Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕೇರಳ ವೇಗಿ ಎಸ್‌. ಶ್ರೀಶಾಂತ್

S Shreeshanth

ಕ್ರಿಕೆಟ್ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನ ಕಂಡಂತಹ ಕೇರಳ ಎಕ್ಸ್‌ಪ್ರೆಸ್ ವೇಗಿ ಎಸ್‌. ಶ್ರೀಶಾಂತ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನ ಹರಾಜಿನಲ್ಲಿ ಬಿಕರಿಯಾಗದ ಶ್ರೀಶಾಂತ್, ಕೇರಳ ಪರ ರಣಜಿ ಕ್ರಿಕೆಟ್‌ನಲ್ಲಿ ಆಡಿದ್ದರು.

ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ಶ್ರೀಶಾಂತ್ ಕಾನೂನು ಹೋರಾಟ ಜಯಿಸಿ ಮತ್ತೆ ಭಾರತ ಕ್ರಿಕೆಟ್‌ಗೆ ಮರಳಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದ್ರೆ ಕೇರಳ ವೇಗಿ ಮತ್ತೆ ಆ ಅವಕಾಶ ಎಲ್ಲಿಯೂ ಸಿಗಲಿಲ್ಲ. ಈ ಬಾರಿ ಐಪಿಎಲ್‌ನಲ್ಲಿ ಕೊನೆಯ ಅವಕಾಶ ಎಂಬಂತೆ ಶ್ರೀಶಾಂತ್ ಅವಕಾಶಕ್ಕಾಗಿ ಕಾದಿದ್ದರು. ಆದ್ರೆ ಅವರ ಕನಸು ನುಚ್ಚು ನೂರಾಯಿತು.

ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಶ್ರೀಶಾಂತ್ ಕೇರಳ ಪರ ಮೊದಲ ಎರಡು ಪಂದ್ಯಗಳನ್ನು ಆಡಿದ್ದು ಎರಡು ವಿಕೆಟ್ ಪಡೆದಿದ್ದಾರೆ. ಬುಧವಾರ, ಅವರು ತಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಲು ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಸರಣಿ ಟ್ವೀಟ್‌ಗಳು ಮತ್ತು ಕಿರು ವೀಡಿಯೊವನ್ನು ಬಿಡುಗಡೆ ಮಾಡಿದರು.

"ನನ್ನ ಕುಟುಂಬ, ನನ್ನ ಸಹ ಆಟಗಾರರು ಮತ್ತು ಭಾರತದ ಜನರನ್ನು ಪ್ರತಿನಿಧಿಸುವುದು ಗೌರವವಾಗಿದೆ ಮತ್ತು ಆಟವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಸಹ. ತುಂಬಾ ದುಃಖದಿಂದ ಆದರೆ ವಿಷಾದವಿಲ್ಲದೆ, ನಾನು ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ, ನಾನು ಭಾರತೀಯ ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಮತ್ತು ಎಲ್ಲಾ ಸ್ವರೂಪದ ಕ್ರಿಕೆಟ್‌ನಿಂದಲೂ ನಿವೃತ್ತಿ ಪಡೆಯುತ್ತಿದ್ದೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಭಾರತ ಪರ ಎರಡು ವಿಶ್ವಕಪ್‌ನಲ್ಲಿ ಪ್ರತಿನಿಧಿಸಿದ್ದರು

ಭಾರತ ಪರ ಎರಡು ವಿಶ್ವಕಪ್‌ನಲ್ಲಿ ಪ್ರತಿನಿಧಿಸಿದ್ದರು

ಕೇರಳ ವೇಗಿ ಶ್ರೀಶಾಂತ್ ಭಾರತ ಪರ 2007ರ ಚೊಚ್ಚಲ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ತಂಡದ ಸದಸ್ಯರಾಗಿದ್ದರು. ತನ್ನ ಅಗ್ರೆಸ್ಸಿವ್ ಬೌಲಿಂಗ್ ಮೂಲಕ ಹೆಸರಾಗಿದ್ದ ಶ್ರೀಶಾಂತ್ ಭಾರತ ಪರ 27 ಟೆಸ್ಟ್, 53 ಏಕದಿನ ಪಂದ್ಯ ಮತ್ತು 10 ಟಿ20 ಪಂದ್ಯಗಳನ್ನಾಡಿದ್ದಾರೆ.

ಶ್ರೀಶಾಂತ್ ಅಕ್ಟೋಬರ್ 2005 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್‌ ನಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದರು, 50-ಓವರ್ ಕ್ರಿಕೆಟ್‌ನಲ್ಲಿ ಭಾರತಕ್ಕಾಗಿ 53 ಪಂದ್ಯಗಳಲ್ಲಿ 75 ವಿಕೆಟ್‌ಗಳನ್ನು ಪಡೆದರು. 27 ಟೆಸ್ಟ್ ಪಂದ್ಯಗಳಲ್ಲಿ ಮತ್ತು 10 ಟಿ20 ಪಂದ್ಯಗಳಲ್ಲಿ, ಕ್ರಮವಾಗಿ 87 ಮತ್ತು 7 ವಿಕೆಟ್ ಕಬಳಿಸಿದ್ದಾರೆ.

ಇನ್ನು ಶ್ರೀಶಾಂತ್ ಅವರು 74 ಪ್ರಥಮ ದರ್ಜೆ ಪಂದ್ಯಗಳಲ್ಲಿ 213 ವಿಕೆಟ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪೂರ್ಣಗೊಳಿಸಿದ್ದಾರೆ . ಅವರು ಲಿಸ್ಟ್-ಎ ಕ್ರಿಕೆಟ್‌ನಲ್ಲಿ 92 ಪಂದ್ಯಗಳಲ್ಲಿ 124 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರ ಜೊತೆಗೆ 65 ಟಿ20 ಪಂದ್ಯಗಳನ್ನಾಡಿದ್ದು, 54 ವಿಕೆಟ್ ಪಡೆದಿದ್ದಾರೆ.

ರಣಜಿಯಲ್ಲಿ ಕೊನೆಯ 2 ವಿಕೆಟ್ ಪಡೆದ ಶ್ರೀಶಾಂತ್

ರಣಜಿಯಲ್ಲಿ ಕೊನೆಯ 2 ವಿಕೆಟ್ ಪಡೆದ ಶ್ರೀಶಾಂತ್

ಮೇಘಾಲಯ ವಿರುದ್ಧ ಶ್ರೀಶಾಂತ್ ಕೊನೆಯ ಎರಡು ರಣಜಿ ವಿಕೆಟ್ ಪಡೆದರು. ಮೇಘಾಲಯ ವರ್ಸಸ್ ಕೇರಳ ರಣಜಿ ಪಂದ್ಯದಲ್ಲಿ ಆರ್ಯನ್ ಬೋರಾ ಅವರ ವಿಕೆಟ್ ಪಡೆದ ಬೆನ್ನಲ್ಲೇ ಶ್ರೀಶಾಂತ್ ಮುಂದಿನ ಎಸೆತದಲ್ಲಿ ಚೆಂಗಮ್ ಸಂಗ್ಮಾ ಅವರನ್ನ ಗೋಲ್ಡನ್ ಡಕೌಟ್ ಮಾಡಿದರು. ಈ ಮೂಲಕ ಶ್ರೀ 11.4 ಓವರ್‌ಗಳಲ್ಲಿ ಶ್ರೀಶಾಂತ್ ಎರಡು ಮೇಡನ್ ಸೇರಿದಂತೆ ಕೇವಲ 40 ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಪಡೆಯದೆ 57 ರನ್ ನೀಡಿದ್ದರು.

