ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಖಲೆ ಹೊಂದಿರುವ 3 ನಾಯಕರು

IPL 2022

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇತಿಹಾಸದಲ್ಲಿ ಅತ್ಯಂತ ಗುಣಮಟ್ಟದ ನಾಯಕರನ್ನ ಚುಟುಕು ಕ್ರಿಕೆಟ್ ಲೀಗ್‌ ಕಂಡಿದೆ. ಅದ್ರಲ್ಲೂ ಅತ್ಯಂತ ಯಶಸ್ವಿ ನಾಯಕರಾಗಿರುವ ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಮಹೇಂದ್ರ ಸಿಂಗ್ ಧೋನಿ ಅತಿ ಹೆಚ್ಚು ಬಾರಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ಗೆ ಐದು ಬಾರಿ ಕಪ್ ಗೆದ್ದು ಕೊಟ್ಟಿದ್ದು, ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ ನಾಲ್ಕು ಬಾರಿ ತಂಡವನ್ನ ಚಾಂಪಿಯನ್ ಮಾಡಿದ್ದಾರೆ. ಇನ್ನು ಮಾಜಿ ಆಟಗಾರ ಗೌತಮ್ ಗಂಭೀರ್ ಎರಡು ಬಾರಿ ಕೆಕೆಆರ್‌ಗೆ ಚಾಂಪಿಯನ್ ಮಾಲೆ ತೊಡಿಸಿದ್ದಾರೆ.

ಹೀಗೆ ಯಶಸ್ವಿ ನಾಯಕರ ಜೊತೆಯಲ್ಲಿ ಐಪಿಎಲ್‌ನಲ್ಲಿ ಅತ್ಯಂತ ಕೆಟ್ಟ ದಾಖಲೆ ಹೊಂದಿರುವ ನಾಯಕರು ಸಹ ಬಂದು ಹೋಗಿದ್ದಾರೆ. ಗೆಲುವಿನ ಸರಾಸರಿ ಅಡಿಯಲ್ಲಿ ಅವರಲ್ಲಿ ಟಾಪ್ 3 ನಾಯಕರ ಮಾಹಿತಿ ಈ ಕೆಳಗಿದೆ.

ಅಜಿಂಕ್ಯ ರಹಾನೆ

ಅಜಿಂಕ್ಯ ರಹಾನೆ

ರಾಜಸ್ತಾನ್ ರಾಯಲ್ಸ್ ಪರ ಅತಿ ಹೆಚ್ಚಿನ ಸೀಸನ್‌ಗಳಲ್ಲಿ ಭಾಗಿಯಾಗಿರುವ ಅಜಿಂಕ್ಯ ರಹಾನೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ನಿರ್ವಹಣೆಯ ದಾಖಲೆ ಹೊಂದಿದ್ದಾರೆ. ರಹಾನೆ ನಾಯಕತ್ವದಲ್ಲಿ ರಾಜಸ್ತಾನ್ ರಾಯಲ್ಸ್ 25 ಪಂದ್ಯಗಳನ್ನಾಡಿದ್ದು ಇದರಲ್ಲಿ ಕೇವಲ 9 ಪಂದ್ಯಗಳನ್ನಷ್ಟೇ ಗೆದ್ದಿದೆ, ಉಳಿದ 16 ಪಂದ್ಯಗಳನ್ನ ಸೋತಿದೆ. ಹೀಗಾಗಿ ರಹಾನೆ ಶೇಕಡಾ 36ರಷ್ಟು ಗೆಲುವಿನ ಸರಾಸರಿ ಹೊಂದಿದ್ದಾರೆ.

2019ರ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹರಾಜಾದ ರಹಾನೆ ಬಹಳ ಸಮಯದ ಬಳಿಕ ರಾಜಸ್ತಾನ್ ಫ್ರಾಂಚೈಸಿ ತೊರೆದರು. ಪ್ರಸಕ್ತ ಸೀಸನ್‌ನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್‌ ತಂಡದಲ್ಲಿ ರಹಾನೆ ಕಾಣಿಸಿಕೊಳ್ಳಲಿದ್ದಾರೆ.

ವಿಶ್ವದಾಖಲೆ ಮಾಡಲು ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿಗೆ ಇನ್ನೆರಡೇ ಹೆಜ್ಜೆ ಬಾಕಿ

ಮಹೆಲಾ ಜಯವರ್ಧನೆ

ಮಹೆಲಾ ಜಯವರ್ಧನೆ

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೆಲಾ ಜಯವರ್ಧನೆ ಕ್ರಿಕೆಟ್ ಲೋಕದ ಚುರುಕು ಬ್ರೈನ್‌ಗಳಲ್ಲಿ ಒಂದಾಗಿದೆ. ಅತ್ಯಂತ ಯಶಸ್ವಿಯಾಗಿ ಶ್ರೀಲಂಕಾ ತಂಡವನ್ನ ಮುನ್ನಡೆಸಿರುವ ಜಯವರ್ಧನೆ ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಆಗಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿ ಹೊಂದಿದ್ದಾರೆ.

