ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್: ಮೊದಲ ದಿನದಾಟದಂತ್ಯಕ್ಕೆ 238 ರನ್ ಕಲೆಹಾಕಿದ ದ. ಆಫ್ರಿಕಾ

ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 238 ರನ್ ಕಲೆಹಾಕಿದೆ.
ನ್ಯೂಜಿಲೆಂಡ್‌ನ ಪ್ರಬಲ ಬೌಲಿಂಗ್ ದಾಳಿಯೆದುರು ತಾಳ್ಮೆಯ ಹಾಗೂ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದ ದಕ್ಷಿಣ ಆಫ್ರಿಕಾ ಆರಂಭಿಕ ವಿಕೆಟ್‌ಗೆ ಶತಕದ ಜೊತೆಯಾಟ ಪಡೆಯಿತು. ನಾಯಕ ಡೀನ್ ಎಲ್ಗರ್ 101 ಎಸೆತಗಳಲ್ಲಿ 41 ರನ್‌ಗಳಿಸಿದ್ರೆ, ಸೆರೆಲ್ ಎರ್ವಿ 221 ಎಸೆತಗಳಲ್ಲಿ 108 ರನ್ ಕಲೆಹಾಕಿದ್ರು. ಸರೆಲ್ ಎರ್ವಿ ಇನ್ನಿಂಗ್ಸ್‌ನಲ್ಲಿ 14 ಬೌಂಡರಿಗಳಿದ್ದವು.
ಮೊದಲ ವಿಕೆಟ್ ಶತಕದ ಜೊತೆಯಾಟವಾಡಿದ್ದ ಈ ಜೋಡಿಯನ್ನ ಅನುಭವಿ ಕಿವೀಸ್ ಬೌಲರ್ ಟಿಮ್ ಸೌಥಿ ಬೇರ್ಪಡಿಸಿದ್ರು. ತಂಡದ ಸ್ಕೋರ್ 111ರನ್ ಆಗಿದ್ದಾಗ 41ರನ್ ಕಲೆಹಾಕಿದ್ದ ಡೀನ್ ಎಲ್ಗರ್ ಕ್ಲೀನ್ ಬೌಲ್ಡ್ ಆದರು. ಮೊದಲ ವಿಕೆಟ್ ಪತನದ ಬಳಿಕ ಏಡನ್ ಮಕ್ರಾಮ್ ತಾಳ್ಮೆಯ ಜೊತೆಯಾಟದ ಮೂಲಕ ಸರೆಲ್ ಎರ್ವಿಗೆ ಸಾಥ್ ನೀಡಿದ್ರು. 103 ಎಸೆತಗಳಲ್ಲಿ 42 ರನ್ ಸಿಡಿಸಿದ್ದ ಮಕ್ರಾಮ್ ಎಡಗೈ ಬೌಲರ್ ನೀಲ್ ವ್ಯಾಗ್ನರ್‌ಗೆ ವಿಕೆಟ್ ಒಪ್ಪಿಸಿದ್ರು.
ಇದ್ರ ಬೆನ್ನಲ್ಲೇ ಶತಕ ಸಿಡಿಸಿದ್ದ ಎರ್ವಿ 108 ರನ್‌ಗೆ ಮ್ಯಾಟ್ ಹೆನ್ರಿಗೆ ವಿಕೆಟ್ ಒಪ್ಪಿಸಿದ್ರು. 199 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಕ್ಷಣವೇ ಮತ್ತೆರಡು ವಿಕೆಟ್ ಬಿಟ್ಟುಕೊಟ್ಟಿತು.
ದಿನದಾಟದಂತ್ಯದಲ್ಲಿ ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಟೆಂಬಾ ಬವುಮಾ ಅಜೇಯ 22 ರನ್ ಮತ್ತು ರಾಸ್ಸಿ ವ್ಯಾನ್ ಡರ್ ಡಸ್ಸೆನ್ ಅಜೇಯ 13 ರನ್ ಕಲೆಹಾಕುವ ಮೂಲಕ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 3 ವಿಕೆಟ್ ನಷ್ಟಕ್ಕೆ 238 ಕಲೆಹಾಕಿದೆ. ನ್ಯೂಜಿಲೆಂಡ್ ಪರ ಟಿಮ್ ಸೌಥಿ, ನೀಲ್ ವ್ಯಾಗ್ನರ್, ಮ್ಯಾಟ್ ಹೆನ್ರಿ ತಲಾ 1 ವಿಕೆಟ್ ಪಡೆದಿದ್ದಾರೆ.
ಇನ್ನು ಕ್ರೈಸ್ಟ್‌ಚರ್ಚ್‌ನಲ್ಲೇ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಇನ್ನಿಂಗ್ಸ್ ಸೇರಿದಂತೆ 276 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications