Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್-ಸೆಹ್ವಾಗ್ ಹಿಂದಿಕ್ಕಿ ಹೊಸ ಮೈಲಿಗಲ್ಲು ಸ್ಥಾಪಿಸಿದ ರೋಹಿತ್-ಧವನ್!

Rohit Sharma-Shikhar Dhawan Surpass Legendary Duo

ಮೌಂಟ್‌ಮೌಂಗನ್ಯುಯಿ, ಜನವರಿ 26: ಮೌಂಟ್ ಮೌಂಗನ್ಯುಯಿಯ ಬೇ ಓವಲ್‌ ನಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಪಂದ್ಯದ Live Score ಕಾರ್ಡ್ ಕೆಳಗಿದೆ

1
44081

ಟಾಸ್ ಗೆದ್ದು ಭಾರತ ಬ್ಯಾಟಿಂಗ್ ಆಯ್ದುಕೊಂಡಾಗ ಆರಂಭಿಕರಾಗಿ ಮೈದಾನಕ್ಕಿಳಿದ ರೋಹಿತ್-ಧವನ್ ಭರ್ಜರಿ ಜೊತೆಯಾಟ ನೀಡಿದರು. ಇಬ್ಬರ ಜೊತೆಯಾಟ ಭಾರತದ ಖಾತೆಗೆ 154 ರನ್ ನೀಡಿತು. ಈ ರನ್ ಕೊಡುಗೆಯೊಂದಿಗೆ ಧವನ್-ರೋಹಿತ್ ಜೋಡಿ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಸರಿಗಟ್ಟಿದೆ.

ಆರಂಭಿಕರಾಗಿ ಇಳಿದ ರೋಹಿತ್ 87 (96 ಎಸೆತ), ಧವನ್ 66 (67 ಎಸೆತ) ರನ್ ಗಳಿಸುವ ಮೂಲಕ ಏಕದಿನ ಜೊತೆಯಾಟದ 14ನೇ ಶತಕ ಪೂರೈಸಿದರು. ಭಾರತದ ಕ್ರಿಕೆಟ್ ದೈತ್ಯರಾದ ಸಚಿನ್-ಸೆಹ್ವಾಗ್ ಜೋಡಿ ಆರಂಭಿಕರಾಗಿ 13 ಶತಕದ ದಾಖಲೆ ಹೊಂದಿದ್ದರು.

ಶಿಖರ್ ಧವನ್ 66, ರೋಹಿತ್ ಶರ್ಮಾ 87, ವಿರಾಟ್ ಕೊಹ್ಲಿ 43, ಅಂಬಾಟಿ ರಾಯುಡು 47, ಎಂಎಸ್ ಧೋನಿ ಅಜೇಯ 48, ಕೇದಾರ್ ಜಾಧವ್ ಅಜೇಯ 22 ರನ್ ನೆರವಿನೊಂದಿಗೆ ಭಾರತ 50 ಓವರ್‌ ಮುಕ್ತಾಯಕ್ಕೆ 4 ವಿಕೆಟ್ ಕಳೆದು ಭರ್ಜರಿ 324 ರನ್ ಕಲೆ ಹಾಕಿತ್ತು.

Story first published: Saturday, January 26, 2019, 13:36 [IST]
Other articles published on Jan 26, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+