For Quick Alerts
ALLOW NOTIFICATIONS  
For Daily Alerts
 

ಆರ್ಸಿಬಿ ಐಪಿಎಲ್ ಸವಾಲು ಅಂತ್ಯ: ರಾಜಸ್ಥಾನ್ 30 ರನ್ ಗೆಲುವು

RR vs RCB: Bangalore, Rajasthan lock horns in do-or-die clash

ಜೈಪುರ, ಮೇ 19: ಶನಿವಾರ ಜೈಪುರದಲ್ಲಿ ನಡೆದ ಬೆಂಗಳೂರು-ರಾಜಸ್ಥಾನ್ ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್ 30 ರನ್ ಭರ್ಜರಿ ಗೆಲುವು ದಾಖಲಿಸಿದೆ.

ರಾಜಸ್ಥಾನ್ ನೀಡಿದ್ದ 165 ರನ್ ಗುರಿ ಬೆನ್ನಟ್ಟಿದ ಬೆಂಗಳೂರು 19.2 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು ಕೇವಲ 134 ರನ್ ಪೇರಿಸಿ ರಾಜಸ್ಥಾನ್ ಎದುರಿಗೆ ತಲೆಬಾಗಿತು.

ಸ್ಕೋರ್ ಕಾರ್ಡ್

ಇಲ್ಲಿಗೆ ಈ ಐಪಿಎಲ್ ನಲ್ಲಿ ಆರ್ಸಿಬಿ ಕಪ್ಪಿನ ಕತೆ ಸಂಪೂರ್ಣ ಮುಗಿದೆ. ಈ ಸೋಲಿನೊಂದಿಗೆ ಬೆಂಗಳೂರು ತಂಡದ ಐಪಿಎಲ್ ಸವಾಲು ಕೊನೆಗೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ರಾಜಸ್ಥಾನ್ ರಾಹುಲ್ ತ್ರಿಪಾಠಿ 80 (58) ರನ್ ನೆರವಿನೊಂದಿಗೆ 164 ರನ್ ಪೇರಿಸಿ ಬೆಂಗಳೂರು ತಂಡಕ್ಕೆ 165 ರನ್ ಗುರಿ ನೀಡಿತ್ತು.

ನಾಯಕ ಅಜಿಂಕ್ಯ ರಹಾನೆ 33 (31), ಹೆನ್ರಿಚ್ ಕ್ಲಾಸೆನ್ 32 (21), ಕ್ರಿಷ್ಣಪ್ಪ ಗೌತಮ್ 14 (5) ರನ್ ಗಳಿಸಿ ರಾಜಸ್ಥಾನ್ ರಾಯಲ್ ತಂಡ ಎದುರಾಳಿಗೆ ತಕ್ಕ ಮಟ್ಟಿನ ರನ್ ಗುರಿ ನೀಡುವಲ್ಲಿ ನೆರವಾದರು.

ಚೇಸಿಂಗ್ ಗೆ ಇಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇವತ್ತೂ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿತು. ಪಾರ್ಥೀವ್ ಪಟೇಲ್ 33 (21), ಎಬಿ ಡಿವಿಲಿಯರ್ಸ್ 53 (35), ಟಿಮ್ ಸೌಥೀ 14 (17) ರನ್ ಕೊಡುಗೆ ಬಿಟ್ಟರೆ ತಂಡದ ಯಾರೂ ಎರಡಂಕಿ ರನ್ ಕೊಡುಗೆ ನೀಡಲಿಲ್ಲ.

ಮೋಯೀನ್ ಆಲಿ 1, ಮನ್ ದೀಪ್ ಸಿಂಗ್ 3, ಕಾಲಿನ್ ಡೆ ಗ್ರ್ಯಾಂಡ್ ಹೋಮ್ 2, ಸರ್ಫರಾಜ್ ಖಾನ್ 7, ಉಮೇಶ್ ಯಾದವ್ 0 ಸುತ್ತಿ ಪೆವಿಲಿಯನ್ ದಾರಿ ಹಿಡಿದಿದ್ದು ರಾರ್ಸಿಬಿ ಸೋಲಿಗೆ ದಾರಿಯಾಯಿತು.

Story first published: Saturday, May 19, 2018, 20:48 [IST]
Other articles published on May 19, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+