
ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ತಮ್ಮ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಹೃದಯಸ್ಪರ್ಶಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಧೋನಿಯವರನ್ನು ಮೊದಲು ಬೇಟಿ ಮಾಡಿದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ ಲೀಗ್ ಅಂತ್ಯದಲ್ಲಿ ಸಿಎಸ್‌ಕೆ ಪರ ಬ್ಯಾಟಿಂಗ್ ಮಾಡಿದ್ದ ರುತುರಾಜ್ ಸತತ ಮೂರು ಅರ್ಧಶತಕ ಕಲೆಹಾಕಿದ್ದರು. ಜೊತೆಗೆ ಧೋನಿಯಂತಹ ವಿಶ್ವಶ್ರೇಷ್ಠ ಆಟಗಾರನ ಜೊತೆ ಆಡುವ ಮೂಲಕ ನನ್ನ ಕನಸು ನನಸಾಗಿದೆ ಎಂದಿದ್ದರು.
ಸಿಎಸ್‌ಕೆ ಲೀಗ್ ಹಂತದಲ್ಲೇ ಹೊರಬಿದ್ದಿದ್ದರೂ, ಅದ್ಭುತ ಪ್ರದರ್ಶನದಿಂದಾಗಿ ಮಹಾರಾಷ್ಟ್ರ ಬ್ಯಾಟ್ಸ್‌ಮನ್ ಈಗ ಭಾರತದಲ್ಲಿ ಮನೆ ಮನೆಯ ಮಾತಾಗಿದ್ದಾರೆ. ಸಿಎಸ್‌ಕೆ ನೀರಸ ಅಭಿಯಾನದ ನಡುವೆ ರುತುರಾಜ್ ಗಾಯಕ್ವಾಡ್ ಉತ್ತಮ ಪ್ರದರ್ಶನ ತೋರಿದರು.
ಧೋನಿ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿರುವ ಗಾಯಕ್ವಾಡ್ ತನ್ನ ಮೊದಲ ಮೂರು ಪಂದ್ಯಗಳಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದು ಸೇರಿದಂತೆ ಕೇವಲ ಐದು ರನ್ ಗಳಿಸಿದ ನಂತರ ಧೋನಿ ಅವರನ್ನು ಹೇಗೆ ಪ್ರೇರೇಪಿಸಿದರು ಎಂದು ಪೋಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ.
2016 ಅಕ್ಟೋಬರ್‌ನಲ್ಲಿ ಜಾರ್ಖಂಡ್ ಮತ್ತು ಮಹಾರಾಷ್ಟ್ರ ತಂಡಗಳು ರಣಜಿ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಮಹಾರಾಷ್ಟ್ರ ಪರ ತಮ್ಮ ಚೊಚ್ಚಲ ಪಂದ್ಯದಲ್ಲೇ ಬೆರಳಿನ ಮುರಿತಕ್ಕೊಳಗಾಗಿದ್ದ ಗಾಯಕ್ವಾಡ್‌ರನ್ನು ಜಾರ್ಖಂಡ್ ಮೆಂಟರ್ ಆಗಿದ್ದ ಧೋನಿ ಸ್ವತಃ ಬಂದು ಮಾತನಾಡಿಸಿದ ಕ್ಷಣಗಳನ್ನು ಗಾಯಕ್ವಾಡ್ ಮೆಲುಕು ಹಾಕಿದ್ದಾರೆ.
''ಅಕ್ಟೋಬರ್ 2016 ನನ್ನ ಚೊಚ್ಚಲ ರಣಜಿ ಆಟದ ಸಮಯದಲ್ಲಿ ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾದೆ. ಅವರು ಜಾರ್ಖಂಡ್‌ನ ಮಾರ್ಗದರ್ಶಕರಾಗಿದ್ದರು ಮತ್ತು ಅವರು ಸ್ವತಃ ಬಂದು ಗಾಯಗೊಂಡಿದ್ದ ನನ್ನನ್ನು ಹೇಗಿದ್ದೇನೆ ಎಂದು ಕೇಳಿದರು !! " ಎಂದು ರುತುರಾಜ್ ಗಾಯಕ್ವಾಡ್ ಬರೆದಿದ್ದಾರೆ.
"ಅಕ್ಟೋಬರ್ 2020ರಂದು 3 ಕಡಿಮೆ ಅಂಕಗಳು, ಅವರು ಸ್ವತಃ ಬಂದು ಜೀವನದ ಬಗ್ಗೆ ಮಾತನಾಡಿದರು !! ಅವರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಲು ಸಾಧ್ಯವಾಗುವುದು ಅದೃಷ್ಟ ಮತ್ತು 22 ಯಾರ್ಡ್ಸ್ ಅವರೊಂದಿಗೆ ಹಂಚಿಕೊಳ್ಳುವುದು ಮತ್ತು ಇನ್ನಿಂಗ್ಸ್ ಮುಗಿಸುವುದು ಒಂದು ಕನಸುಗಿಂತ ಹೆಚ್ಚು! "ಎಂದು ಅವರು ಹೇಳಿದರು.