ ಹೇಳಿಕೆಗೆ ಟೀಂ ಇಂಡಿಯಾ ಆಟಗಾರ, ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗಷ್ಟೇ ಪಾಕ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷ, ಟೀಂ ಇಂಡಿಯಾ ಪಾಕ್ ತಂಡಕ್ಕೆ ಗೌರವವನ್ನು ನೀಡಲು ಪ್ರಾರಂಭಿಸಿದೆ ಎಂದಿದ್ದರು.
ಪರ್ತ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಿನ್‌ಗೆ ಈ ಕುರಿತಾಗಿ ಕೇಳಿದ ಪ್ರಶ್ನೆಗೆ ಆಶ್ಚಯಗೊಂಡಿದ್ದಲ್ಲದೆ ಈ ಕುರಿತಾಗಿ ತನಗೆ ತಿಳಿದಿರಲಿಲ್ಲ ಎಂದು ಕೇರಮ್ ಬಾಲ್ ಸ್ಪಿನ್ನರ್ ಉತ್ತರಿಸಿದ್ದಾರೆ.

ನನಗೆ ಈ ಕುರಿತು ಗೊತ್ತಿರ್ಲಿಲ್ಲ, ನೀವು ಹೇಳಿದ ಮೇಲೆ ಗೊತ್ತಾಯಿತು
ರಮೀಜ್ ರಾಜಾ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆರ್. ಅಶ್ವಿನ್, "ನೀವು ಅದನ್ನು ಹೇಳುವವರೆಗೆ, ಅವರು ಆ ರೀತಿ ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದಿರಲಿಲ್ಲ'' ಎಂದು ಹೇಳಿದ್ದಾರೆ.
ಮಾತು ಮುಂದುವರಿಸಿದ ಅಶ್ವಿನ್ "ಆದ್ರೆ ನೋಡಿ, ಇದು ಕ್ರಿಕೆಟ್ ಆಟ. ಯಾವುದೇ ರಾಜಕೀಯ ಉದ್ವಿಗ್ನತೆ ಮತ್ತು ತಂಡಗಳ ನಡುವೆ ಏನೇ ಇರಲಿ, ಪೈಪೋಟಿ ದೊಡ್ಡದಾಗಿದೆ. ಇದು ಎರಡೂ ದೇಶಗಳ ಜನರಿಗೆ ಬಹಳಷ್ಟು ಅರ್ಥವಾಗಿದೆ. ಆದರೆ ದಿನದ ಕೊನೆಯಲ್ಲಿ, ನಾವು ಏನು ಹೇಳಬಹುದು. ಕ್ರಿಕೆಟಿಗ ಮತ್ತು ಕ್ರೀಡೆಯನ್ನು ಆಡುತ್ತಿರುವ ವ್ಯಕ್ತಿಯಾಗಿ, ಗೆಲುವು ಮತ್ತು ಸೋಲು ಆಟದ ಭಾಗವಾಗಿದೆ ಎಂದು ನೀವು ಅರ್ಥಮಾಡಿಕೊಂಡಿದ್ದೀರಿ, ವಿಶೇಷವಾಗಿ ಈ ಸ್ವರೂಪದಲ್ಲಿ, ಗೆಲುವಿನ ಅಂತರ ತುಂಬಾ ಹತ್ತಿರದಲ್ಲಿ ಇರುತ್ತವೆ, "ಎಂದು ಅವರು ಹೇಳಿದರು.
ರಾಂಚಿ ODI ಪಂದ್ಯದ ಬಳಿಕ ಅಭಿಮಾನಿಯ ಗಿಫ್ಟ್ ಅನ್ನು, ಶಾರ್ದೂಲ್‌ಗೆ ತಲುಪಿಸಿದ ಇಶಾನ್ ಕಿಶನ್

ಪಾಕಿಸ್ತಾನಕ್ಕೆ ಇದೀಗ ಟೀಂ ಇಂಡಿಯಾ ಗೌರವ ನೀಡುತ್ತಿದೆ ಎಂದಿದ್ದ ರಮೀಜ್ ರಾಜಾ
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ರಮೀಜ್ ರಾಜಾ, ಟೀಂ ಇಂಡಿಯಾ ಈಗ ಪಾಕಿಸ್ತಾನಕ್ಕೆ ಗೌರವವನ್ನು ನೀಡಲು ಪ್ರಾರಂಭಿಸಿದೆ. ಬಾಬರ್ ಅಜಂ ನಾಯಕತ್ವದ ತಂಡವು ಭಾರತಕ್ಕೆ ಕಠಿಣ ಹೋರಾಟವನ್ನು ನೀಡಿರುವುದನ್ನು ಪ್ರಶಂಸಿಸಬೇಕಾಗಿದೆ ಎಂದು ಹೇಳಿದ್ದರು.
''ಅವರು ತಡವಾಗಿ ನಮಗೆ ಗೌರವವನ್ನು ನೀಡಲು ಪ್ರಾರಂಭಿಸಿದ್ದಾರೆ. ಇದಕ್ಕೂ ಮೊದಲು, ಭಾರತವನ್ನು ಪಾಕಿಸ್ತಾನ ಸೋಲಿಸಲು ಸಾಧ್ಯವಿಲ್ಲ ಎಂದು ನೋಡುತ್ತಿದ್ದರು," ಎಂದು ರಮೀಜ್ ರಾಜಾ ಡಾನ್ ನ್ಯೂಸ್‌ಗೆ ತಿಳಿಸಿದ್ದರು.
ಮಾತು ಮುಂದುವರಿಸಿ '' ಈ ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಕ್ರೆಡಿಟ್ ನೀಡಬೇಕು. ನಾವು ಶತಕೋಟಿ ಡಾಲರ್ ಕ್ರಿಕೆಟ್ ಉದ್ಯಮವನ್ನು(ಟೀಂ ಇಂಡಿಯಾ) ಸೋಲಿಸಿದ್ದೇವೆ. ನಾನು ವಿಶ್ವಕಪ್‌ಗಳನ್ನು ಆಡಿದ್ದೇನೆ, ಆದರೆ ನಾವು ಭಾರತದ ವಿರುದ್ಧ ಎಂದಿಗೂ ಗೆದ್ದಿಲ್ಲ. ಸದ್ಯದ ಪಾಕಿಸ್ತಾನ ತಂಡವನ್ನು ಮೆಚ್ಚಬೇಕು. ಸಂಪನ್ಮೂಲಗಳಿಗೆ ಸೀಮಿತವಾಗಿದ್ದರೂ, ನಾವು ಅವರಿಗೆ ಕಠಿಣ ಹೋರಾಟ ನೀಡುತ್ತಿದ್ದೇವೆ," ಎಂದು ರಮೀಜ್ ರಾಜಾ ತಿಳಿಸಿದರು.
T20 ವಿಶ್ವಕಪ್ ಬಳಿಕ 2 ಬಾರಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ ನ್ಯೂಜಿಲೆಂಡ್: ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಅಕ್ಟೋಬರ್ 23ಕ್ಕೆ ಭಾರತ-ಪಾಕಿಸ್ತಾನ ಮುಖಾಮುಖಿ
ಇದೇ ತಿಂಗಳು ಅಕ್ಟೋಬರ್ 23ಕ್ಕೆ ಹೈವೋಲ್ಟೇಜ್ ಪಂದ್ಯಕ್ಕೆ ಇಡೀ ಕ್ರಿಕೆಟ್ ಜಗತ್ತು ಸಾಕ್ಷಿಯಾಗಲಿದೆ. ಐಸಿಸಿ ಟಿ20 ವಿಶ್ವಕಪ್ ಅಕ್ಟೋಬರ್ 16ರಿಂದ ಆರಂಭಗೊಳ್ಳಲಿದ್ದು, ಟೀಂ ಇಂಡಿಯಾ ಭಾನುವಾರ (ಅ.23) ತನ್ನ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನ ಆರಂಭಿಸಲಿದೆ.
ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದ ಭಾರತ ಲೀಗ್ ಹಂತದಲ್ಲಿಯೇ ಹೊರಬಿದ್ದಿತ್ತು. ಇನ್ನು ಇತ್ತೀಚೆಗೆ ನಡೆದ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಪಾಕ್ ವಿರುದ್ಧ ಒಂದು ಪಂದ್ಯ ಗೆದ್ದು ಮತ್ತೊಂದು ಪಂದ್ಯ ಸೋತು ಫೈನಲ್ ಮುಖವನ್ನು ನೋಡದೇ ಹಿಂತಿರುಗಿತ್ತು. ಹೀಗಾಗಿ ಈ ಬಾರಿ ಸ್ವಲ್ಪವೂ ಯಾಮಾರದೇ ರೋಹಿತ್ ಶರ್ಮಾ ಟೀಂ ಗೆಲ್ಲಲೇಬೇಕೆಂದು ಪಣತೊಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications