For Quick Alerts
ALLOW NOTIFICATIONS  
For Daily Alerts
 

WI vs PAK ODI: ಪಾಕ್‌ ವಿರುದ್ಧದ ಏಕದಿನ ಸರಣಿಗೆ ವಿಂಡೀಸ್ ತಂಡ ಪ್ರಕಟ

ಪಾಕಿಸ್ತಾನ ತಂಡ ಸದ್ಯ ವೆಸ್ಟ್‌ ಇಂಡೀಸ್ ಪ್ರವಾಸದಲ್ಲಿದೆ. ಈ ವೇಳೆ ವೆಸ್ಟ್‌ ಇಂಡೀಸ್ ವಿರುದ್ಧ ಪಾಕಿಸ್ತಾನ ಟಿ20 ಸರಣಿಯನ್ನು ಆಡಿತ್ತು. ಪ್ರವಾಸಿ ಪಾಕ್ ತಂಡ ಟಿ20 ಸರಣಿಯನ್ನು 2-1 ರಿಂದ ಗೆದ್ದು ಕೊಂಡಿದೆ. ಇನ್ನು ಉಭಯ ದೇಶಗಳ ನಡುವಣ ಏಕದಿನ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಈ ಸರಣಿಗಾಗಿ ಆತಿಥೇಯ ವೆಸ್ಟ್‌ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ವೆಸ್ಟ್‌ ಇಂಡೀಸ್ ತಂಡ 15 ಆಟಗಾರರ ತಂಡವನ್ನು ಪ್ರಕಟಿಸಲಾಗಿದ್ದು, ಶೈ ಹೋಪ್ ತಂಡವನ್ನು ಮುನ್ನಡೆಸಲಿದ್ದಾರೆ.

ಕಳೆದ ಎಂಟು ತಿಂಗಳಿನಿಂದ ದೇಶದ ಪರ ಯಾವುದೇ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದ ವೇಗದ ಬೌಲರ್ ರೊಮಾರಿಯೊ ಶೆಫರ್ಡ್ ತಂಡಕ್ಕೆ ಮರಳಿದ್ದಾರೆ. ಇನ್ನು ಸ್ಟಾರ್ ವೇಗದ ಬೌಲರ್‌ ಅಲ್ಜಾರಿ ಜೋಸೆಫ್‌ ಅವರು ವರ್ಕ್‌ ಲೋಡ್‌ ಮ್ಯಾನೇಜ್ಮೆಂಟ್‌ ದೃಷ್ಟಿಯಿಂದ ಇವರಿಗೆ ವಿಶ್ರಾಂತಿ ನೀಡಲಾಗಿದೆ. ವೆಸ್ಟ್‌ ಇಂಡೀಸ್ ತಂಡ ಮುಂದಿನ ಸರಣಿ ಹಾಗೂ 2027ರ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ವೆಸ್ಟ್‌ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ.

Romario Shepherd Returns to West Indies ODI Squad for Pakistan Series

ಪಾಕ್ ವಿರುದ್ಧದ ಏಕದಿನ ಸರಣಿಗೆ ಪ್ರಕಟಿತ ತಂಡದಲ್ಲಿ ಶೆಫರ್ಡ್ ಹೊರತುಪಡಿಸಿ, ಕೇಸಿ ಕಾರ್ಟಿ, ರೋಸ್ಟನ್ ಚೇಸ್ ಮತ್ತು ಅಮೀರ್ ಜಂಗೂ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ವಿಂಡೀಸ್ ಹಾಗೂ ಪಾಕ್‌ ನಡುವಣ ಏಕದಿನ ಸರಣಿಯ ಎಲ್ಲ ಪಂದ್ಯಗಳು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಣ ಮೊದಲ ಏಕದಿನ ಪಂದ್ಯ ಆಗಸ್ಟ್‌ 8, ಎರಡನೇ ಏಕದಿನ ಪಂದ್ಯ ಆಗಸ್ಟ್ 10, ಮೂರನೇ ಪಂದ್ಯ ಆಗಸ್ಟ್‌ 12 ರಂದು ನಡೆಯಲಿದೆ. ಇನ್ನು ಪಾಕ್‌, ವಿಂಡೀಸ್‌ ತಂಡಗಳು ಒಟ್ಟು 33 ಪಂದ್ಯಗಳನ್ನು ಆಡಲಾಗಿದೆ. ಈ ವೇಳೆ ವಿಂಡೀಸ್‌ 16, ಪಾಕ್‌ 15 ತಂಡ ಗೆಲುವು ದಾಖಲಿಸಿದ್ದು, 2 ಪಂದ್ಯ ಟೈ ಆಗಿವೆ.

ಪಾಕ್‌ ವಿರುದ್ಧದ ಏಕದಿನ ಸರಣಿಗೆ ವೆಸ್ಟ್‌ ಇಂಡೀಸ್ ತಂಡ: ಶೈ ಹೋಪ್ (ನಾಯಕ), ಜ್ಯುವೆಲ್ ಆಂಡ್ರ್ಯೂ, ಜೆಡಿಯಾ ಬ್ಲೇಡ್ಸ್, ಕೇಸಿ ಕಾರ್ಟಿ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಜಸ್ಟಿನ್ ಗ್ರೀವ್ಸ್, ಅಮೀರ್ ಜಂಗೂ, ಶಮರ್ ಜೋಸೆಫ್, ಬ್ರಾಂಡನ್ ಕಿಂಗ್, ಎವಿನ್ ಲೂಯಿಸ್, ಗುಡಕೇಶ್ ಮೋತಿ, ಶೆರ್ಫೇನ್ ರುದರ್‌ಫೋರ್ಡ್, ಜೇಡನ್ ಸೀಲ್ಸ್, ರೊಮಾರಿಯೊ ಶೆಫರ್ಡ್.

Story first published: Wednesday, August 6, 2025, 21:40 [IST]
Other articles published on Aug 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+