For Quick Alerts
ALLOW NOTIFICATIONS  
For Daily Alerts
 

Breaking News: ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಕ್ವಿಂಟನ್ ಡಿಕಾಕ್

Quinton De Kock

ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ದಿಢೀರ್ ಎಂದು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತದ ವಿರುದ್ಧ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಇಂದು ಕೊನೆಗೊಂಡ ಮೊದಲ ಟೆಸ್ಟ್ ಪಂದ್ಯವನ್ನಾಡಿದ ಡಿಕಾಕ್ ಇದ್ದಕ್ಕಿದ್ದಂತೆ ಸದ್ಯದಿಂದಲೇ ಜಾರಿಗೆ ಬರುವಂತೆ ಟೆಸ್ಟ್ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದಾರೆ.

29ರ ಹರೆಯದ ಡಿ ಕಾಕ್ ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಉದ್ದೇಶಿಸಿದ್ದಾರೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಮೂಲಕ ಭಾರತ ವಿರುದ್ಧ ಇಂದು ಕೊನೆಗೊಂಡ ಟೆಸ್ಟ್ ಪಂದ್ಯವೇ ಅವರ ಕೊನೆಯ ಟೆಸ್ಟ್ ಪಂದ್ಯವಾಗಿದೆ. ಇದರಲ್ಲಿ ಡಿ ಕಾಕ್ ಏಳು ಕ್ಯಾಚ್‌ಗಳನ್ನು ತೆಗೆದುಕೊಳ್ಳುವ ಜೊತೆಗೆ ಎರಡು ಇನ್ನಿಂಗ್ಸ್‌ಗಳಲ್ಲಿ 34 ಮತ್ತು 21 ರನ್ ಗಳಿಸಿದರು.

''ಇದು ನಾನು ತುಂಬಾ ಸುಲಭವಾಗಿ ತೆಗೆದುಕೊಂಡ ನಿರ್ಧಾರವಲ್ಲ, ನಾನು ಮತ್ತು ಸಶಾ ನಮ್ಮ ಮೊದಲ ಮಗುವನ್ನು ಸ್ವಾಗತಿಸಲಿರುವಾಗ ನನ್ನ ಭವಿಷ್ಯ ಹೇಗಿರುತ್ತದೆ ಮತ್ತು ನನ್ನ ಜೀವನದಲ್ಲಿ ಏನು ಆದ್ಯತೆ ನೀಡಬೇಕು ಎಂಬುದರ ಕುರಿತು ಯೋಚಿಸಲು ನಾನು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದೇನೆ. ಈ ಜಗತ್ತಿನಲ್ಲಿ ನಮ್ಮ ಕುಟುಂಬಕ್ಕೂ ಮೀರಿ ನನಗೇನು ಇಲ್ಲ. ನನ್ನ ಕುಟುಂಬ ನನಗೆ ಎಲ್ಲವೂ ಆಗಿದೆ ಮತ್ತು ನಮ್ಮ ಜೀವನದ ಈ ಹೊಸ ಮತ್ತು ಉತ್ತೇಜಕ ಅಧ್ಯಾಯದಲ್ಲಿ ಅವರೊಂದಿಗೆ ಹೆಚ್ಚು ಸಮಯ ಹೊಂದಲು ನಾನು ಬಯಸುತ್ತೇನೆ" ಎಂದು ಡಿ ಕಾಕ್ ಹೇಳಿದರು.

2020/21 ರ ವರ್ಷದಲ್ಲಿ ಡಿಕಾಕ್ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾದ ನಾಯಕತ್ವವನ್ನು ಸಹ ವಹಿಸಿದ್ದರು. ಇನ್ನು ದಕ್ಷಿಣ ಆಫ್ರಿಕಾ ಪರ ವೈಟ್ ಬಾಲ್ ಕ್ರಿಕೆಟ್ ಆಡುವುದನ್ನು ಮುಂದುವರಿಸುವ ಉದ್ದೇಶ ಹೊಂದಿರುವುದಾಗಿ ಅವರು ಹೇಳಿದ್ದಾರೆ.

"ಇದು ಪ್ರೋಟಿಯಾ ಆಗಿ ನನ್ನ ವೃತ್ತಿಜೀವನದ ಅಂತ್ಯವಲ್ಲ, ನಾನು ವೈಟ್ ಬಾಲ್ ಕ್ರಿಕೆಟ್‌ಗೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ ಮತ್ತು ನಿರೀಕ್ಷಿತ ಭವಿಷ್ಯಕ್ಕಾಗಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನನ್ನ ದೇಶವನ್ನು ಪ್ರತಿನಿಧಿಸುತ್ತೇನೆ. ಭಾರತದ ವಿರುದ್ಧದ ಈ ಟೆಸ್ಟ್ ಸರಣಿಯ ಉಳಿದ ಭಾಗದಲ್ಲಿ ನನ್ನ ಸಹ ಆಟಗಾರರಿಗೆ ಎಲ್ಲಾ ಶುಭಾಶಯಗಳು ತಿಳಿಸಲಿದ್ದೇನೆ" ಎಂದು ಅವರು ಹೇಳಿದರು.

ಕ್ವಿಂಟನ್ ಡಿ ಕಾಕ್ ಫೆಬ್ರವರಿ 2014 ರಲ್ಲಿ ಪೋರ್ಟ್ ಎಲಿಜಬೆತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ಅವರು 54 ಟೆಸ್ಟ್ ಪಂದ್ಯಗಳಲ್ಲಿ ಆರು ಶತಕಗಳೊಂದಿಗೆ 3300 ರನ್ ಗಳಿಸಿದರು.

ಕ್ವಿಂಟನ್ ಡಿಕಾಕ್ ಟೆಸ್ಟ್‌ ಕೆರಿಯರ್

ಪಂದ್ಯ : 54
ರನ್: 3300
ಸರಾಸರಿ: 38.82
ಶತಕ : 6
ಅರ್ಧಶತಕ: 22
ಗರಿಷ್ಠ: 141

Story first published: Friday, December 31, 2021, 12:22 [IST]
Other articles published on Dec 31, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+