ಪಿಂಕ್ ಜೆರ್ಸಿಯ ರಾಜಸ್ಥಾನ್ ಗೆ ಚೆನ್ನೈ ಸೂಪರ್ ಕಿಂಗ್ಸ್ ಸವಾಲು

ಜೈಪುರ, ಮೇ 11: ಇತ್ತೀಚೆಗಷ್ಟೇ ಗೆಲುವಿನ ಲಯಕ್ಕೆ ಬಂದಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಬಲಾಡ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಮಧ್ಯೆ ಇಂದು ರಾಜಸ್ಥಾನದ ಜೈಪುರದಲ್ಲಿ ಕಾದಾಟ ನಡೆಯಲಿದೆ.
ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಚೆನ್ನೈ 2ನೇ ಸ್ಥಾನದಲ್ಲಿದ್ದು, ರಾಜಸ್ಥಾನ್ 6ನೇ ಸ್ಥಾನದಲ್ಲಿದೆ. ಆಡಿರುವ 10 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು ಒಟ್ಟು 14 ಅಂಕಗಳನ್ನು ಚೆನ್ನೈ ಕಲೆ ಹಾಕಿದ್ದರೆ, ಆಡಿರುವ 10 ಪಂದ್ಯಗಳಲ್ಲಿ 4 ಜಯದೊಂದಿಗೆ ರಾಜಸ್ಥಾನ್ 8 ಅಂಕಗಳನ್ನು ಸಂಪಾದಿಸಿದೆ.
ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್ ಜಯ ಸಾಧಿಸಿತ್ತು. ಹಾಗೆಯೇ ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದೆದುರು 15 ರನ್ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಜಿಗಿತ ಕಂಡಿತ್ತು.
ಚೆನ್ನೈ ಗೆಲುವಿನ ನಿರೀಕ್ಷೆಯಲ್ಲಿ ವಿಶಿಲ್ ಪೋಡು ತಂಡ.
ಪ್ಲೇಆಫ್ ಕನಸು ಜೀವಂತವಾಗಿರಬೇಕಾದರೆ ರಾಜಸ್ಥಾನ್ ರಾಯಲ್ಸ್ ತಂಡದಕ್ಕೆ ಗೆಲುವು ಅನಿವಾರ್ಯ. ಇನ್ನುಳಿದ ಎಲ್ಲಾ ಪಂದ್ಯಗಳನ್ನು ಅದು ಗೆಲ್ಲಲೇಬೇಕಿದೆ. ಹಾಗಂತ ಅಂಕಪಟ್ಟಿಯಲ್ಲಿ ಅಗ್ರ ಎರಡನೇ ಸ್ಥಾನದಲ್ಲಿರುವ ಚೆನ್ನೈ ಕೂಡ ಸುಲಭವಾಗಿ ಪಂದ್ಯವನ್ನು ಬಿಟ್ಟುಕೊಡುತ್ತದೆ ಎನ್ನುವಂತಿಲ್ಲ. ಒಟ್ಟಿನಲ್ಲಿ ಇಂದು ಗೆಲುವು ಯಾರ ತೆಕ್ಕೆಗೆ ಬೀಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ಯಾನ್ಸರ್ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜಸ್ಥಾನ್ ರಾಯಲ್ಸ್ ತಂಡ ಪಿಂಕ್ ಜೆರ್ಸಿಯಲ್ಲಿ ಪಂದ್ಯವನ್ನಾಡಲಿದ್ದು ಇಂದಿನ ಪಂದ್ಯ ಕೊಂಚ ವಿಶೇಷ ಮೆರಗು ಮೂಡಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications