ಸಚಿನ್ ಸಚಿನ್ ಎಂದು ಕೂಗುತ್ತಾ ಖುಷಿಯಿಂದ ಭಾವುಕರಾದ ಫ್ಯಾನ್ಸ್!
ಮುಂಬೈ, ಮೇ 26: ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದೇವರು ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆ 'ಸಚಿನ್ ಎ ಬಿಲಿಯನ್ ಡ್ರೀಮ್ಸ್ ಬೆಳ್ಳಿತೆರೆಯ ಮೇಲೆ ನೋಡಿದ ಪ್ರೇಕ್ಷಕರು ಭಾವುಕರಾಗಿದ್ದಾರೆ. ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಡುತ್ತಾ ತಮ್ಮ ಹಿಂದಿನ ದಿನಗಳನ್ನು ಸ್ಮರಿಸಿದ್ದಾರೆ.
'ಸಚಿನ್... ಸಚಿನ್' ಎಂದು ಉದ್ಗರಿಸುತ್ತಾ ಹರ್ಷದಿಂದ ಕುಣಿದಾಡಿದ್ದಾರೆ. ಸಚಿನ್ ಎಂದರೆ ಕೇವಲ ಒಬ್ಬ ಕ್ರೀಡಾಪಟುವಲ್ಲ, ಭಾವಾನಾತ್ಮಕ ಸಂಕೇತ ಎಂಬುದು ಮೊದಲ ದಿನದ ಮೊದಲ ಶೋನಲ್ಲೆ ಸಾಬೀತಾಗಿದೆ. ಹಿಂದಿ ಸಿನಿಮಾ ರಂಗ ಕೂಡಾ ಸ್ಟಾರ್ ಬ್ಯಾಟ್ಸ್ ಮನ್ ಸಚಿನ್ ಅವರ ಭರ್ಜರಿ ಎಂಟ್ರಿಯನ್ನು ಸ್ವಾಗತಿಸಿದೆ. [ಬೆಳ್ಳಿತೆರೆ ಮೇಲೆ ಕ್ರಿಕೆಟ್ ದೇವರು ಸಚಿನ್ ಆಟ, ಥ್ರಿಲ್ಲಾದ ಫ್ಯಾನ್ಸ್]
ಸಚಿನ್ ಅವರ ಜೀವನಗಾಥೆ ಯುವ ಜನಾಂಗಕ್ಕೆ ಸ್ಪೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಹಾಡಿ ಹೊಗಳಿದ್ದರು. ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಖರೀದಿಸಿ, ಸಿನಿಮಾ ನೋಡುವ ಕಾತುರದಲ್ಲಿರುವುದಾಗಿ ಘೋಷಿಸಿದ್ದರು.[ವಿಮರ್ಶೆ: 'ಕ್ರಿಕೆಟ್ ದೇವರ' ಅದ್ಭುತ ಆಟಕ್ಕೆ ಪ್ರೇಕ್ಷಕ ಮೂಕವಿಸ್ಮಿತ]
ಈಗ ಮೊದಲ ಶೋ ನೋಡಿದ ಬಳಿಕ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಟ್ವೀಟ್ ಮೂಲಕ ತೋರಿಸಿದ್ದಾರೆ. ಚಿತ್ರದಲ್ಲಿ ಏನು ಇಷ್ಟವಾಯಿತು ಎಂಬುದನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ. ಅಭಿಮಾನಿಗಳ ಟ್ವೀಟ್ ಗಳ ಮಹಾಪೂರದಲ್ಲಿ ಒಂದಿಷ್ಟು ನಿಮ್ಮ ಮುಂದಿಡುತ್ತಿದ್ದೇವೆ..

