ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಪೂರ್ಣ ತಂಡ ಹೆಸರಿಸಿದ ಆರ್‌ಪಿ ಸಿಂಗ್; ಈ ವೇಗಿಗೆ ಸ್ಥಾನವಿಲ್ಲ

RP Singh Announces Team India Full Squad For T20 World Cup; Harshal Patel Has No Place

ಸದ್ಯ ಯುಎಇನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2022ರಲ್ಲಿ ಕಳಪೆ ಪ್ರದರ್ಶನದಿಂದಾಗಿ ಫೈನಲ್ ತಲುಪದೆ ಹೊರಬಿದ್ದ ನಂತರ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಐದು ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಎಲ್ಲರ ಕಣ್ಣುಗಳು ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಐಸಿಸಿ ಟಿ20 ವಿಶ್ವಕಪ್ ಮೇಲೆ ಇರಲಿದೆ.

ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಈ ಇಬ್ಬರು ಆಟಗಾರರು ಆಡಬೇಕು; ಚೇತೇಶ್ವರ ಪೂಜಾರಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಈ ಇಬ್ಬರು ಆಟಗಾರರು ಆಡಬೇಕು; ಚೇತೇಶ್ವರ ಪೂಜಾರ

ಈ ಮೆಗಾ ಟೂರ್ನಿಗಾಗಿ ಭಾರತವು ತನ್ನ ಪೂರ್ಣ ತಂಡವನ್ನು ಸೆಪ್ಟೆಂಬರ್ 15ರಂದು ಘೋಷಿಸುತ್ತದೆ ಮತ್ತು ಅಲ್ಲಿಯವರೆಗೆ ಗಡುವು ನೀಡಲಾಗಿದೆ. ಭಾರತ ತಂಡದ ಘೋಷಣೆಗೆ ಮುಂಚಿತವಾಗಿ ಅನೇಕ ಕ್ರಿಕೆಟ್ ತಜ್ಞರು ಟಿ20 ವಿಶ್ವಕಪ್‌ಗಾಗಿ ತಮ್ಮ ಅಂತಿಮ 15ರ ತಂಡವನ್ನು ಹೆಸರಿಸುತ್ತಿದ್ದಾರೆ.

15 ಸದಸ್ಯರ ಭಾರತ ತಂಡವನ್ನು ಹೆಸರಿಸಿದ ಆರ್‌ಪಿ ಸಿಂಗ್

15 ಸದಸ್ಯರ ಭಾರತ ತಂಡವನ್ನು ಹೆಸರಿಸಿದ ಆರ್‌ಪಿ ಸಿಂಗ್

ಭಾರತದ ಮಾಜಿ ವೇಗಿ ಆರ್‌ಪಿ ಸಿಂಗ್ ಅವರು ಶನಿವಾರ 15 ಸದಸ್ಯರ ಭಾರತ ತಂಡವನ್ನು ಹೆಸರಿಸಿದ್ದಾರೆ. ಅವರು ಪ್ರಕಟಿಸಿದ ಅಂತಿಮ 15ರ ತಂಡದಲ್ಲಿ ಟೀಂ ಇಂಡಿಯಾ ಸ್ಟಾರ್ ಬೌಲರ್ ಹರ್ಷಲ್ ಪಟೇಲ್ ಬದಲಿಗೆ ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡಿದ್ದಾರೆ.

ಈಗಾಗಲೇ ನಮಗೆಲ್ಲ ತಿಳಿದಿರುವಂತೆ 2021ರ ಐಸಿಸಿ ಟಿ20 ವಿಶ್ವಕಪ್‌ನಿಂದ ಟೀಂ ಇಂಡಿಯಾಕ್ಕಾಗಿ ಮೊಹಮ್ಮದ್ ಶಮಿ ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ. ಆದಾಗ್ಯೂ, ಆರ್‌ಪಿ ಸಿಂಗ್ ಅವರು ಶಮಿಯನ್ನು ಟಿ20 ವಿಶ್ವಕಪ್ ತಂಡದಲ್ಲಿ ಆಯ್ಕೆ ಮಾಡಿದ್ದಾರೆ. ವಿಶ್ವಕಪ್ ಪಂದ್ಯಾವಳಿ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಹೀಗಾಗಿ ಶಮಿ ಅಲ್ಲಿ ಹೆಚ್ಚುವರಿ ಬೌನ್ಸ್ ಪಡೆಯಲಿದ್ದಾರೆ ಎಂದು ಕಾರಣ ನೀಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕುಲದೀಪ್ ತುಂಬಾ ಟ್ರಿಕಿ ಆಗುತ್ತಾರೆ

ಆಸ್ಟ್ರೇಲಿಯಾದಲ್ಲಿ ಕುಲದೀಪ್ ತುಂಬಾ ಟ್ರಿಕಿ ಆಗುತ್ತಾರೆ

ಆರ್‌ಪಿ ಸಿಂಗ್ ತನ್ನ ಅಂತಿಮ 15ರಲ್ಲಿ ರವಿ ಬಿಷ್ಣೋಯ್ ಅಥವಾ ರವಿಚಂದ್ರನ್ ಅಶ್ವಿನ್ ಬದಲಿಗೆ ಕುಲದೀಪ್ ಯಾದವ್ ಅವರನ್ನು ಆಯ್ಕೆ ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕುಲದೀಪ್ ತುಂಬಾ ಟ್ರಿಕಿ ಆಗಿರಬಹುದು ಎಂದು ಆರ್‌ಪಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಕುಲದೀಪ್ ಆಸ್ಟ್ರೇಲಿಯಾದಲ್ಲಿ ಹೆಚ್ಚುವರಿ ಬೌನ್ಸ್ ಅನ್ನು ಹೊರತೆಗೆಯಬಹುದು ಮತ್ತು ಅವರ ಲಾಭಕ್ಕಾಗಿ ಲಾಂಗ್ ಬೌಂಡರಿಗಳನ್ನು ಬಳಸಬಹುದು.

2022ರ ಐಸಿಸಿ ಟಿ20 ವಿಶ್ವಕಪ್‌ಗಾಗಿ ಪ್ರಕಟಿಸಿದ ಭಾರತ ತಂಡ

2022ರ ಐಸಿಸಿ ಟಿ20 ವಿಶ್ವಕಪ್‌ಗಾಗಿ ಪ್ರಕಟಿಸಿದ ಭಾರತ ತಂಡ

ಆರ್‌ಪಿ ಸಿಂಗ್ ಅವರು 2022ರ ಐಸಿಸಿ ಟಿ20 ವಿಶ್ವಕಪ್‌ಗಾಗಿ ಪ್ರಕಟಿಸಿದ ಭಾರತ ತಂಡ ಹೀಗಿದೆ.

ಬ್ಯಾಟ್ಸ್‌ಮನ್‌ಗಳು: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್ (ಆಲ್‌ರೌಂಡರ್)

ಬೌಲರ್‌ಗಳು: ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್, ದೀಪಕ್ ಚಹಾರ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್

Story first published: Saturday, September 10, 2022, 23:21 [IST]
Other articles published on Sep 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X