ಶ್ರೀಲಂಕಾದ ಮಾಜಿ ನಾಯಕ ಐಪಿಎಲ್‌ನಲ್ಲಿ ಮೂರು ತಂಡಗಳ ನಾಯಕತ್ವ ವಹಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್‌ಡೆವಿಲ್ಸ್‌, ಕೊಚ್ಚಿ ಟಸ್ಕರ್ಸ್ ಕೇರಳ ತಂಡದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಆದ್ರೆ ಈ ಮೂರು ತಂಡಗಳಲ್ಲಿ ನಾಯಕನಾಗಿ ಈತನ ಸಾಧನೆ ತೀರಾ ಕೆಳಮಟ್ಟದಲ್ಲಿದೆ.

ಜಯವರ್ಧನೆ ಒಟ್ಟು 30 ಐಪಿಎಲ್ ಪಂದ್ಯಗಳಲ್ಲಿ ನಾಯಕರಾಗಿ ತಂಡವನ್ನ ಮುನ್ನಡೆಸಿದ್ದು, ಇದರಲ್ಲಿ ಕೇವಲ 9 ಪಂದ್ಯಗಳನ್ನಷ್ಟೇ ಗೆದ್ದಿದ್ದು, 16 ಪಂದ್ಯಗಳನ್ನ ಸೋತಿದ್ದಾರೆ ಮತ್ತು ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.

ಐಪಿಎಲ್: ಕಳೆದ 14 ಆವೃತ್ತಿಯ ಭಾಗವಾಗಿದ್ದರು ಈ 4 ಆಟಗಾರರು; ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಆಡಲ್ಲ!

ಮಟನ್ ರೋಲ್ ತಿನ್ನಲು ಹೋದ ಕೊಹ್ಲಿ ಕಳ್ಳರ ಕೈಗೆ ತಗ್ಲಾಕೊಂಡಿದ್ದು ಹೇಗೆ? ಆಮೇಲೇನಾಯ್ತು? | Oneindia Kannada
ಕುಮಾರ ಸಂಗಕ್ಕಾರ

ಕುಮಾರ ಸಂಗಕ್ಕಾರ

ಶ್ರೀಲಂಕಾ ಕ್ರಿಕೆಟ್ ತಂಡದ ಮತ್ತೊಬ್ಬ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಫೇಲ್ಯೂರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಅತ್ಯಂತ ಕಡಿಮೆ ಗೆಲುವಿನ ಸರಾಸರಿ ಹೊಂದಿರುವ ನಾಯಕನಾಗಿ ಸಂಗಕ್ಕಾರ ಕಾಣಿಸಿಕೊಂಡಿದ್ದಾರೆ.

ಮಹೆಲಾ ಜಯವರ್ಧನೆ ರೀತಿಯಲ್ಲಿ ಕುಮಾರ ಸಂಗಕ್ಕಾರ ಕೂಡ ಮೂರು ಐಪಿಎಲ್ ತಂಡಗಳ ನಾಯಕರಾಗಿ ಕಾಣಿಸಿಕೊಂಡಿದ್ದರು. ಡೆಕ್ಕನ್ ಚಾರ್ಜಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ನಾಯಕರಾಗಿದ್ದರು. ಒಟ್ಟು 47 ಪಂದ್ಯಗಳಲ್ಲಿ ತಂಡಗಳನ್ನ ಮುನ್ನಡೆಸಿರುವ ಸಂಗಕ್ಕಾರ ಗೆದ್ದಿರೋದು ಕೇವಲ 15 ಪಂದ್ಯಗಳು. ಇನ್ನು 30 ಪಂದ್ಯಗಳಲ್ಲಿ ಸೋಲನ್ನ ಕಂಡಿದ್ದು, ಎರಡು ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿದೆ. ಹೀಗಾಗಿ ಸಂಗಕ್ಕಾರ ಗೆಲುವಿನ ಸರಾಸರಿ ಕೇವಲ ಶೇಕಡಾ 34.04 ರಷ್ಟಿದ್ದು, ಐಪಿಎಲ್‌ನಲ್ಲಿ ಅತ್ಯಂತ ಕಡಿಮೆ ಸರಾಸರಿಯ ಗೆಲುವಿನ ದಾಖಲೆಯಾಗಿದೆ.

ಮೊದಲ ಬಾರಿಗೆ 2009ರಲ್ಲಿ ಕಿಂಗ್ಸ್‌ ಇಲೆವೆನ್ ಪಂಜಾಬ್ ತಂಡವನ್ನ ಮುನ್ನಡೆಸಿದ್ದ ಸಂಗಕ್ಕಾರ ತಂಡವು ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿತು. 2011ರಲ್ಲಿ ಡೆಕ್ಕನ್ ಚಾರ್ಜಸ್ ತಂಡಕ್ಕೆ ವಲಸೆ ಹೋದ ಸಂಗಕ್ಕಾರ, ತಂಡವನ್ನ ಏಳನೇ ಸ್ಥಾನಕ್ಕೆ ಕೊನೆಗೊಳಿಸಿದರು. 2012ರಲ್ಲಿ ನಂತರದ ಸೀಸನ್‌ನಲ್ಲೂ ಕೂಡ ಡೆಕ್ಕನ್ ಚಾರ್ಜಸ್ ಅದೃಷ್ಟ ಬದಲಾಗಲಿಲ್ಲ. ಡೆಕ್ಕನ್ 8ನೇ ಸ್ಥಾನದಲ್ಲಿ ಕೊನೆಗೊಂಡಿದೆ.

Story first published: Thursday, March 10, 2022, 9:38 [IST]
Other articles published on Mar 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X