ವಿಶ್ವದೆಲ್ಲೆಡೆ 2800 ಸ್ಕ್ರೀನ್ ಗಳಲ್ಲಿ
ಚಿತ್ರಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಸಂಗೀತ ನೀಡಿದ್ದಾರೆ. ರವಿ ಭಗಚಂದ್ರ ಎಂಬ ನಿರ್ಮಾಪಕರು 200 ನಾಟೌಟ್ ಎಂಬ ಬ್ಯಾನರ್ ನಡಿ ಈ ಚಿತ್ರವನ್ನು ಜೇಮ್ಸ್ ಎರ್ ಸ್ಕಿನ್ ನಿರ್ದೇಶಿಸಿದ್ದಾರೆ. ವಿಶ್ವದೆಲ್ಲೆಡೆ 2800 ಸ್ಕ್ರೀನ್ ಗಳಲ್ಲಿ ತೆರೆಕಂಡಿದೆ.
ಸಚಿನ್ ಚಿತ್ರದ ಗಳಿಕೆ
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆ ಕಮರ್ಷಿಯಲ್ ಚಿತ್ರವಲ್ಲದಿದ್ದರೂ ಸಾಕಷ್ಟು ಕ್ರೇಜ್ ಹುಟ್ಟಿಹಾಕಿದೆ. ಬಾಲಿವುಡ್ ಚಿತ್ರಗಳ ಜತೆ ಪೈಪೋಟಿ ಅಲ್ಲದಿದ್ದರೂ, ಸರಿ ಸುಮಾರು 10-15 ಕೋಟಿರು ಆರಂಭದ ದಿನವೇ ಗಳಿಸುವ ನಿರೀಕ್ಷೆಯಿದೆ ಎಂದು ಚಿತ್ರದ ವಿತರಕ ಅನಿಲ್ ಥಡಾನಿ ಹೇಳಿದ್ದಾರೆ. ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಅವರು ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಸಚಿನ್ ಮೇನಿಯಾ ಎಲ್ಲೆಡೆ
ಸಚಿನ್ ಮೇನಿಯಾ ಎಲ್ಲೆಡೆ ಶುರುವಾಗಿದ್ದು, ಮೊದಲ ದಿನದ ಮೊದಲ ಶೋ ನೋಡಿದ ಖುಷಿಯಲ್ಲಿ ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ.
ಸಚಿನ್ ಪಾತ್ರಕ್ಕೆ ಸಚಿನ್
ಸುಶಾಂತ್ ಅವರು ಧೋನಿ ಪಾತ್ರ ಮಾಡಬಹುದು, ಇಮ್ರಾನ್ ಹಶ್ಮಿ ಅವರು ಅಜರ್ ರಂತೆ ನಟಿಸಬಹುದು, ಆದರೆ, ಸಚಿನ್ ಅಂದರೆ ಸಚಿನ್ ಅಷ್ಟೇ, ಹೀಗಾಗಿ ಈ ಬಯೋಪಿಕ್ ಇಷ್ಟವಾಗುತ್ತದೆ.
ಫ್ಯಾನ್ಸಿಗೆ ಇಷ್ಟವಾದ ದೃಶ್ಯ
ವಿಶ್ವಕಪ್ ಗೆಲ್ಲುವ ಕನಸು ನನಸಾದ ಕ್ಷಣ ಸಚಿನ್ ಅವರನ್ನು ಟೀಂ ಇಂಡಿಯಾದ ಸದಸ್ಯರು ಹೊತ್ತುಕೊಂಡು ಮೈದಾನದಲ್ಲಿ ಮೆರವಣಿಗೆ ಮಾಡಿದ ಕ್ಷಣ ಭಾವನಾತ್ಮಕತೆ ಉತ್ತುಂಗಕ್ಕೇರಿಸುತ್ತದೆ.
ಲೆಜೆಂಡ್ ಸಿನಿಮಾ
ಮಕ್ಕಳು ಟ್ಯೂಬ್ ಲೈಟ್ ನೋಡ ಬಯಸಿದರೆ, ವಯಸ್ಕರು ಬಾಹುಬಲಿ ನೋಡಿದರೆ, ಲೆಜೆಂಡ್ಸ್ #SachinABillionDreams ನೋಡುತ್ತಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications