ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಎರಡು ಕುತೂಹಲಕಾರಿ ಅಂಶಗಳು!

Both Virat Kohli and Rohit Sharma share the same captaincy record

ನವದೆಹಲಿ, ಅಕ್ಟೋಬರ್ 2: ಇಂಗ್ಲೆಂಡ್ ಟೆಸ್ಟ್ ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಏಷ್ಯಾ ಕಪ್ ನಲ್ಲಿ ವಿಶ್ರಾಂತಿಯಲ್ಲಿದ್ದರು. ಆಗ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ಮುನ್ನಡೆಸಿದ್ದರು; ಏಷ್ಯಾ ಕಪ್ ನಲ್ಲಿ ಭಾರತ ಏಳನೇ ಏಷ್ಯಾ ಕಪ್ ಗೆ ಮುತ್ತಿಕ್ಕಿದ್ದೂ ಆಯಿತು. ಆದರೆ ರೋಹಿತ್-ಕೊಹ್ಲಿ ನಾಯಕತ್ವ ವಿಚಾರದಲ್ಲಿ ಸರಿಸಮಾನರಾಗಿದ್ದಾರೆ.

ನನಗಿದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ: ಬಿಸಿಸಿಐ ಮೇಲೆ ಹರ್ಭಜನ್ ಅಸಮಾಧಾನನನಗಿದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ: ಬಿಸಿಸಿಐ ಮೇಲೆ ಹರ್ಭಜನ್ ಅಸಮಾಧಾನ

ಕೊಹ್ಲಿ ಮತ್ತು ರೋಹಿತ್ ಇಬ್ಬರೂ ನಾಯಕತ್ವ ವಹಿಸಿರುವ ಮೊದಲ 8 ಏಕದಿನ ಪಂದ್ಯಗಳಲ್ಲಿ ಭಾರತ ತಂಡ 7 ಗೆಲುವು ಮತ್ತು 1 ಸೋಲು ಕಂಡಿದೆ. ಇದಲ್ಲದೆ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲೂ ರೋಹಿತ್ ಶರ್ಮಾ ಅವರು ದ್ವಿತೀಯ ಸ್ಥಾನಕ್ಕೇರುವ ಮೂಲಕ ವಿರಾಟ್ ಬೆನ್ನ ಹಿಂದಿದ್ದಾರೆ.

ಇತ್ತೀಚಿನ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಕೊಹ್ಲಿ ಒಟ್ಟು 884 ರೇಟಿಂಗ್ ಪಾಯಿಂಟ್ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ ಅವರು ಒಟ್ಟು 842 ರೇಟಿಂಗ್ ಪಾಯಿಂಟ್ ಮೂಲಕ ದ್ವಿತೀಯ ಸ್ಥಾನದಲ್ಲಿದ್ದಾರೆ. ಏಷ್ಯಾ ಕಪ್ ನಲ್ಲಿನ ಉತ್ತಮ ಪ್ರದರ್ಶನ, ರ್ಯಾಂಕ್ ನಿಟ್ಟಿನಲ್ಲಿ ರೋಹಿತ್ ಗೆ ನೆರವಾಗಿದೆ.

ಏಷ್ಯಾ ಕಪ್ ಗೂ ಮುನ್ನ ಇಂಗ್ಲೆಂಡ್ ಟೆಸ್ಟ್ ನಲ್ಲಿ ಭಾರತ, ನಾಯಕ ವಿರಾಟ್ ಕೊಹ್ಲಿ ಅವರ ಹೋರಾಟದ ಹೊರತಾಗಿಯೂ ಸರಣಿಯನ್ನು 4-1ರಿಂದ ಹೀನಾಯ ಸೋಲು ಕಂಡಿತ್ತು. ಆದರೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಏಷ್ಯಾ ಕಪ್ ಫೈನಲ್ ನಲ್ಲಿ ಬಾಂಗ್ಲ ವಿರುದ್ಧ 3 ವಿಕೆಟ್ ರೋಚಕ ಜಯ ಸಾಧಿಸಿತ್ತು. ಇದಕ್ಕಾಗಿ ರೋಹಿತ್ ಬಗ್ಗೆ ಶ್ಲಾಘನೆ ವ್ಯಕ್ತವಾಗಿತ್ತು ಕೂಡ.

ಸೋಷಿಯಲ್ ಮೀಡಿಯಾದಲ್ಲಿ ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿಯನ್ನು ಅನ್ ಫಾಲೋ ಮಾಡಿದ್ದರು. ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ವಿರಾಟ್ ಅವರನ್ನು ರೋಹಿತ್ ಅನ್ ಫಾಲೋ ಮಾಡಿದ್ದರು. ಇದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆಯೂ ರೋಹಿತ್ ಸ್ಪಷ್ಟನೆ ನೀಡಿದ್ದಾರೆ.

'ಇತ್ತೀಚಿನ ಕೆಲ ಸುದ್ದಿಗಳಿಂದ ನನಗಂತೂ ಸುಸ್ತಾಗಿ ಹೋಗಿದೆ. ಸೋಷಿಯಲ್ ಮೀಡಿಯಾದಲ್ಲಿ ನಾನು ಕೊಹ್ಲಿಯನ್ನು ಅನ್ ಫಾಲೋ ಮಾಡಿದ್ದೆ. ಇದರಲ್ಲಿ ಬಿರುಕಿನ ವಿಚಾರವೇನೂ ಇಲ್ಲ. ಕೊಹ್ಲಿ ಹೆಚ್ಚಾಗಿ ಪ್ರಚಾರ ಸಂಬಂಧಿ ಪೋಸ್ಟ್ ಗಳನ್ನು ಹಾಕುತ್ತಿರುತ್ತಾರೆ. ಇವತ್ತು ಕೊಹ್ಲಿ ಕುರ್ತಾವನ್ನು ಪ್ರಚಾರ ಮಾಡಿದರೆ ನಾಳೆ ಪೈಜಾಮ, ನಾಡಿದ್ದು ಇನ್ನೊಂದು. ಇದ್ದಕ್ಕೇ ನಾನು ಅನ್ ಫಾಲೋ ಮಾಡಿದ್ದೇನಷ್ಟೇ' ಎಂದಿದ್ದಾರೆ.

Story first published: Tuesday, October 2, 2018, 15:48 [IST]
Other articles published on Oct 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X