IPL 2022: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಖಲೆ ಹೊಂದಿರುವ 3 ನಾಯಕರು

ಬಿಸಿಸಿಐ ವಿರುದ್ಧ ಕಾನೂನು ಹೋರಾಟದ ಜಯ

ಬಿಸಿಸಿಐ ವಿರುದ್ಧ ಕಾನೂನು ಹೋರಾಟದ ಜಯ

ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ನಂತರ ಖುಲಾಸೆಗೊಂಡಿದ್ದರೂ ಸಹ, ಬಿಸಿಸಿಐ ಶ್ರೀಶಾಂತ್ ಅವರ ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿತು. ವರ್ಷಗಳ ಕಾನೂನು ಹೋರಾಟದ ನಂತರ ಅವರು ಅಂತಿಮವಾಗಿ ಪ್ರಕರಣವನ್ನು ಗೆದ್ದರು. ಕಳೆದ ವರ್ಷದ ರಣಜಿ ಟ್ರೋಫಿಯಲ್ಲಿ ಕೇರಳ ಪರ ಆಡಿದ ಶ್ರೀ ಪ್ರಥಮ ದರ್ಜೆ ಕ್ರಿಕೆಟ್‌ಗೆ ಮರಳಲು ಮುಂದಾಗಿದ್ದರು. ಅವರನ್ನು ಕೇರಳ ತಂಡಕ್ಕೆ ಸೇರಿಸಲಾಗಿತ್ತು. ಆದರೆ ಕೋವಿಡ್ ಮಹಾಮಾರಿಯಿಂದಾಗಿ ರಣಜಿ ಟ್ರೋಫಿಯನ್ನು ಕೈಬಿಟ್ಟ ನಂತರ ಅವರ ವಾಪಸಾತಿ ವಿಳಂಬವಾಯಿತು. ಅಂತಿಮವಾಗಿ, ಈ ಋತುವಿನ ರಣಜಿಯೊಂದಿಗೆ ಶ್ರೀ ಪುನರಾಗಮನ ಮಾಡಿದ್ದರು.

ಐಪಿಎಲ್: ಕಳೆದ 14 ಆವೃತ್ತಿಯ ಭಾಗವಾಗಿದ್ದರು ಈ 4 ಆಟಗಾರರು; ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಆಡಲ್ಲ!

ಮಟನ್ ರೋಲ್ ತಿನ್ನಲು ಹೋದ ಕೊಹ್ಲಿ ಕಳ್ಳರ ಕೈಗೆ ತಗ್ಲಾಕೊಂಡಿದ್ದು ಹೇಗೆ? ಆಮೇಲೇನಾಯ್ತು? | Oneindia Kannada
50 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ಶ್ರೀಶಾಂತ್

50 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ಶ್ರೀಶಾಂತ್

ಶ್ರೀಶಾಂತ್ ಭಾರೀ ನಿರೀಕ್ಷೆಯೊಂದಿಗೆ ಐಪಿಎಲ್ ಮೆಗಾ ಹರಾಜಿಗೆ ನೋಂದಾಯಿಸಿಕೊಂಡಿದ್ದರು. ಅವರ ಮೂಲ ಬೆಲೆ 50 ಲಕ್ಷ ರೂ. ಆಗಿತ್ತು. ಎರಡು ಹೊಸ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಐಪಿಎಲ್‌ಗೆ ಸೇರಿಕೊಂಡಿದ್ದರಿಂದ ತಮಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಶ್ರೀಶಾಂತ್ ಭರವಸೆ ವ್ಯಕ್ತಪಡಿಸಿದರು.

ಆದರೆ ಎರಡು ದಿನ ಬೆಂಗಳೂರಿನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಅವರ ಹೆಸರು ಕೂಡ ಪ್ರಸ್ತಾಪವಾಗಿಲ್ಲ. ಹರಾಜುದಾರ ಖರೀದಿಸಲು ಬಯಸುವ ಆಟಗಾರರ ಪಟ್ಟಿಯನ್ನು ಒದಗಿಸಲು ಸಂಪೂರ್ಣ ಫ್ರಾಂಚೈಸಿಯನ್ನು ಕೇಳಿದರು. ಇದರ ಪ್ರಕಾರ 10 ತಂಡಗಳು ನೀಡಿರುವ ಆಟಗಾರರ ಪಟ್ಟಿಯಲ್ಲಿ ಶ್ರೀ ಸ್ಥಾನ ಪಡೆದಿಲ್ಲ. ಹೀಗಾಗಿ ಅವರ ಹೆಸರು ಹರಾಜಿನಲ್ಲಿ ಕಾಣಿಸಿಕೊಂಡಿಲ್ಲ.

Story first published: Thursday, March 10, 2022, 9:37 [IST]
Other articles published on Mar 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+