SA 20: ಫಾಫ್ ಡುಪ್ಲೆಸಿಸ್ ನಾಯಕನ ಆಟ: ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ಭರ್ಜರಿ ಜಯ

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್‌ಎ 20 ಟೂರ್ನಿಯಲ್ಲಿ ಸಿಎಸ್‌ಕೆ ಒಡೆತನ ಜೋಬರ್ಗ್ ಸೂಪರ್ ಕಿಂಗ್ಸ್ ತಂಡ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ವಿರುದ್ಧ ಅಮೋಘ ಜಯ ದಾಖಲಿಸಿದೆ.
ಜೋ ಬರ್ಗ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಜೋ ಬರ್ಗ್ ಸೂಪರ್ ಕಿಂಗ್ಸ್ ಡುಪ್ಲೆಸಿಸ್ 92, ರೀಜಾ ಹೆಂಡ್ರಿಕ್ಸ್ ಉತ್ತಮ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು.
ಸವಾಲಿನ ಮೊತ್ತವನ್ನು ಬೆನ್ನತ್ತಿದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 136 ರನ್ ಗಳಿಸುವ ಮೂಲಕ 24 ರನ್‌ಗಳ ಸೋಲನುಭವಿಸಿತು. ಈ ಪಂದ್ಯದ ಫಲಿತಾಂಶದ ಬಳಿಕ ಎಂಐ ಕೇಪ್‌ಟೌನ್ ತಂಡ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ.
ಪಾಯಿಂಟ್ ಪಟ್ಟಿಯಲ್ಲಿರುವ ಅಗ್ರ ನಾಲ್ಕು ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದ್ದು, ಉಳಿದ ಎರಡು ತಂಡಗಳು ಟೂರ್ನಿಯಿಂದ ನಿರ್ಗಮಿಸಲಿವೆ. ಎಸ್‌ಎ 20 ಮೊದಲ ಆವೃತ್ತಿಯಲ್ಲಿ ಎಂಐ ಕೇಪ್‌ಟೌನ್ ಮೊದಲನೇ ತಂಡವಾಗಿ ಟೂರ್ನಿಯಿಂದ ಹೊರಬಿದ್ದಿದೆ.

ತಂಡಕ್ಕೆ ಆಸರೆಯಾದ ನಾಯಕ
ಮೊದಲು ಬ್ಯಾಟಿಂಗ್ ಮಾಡಿ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕ ಫಾಫ್ ಡುಪ್ಲೆಸಿಸ್ ಮತ್ತು ರೀಝಾ ಹೆಂಡ್ರಿಕ್ಸ್ ಉತ್ತಮ ಆರಂಭ ಒದಗಿಸಿದರು. 14.1 ಓವರ್ ಗಳಲ್ಲಿ ಈ ಜೋಡಿ ಮೊದಲನೇ ವಿಕೆಟ್‌ಗೆ 119 ರನ್ ಗಳಿಸಿದರು. ರೀಝಾ ಹೆಂಡ್ರಿಕ್ಸ್ 36 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು.
ಮೊದಲನೇ ವಿಕೆಟ್ ಪತನದ ನಂತರ ಬಂದ ಉಳಿದ ಬ್ಯಾಟರ್ ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಮತ್ತೊಂದು ಕಡೆ ಡುಪ್ಲೆಸಿಸ್ ತಮ್ಮ ಉತ್ತಮ ಆಟವನ್ನು ಮುಂದುವರೆಸಿದರು. 61 ಎಸೆತಗಳಲ್ಲಿ 7 ಬೌಂಡರಿ ನಾಲ್ಕು ಸಿಕ್ಸರ್ ಸಹಿತ 92 ರನ್ ಗಳಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ಕಾರಣವಾದರು.

ಸೂಪರ್ ಕಿಂಗ್ಸ್ ಮಾರಕ ಬೌಲಿಂಗ್
ಸವಾಲಿನ ಮೊತ್ತ ಬೆನ್ನತ್ತಿದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡಕ್ಕೆ ಆರಂಭದಲ್ಲೇ ಆಘಾತ ಸಿಕ್ಕಿತು. ಮಹಿಶ್ ತೀಕ್ಷಣ ಇನ್ನಿಂಗ್ಸ್‌ನ ಎರಡನೇ ಓವರ್ ನಲ್ಲೇ ಆಡಮ್ ರೋಸಿಂಗ್ಟನ್ ವಿಕೆಟ್ ಪಡೆದರು. ಮೊದಲನೇ ಪಂದ್ಯವನ್ನಾಡಿದ ಟೆಂಬಾ ಬವುಮಾ 34 ಎಸೆತಗಳಲ್ಲಿ 5 ಬೌಂಡರಿ ಎರಡು ಸಿಕ್ಸರ್ ಸಹಿತ 50 ರನ್ ಸಿಡಿಸಿದರು, ತಮ್ಮ ತಂಡವನ್ನು ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 136 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು.
ಕೈಲ್ ಸೈಮಂಡ್ಸ್ 4 ಓವರ್ ಗಳಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಮಹೀಶ್ ತೀಕ್ಷಣ, ಗೆರಾಲ್ಡ್ ಕೊಯ್ಟ್ಜ್ ಮತ್ತು ರೊಮಾರಿಯೋ ಶೆಫರ್ಡ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ಆರ್ ಸಿಬಿ ಅಭಿಮಾನಿಗಳಿಗೆ ಸಂತಸ
ಫಾಫ್ ಡುಪ್ಲೆಸಿಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್ ಸಿಬಿ ತಂಡದ ನಾಯಕರಾಗಿದ್ದಾರೆ. ಎಸ್‌ಎ20 ಟೂರ್ನಿಯಲ್ಲಿ ಅವರು ಉತ್ತಮ ಫಾರ್ಮ್‌ನಲ್ಲಿರುವುದು ಅಭಿಮಾನಿಗಳ ಖುಷಿಯನ್ನು ಎರಡುಪಟ್ಟುಗೊಳಿಸಿದೆ.
ಅಲ್ಲದೆ ಎಸ್‌ಎ 20ಯಲ್ಲಿ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಡುಪ್ಲೆಸಿಸ್ ಅಗ್ರಸ್ಥಾನದಲ್ಲಿದ್ದಾರೆ. ಎಂಟು ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿರುವ ಅವರು 52.71 ಸರಾಸರಿ ಮತ್ತು 148 ಸ್ಟ್ರೈಕ್‌ರೇಟ್‌ನಲ್ಲಿ 369 ರನ್ ಗಳಿಸಿದ್ದಾರೆ. ಎಸ್‌ಎ 20 ಲೀಗ್‌ನಲ್ಲಿ ಮೊದಲ ಶತಕ ಗಳಿಸಿದ್ದು ಕೂಡ ಫಾಫ್ ಡುಪ್ಲೆಸಿಸ್, ಎರಡು ಅರ್ಧಶತಕಗಳನ್ನು ಕೂಡ ಸಿಡಿಸಿ ಮಿಂಚಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications