'ಹಿಟ್ ಮ್ಯಾನ್' ರೋಹಿತ್ ಶತಕ, ಹೊಸ ದಾಖಲೆ ನಿರ್ಮಾಣ

ಗುವಾಹಟಿ, ಅಕ್ಟೋಬರ್ 24: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೇ 'ಚೇಸಿಂಗ್ ಕಿಂಗ್' ಕೊಹ್ಲಿ ಹಾಗೂ 'ಹಿಟ್ ಮ್ಯಾನ್ ' ರೋಹಿತ್ ಶರ್ಮ ಆಕರ್ಷಕ ಶತಕ ಬಾರಿಸಿ ತಂಡದ ಜಯಕ್ಕೆ ತಮ್ಮ ಕೊಡುಗೆ ನೀಡಿದರು. ಕೊಹ್ಲಿ 36ನೇ ಶತಕ ಗಳಿಸಿದರೆ, ರೋಹಿತ್ 20ನೇ ಶತಕ ಬಾರಿಸಿದರು.
ವೆಸ್ಟ್ ಇಂಡೀಸ್ ತಂಡ ನೀಡಿದ 323ರನ್ ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಿದ ಟೀಂ ಇಂಡಿಯಾ 8 ವಿಕೆಟ್ ಗಳಿಂದ ಈ ಪಂದ್ಯವನ್ನು ಗೆದ್ದುಕೊಂಡಿತು. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತಕ್ಕೆ 1-0 ಅಂತರ ಮುನ್ನಡೆ ಪಡೆದುಕೊಂಡಿತು.
ಕೊಹ್ಲಿ ತಕ್ಕ ಸಾಥ್ ನೀಡಿದ ರೋಹಿತ್ ಉತ್ತಮ ಪ್ರದರ್ಶನ ನೀಡಿದರು. ಎರಡನೇ ವಿಕೆಟ್ ಗೆ ಕೊಹ್ಲಿ ಹಾಗೂ ರೋಹಿತ್ 246ರನ್ ಗಳ ಜೊತೆಯಾಟ ಸಾಧಿಸಿದರು. 71 ಎಸೆತಗಳಲ್ಲಿ ತಮ್ಮ 36ನೇ ಶತಕ ಪೂರೈಸಿದ ಕೊಹ್ಲಿ ಅವರು ಹಲವು ದಾಖಲೆಗಳನ್ನು ಮುರಿದರೆ, 150ಪ್ಲಸ್ ರನ್ ಗಳಿಕೆಯಲ್ಲಿ ರೋಹಿತ್ ಹೊಸ ಇತಿಹಾಸ ನಿರ್ಮಿಸಿದರು. ರೋಹಿತ್ ಶರ್ಮ ಮುರಿದ ದಾಖಲೆಗಳ ವಿವರ ಮುಂದಿದೆ.

6 ಬಾರಿ 150 ಪ್ಲಸ್ ರನ್
* ರೋಹಿತ್ ಶರ್ಮ ಅವರು ಏಕದಿನ ಕ್ರಿಕೆಟ್ ನಲ್ಲಿ 6 ಬಾರಿ 150ಪ್ಲಸ್ ರನ್ ಗಳಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಹಾಗೂ ವಿಶ್ವದ ಏಕೈಕ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಸಚಿನ್ ಹಾಗೂ ಡೇವಿಡ್ ವಾರ್ನರ್ ತಲಾ 5 ಬಾರಿ ಈ 150ರನ್ ಗಡಿ ದಾಟಿದ್ದರು. ಈ ಪಂದ್ಯದಲ್ಲಿ ಔಟಾಗದೆ 152ರನ್ ಗಳಿಸಿದರು.
* ಒಂದೇ ಇನ್ನಿಂಗ್ಸ್ ನಲ್ಲಿ ಇಬ್ಬರು ಭಾರತೀಯರು 140 ರನ್ ಗಳಿಸಿದ್ದು ಇದು 3ನೇ ಬಾರಿ.

ಇನ್ನಿಂಗ್ಸ್ ನಲ್ಲಿ 6 ಪ್ಲಸ್ ಸಿಕ್ಸರ್
* 6 ಸಿಕ್ಸರ್ : ರೋಹಿತ್ ಶರ್ಮ ಅವರು 6ನೆ ಬಾರಿಗೆ ಒಡಿಐ ಇನ್ನಿಂಗ್ಸ್ ನಲ್ಲಿ 6ಕ್ಕಿಂತ ಅಧಿಕ ಸಿಕ್ಸರ್ ಸಿಡಿದ್ದಾರೆ. ಅಫ್ರಿದಿ 13 ಬಾರಿ ಹಾಗೂ ಕ್ರಿಸ್ ಗೇಲ್ 9 ಬಾರಿ ಈ ಸಾಧನೆ ಮಾಡಿದ್ದಾರೆ.
* ತ್ವರಿತಗತಿಯಲ್ಲಿ 4000ರನ್ : ಭಾರತದಲ್ಲಿ ತ್ವರಿತಗತಿಯಲ್ಲಿ 4000 ಅಂತಾರಾಷ್ಟ್ರಿಯ ರನ್(87 ಇನ್ನಿಂಗ್ಸ್) ಗಳಿಕೆ ಸಾಧನೆ ಪಟ್ಟಿಯಲ್ಲಿ ರೋಹಿತ್ ಶರ್ಮ 2ನೇ ಸ್ಥಾನದಲ್ಲಿದ್ದಾರೆ. ಈ ಮುಂಚೆ ಸುನಿಲ್ ಗವಾಸ್ಕರ್ ಅವರು 86 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದರು.
ಹಲವು ದಾಖಲೆಗಳನ್ನು ಸೃಷ್ಟಿಸಿದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜೋಡಿ

ಗರಿಷ್ಠ ರನ್ ಜೊತೆಯಾಟ
* 246ರನ್ ಜೊತೆಯಾಟ : ಕೊಹ್ಲಿ ಹಾಗೂ ರೋಹಿತ್ ಶರ್ಮ ಎರಡನೇ ವಿಕೆಟ್ ಗೆ ಗಳಿಸಿದ 246ರನ್ ಜೊತೆಯಾಟವು ವೆಸ್ಟ್ ಇಂಡೀಸ್ ವಿರುದ್ಧದ ಗರಿಷ್ಠ ರನ್ ಗಳಿಕೆ ಜೊತೆಯಾಟ ಎನಿಸಿಕೊಂಡಿದೆ.
* ಕೊಹ್ಲಿ ಹಾಗೂ ರೋಹಿತ್ ಶರ್ಮ ಒಟ್ಟಾರೆ 5 ಬಾರಿ 200 ಪ್ಲಸ್ ರನ್ ಜೊತೆಯಾಟ ಸಾಧಿಸಿದ್ದಾರೆ. ಬೇರೆ ಯಾವ ಜೋಡಿಯೂ ಈ ಸಾಧನೆ ಇಲ್ಲಿ ತನಕ ಮಾಡಿಲ್ಲ.

ಆರಂಭಿಕನಾಗಿ ಸಿಕ್ಸರ್ ಗಳಿಕೆ
ಏಕದಿನ ಕ್ರಿಕೆಟ್ ನಲ್ಲಿ ಆರಂಭಿಕ ಆಟಗಾರನಾಗಿ ಅತ್ಯಧಿಕ ಸಿಕ್ಸರ್ ಗಳಿಕೆ ಪಟ್ಟಿ:
* 272 : ಕ್ರಿಸ್ ಗೇಲ್
* 263: ಸನತ್ ಜಯಸೂರ್ಯ
* 168: ರೋಹಿತ್ ಶರ್ಮ
* 167 : ಸಚಿನ್ ತೆಂಡೂಲ್ಕರ್
* 144 : ಆಡಂ ಗಿಲ್ ಕ್ರಿಸ್ಟ್
ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಎರಡು ಕುತೂಹಲಕಾರಿ ಅಂಶಗಳು!

ಏಕದಿನ ಕ್ರಿಕೆಟ್ ನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್ ಗಳಿಕೆ
* 210 : ಎಂಎಸ್ ಧೋನಿ
* 195 : ಸಚಿನ್ ತೆಂಡೂಲ್ಕರ್
* 190: ರೋಹಿತ್ ಶರ್ಮ
* 189 : ಸೌರವ್ ಗಂಗೂಲಿ
* 153 : ಯುವರಾಜ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications