Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಡೊ-ಆಸೀಸ್‌ ಕದನ: ನೆನಪಿನಾಳ ಕೆದಕಿದ ಸಚಿನ್‌ ತೆಂಡೂಲ್ಕರ್‌!

Sachin relives Indias battle against Australia in 2011 World Cup

ಲಂಡನ್‌, ಜೂನ್‌ 09: ಐಸಿಸಿ ಟೂರ್ನಿಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಣ ಕದನ ಸದಾ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಇತ್ತಂಡಗಳು ಮುಖಾಮುಖಿಯಾದ ಸಂದರ್ಭದಲ್ಲಿ ಕ್ರಿಕೆಟ್‌ ಅಭಿಮಾನಿಗಳಿಗೆ ರೋಚಕ ಪಂದ್ಯದ ರಸದೌತಣ ಸಿದ್ದವಾಗಿರುತ್ತದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇದೀಗ ಪ್ರಸಕ್ತ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಸಂದರ್ಭದಲ್ಲಿ ಭಾರತದ ಬ್ಯಾಟಿಂಗ್‌ ದಂತ ಕತೆ ಸಚಿನ್‌ ತೆಂಡೂಲ್ಕರ್‌ 2011ರ ವಿಶ್ವಕಪ್‌ ಟೂರ್ನಿಯಲ್ಲಿನ ಇಂಡೊ-ಆಸೀಸ್‌ ಕದನವನ್ನು ಮೆಲುಕು ಹಾಕಿದ್ದಾರೆ.

2011ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಎರಡನೇ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಅಹಮದಾಬಾದ್‌ನಲ್ಲಿ ಪೈಪೋಟಿ ನಡೆಸಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ತಂಡವನ್ನು 260ಕ್ಕೆ ನಿಯಂತ್ರಿಸಿದ ಭಾರತ ತಂಡ ಬಳಿಕ ಸಚಿನ್‌ ತೆಂಡೂಲ್ಕರ್‌, ಗೌತಮ್‌ ಗಂಭೀರ್‌ ಮತ್ತು ಯುವರಾಜ್‌ ಸಿಂಗ್‌ ಅವರ ಅರ್ಧಶತಕಗಳ ಬಲದಿಂದ 47.4 ಓವರ್‌ಗಳಲ್ಲಿ ಗುರಿ ಮುಟ್ಟಿತು.

ಈ ಪಂದ್ಯದ ನೆನಪಿನ ಬುತ್ತಿ ಬಿಚ್ಚಿಟ್ಟಿರುವ ಸಚಿನ್‌, "ಅಹಮದಾಬಾದ್‌ನಲ್ಲಿ ಬಿಸಿ ಹವಾಗುಣ ಹೆಚ್ಚಿದ್ದ ಕಾರಣಕ್ಕೆ ನನ್ನ ಆಹಾರ ಕ್ರಮವನ್ನು ಸಂಪೂರ್ಣವಾಗಿ ಬದಲಾಯಿಸಿದ್ದೆ. ಖಾರದ ಪದಾರ್ಥಗಳನ್ನು ಕಡಿಮೆ ಮಾಡಿ, ಮೊಸರು ಅನ್ನ, ಮಜ್ಜಿಗೆ, ಎಳನೀರು ಸೇವಿಸುವ ಮೂಲಕ ಉತ್ತಮ ಸ್ಥಿತಿ ಕಾಯ್ದುಕೊಂಡಿದ್ದೆ,'' ಎಂದು ಹೇಳಿದ್ದಾರೆ.

ಎಬಿ ಡಿ'ವಿಲಿಯರ್ಸ್‌ ಸೇವೆ ತಿರಸ್ಕರಿಸಿದ್ದಕ್ಕೆ ಕಾರಣಕೊಟ್ಟ ದಕ್ಷಿಣ ಆಫ್ರಿಕಾ!

"ಮತ್ತೊಂದು ನೆನಪೇನೆಂದರೆ ಯುವರಾಜ್‌ ಸಿಂಗ್‌ ಮತ್ತು ಸುರೇಶ್‌ ರೈನಾ ನಡುವೆ ಜೊತೆಯಾಟ ನಡೆಯುತ್ತಿತ್ತು. ನಾನು ಮಸಾಜ್‌ ಟೇಬಲ್‌ ಬಳಿ ಇದ್ದೆ. ಸೆಹ್ವಾಗ್‌ ನನ್ನ ಬಳಿ ಇದ್ದರು. ಸೆಹ್ವಾಗ್‌ಗೆ ನಾನು ಮಲಗಿದ್ದೇನೆ ಎಂದನಿಸಿತ್ತು. ಆದರೆ, ನಾನು ನಿದ್ರೆ ಮಾಡಿರಲಿಲ್ಲ. ಸೆಹ್ವಾಗ್‌ ಮಾತನಾಡುತ್ತಿದದ್ದೆಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದೆ. ಸೆಹ್ವಾಗ್‌, ಮಸಾಜ್‌ ಮಾಡುವವರ ಬಳಿ ನೀವೇಕೆ ಮಸಾಜ್‌ ಮಾಡುತ್ತಿದ್ದೀರಿ ಅವರು ಮಲಗಿದ್ದಾರೆ. ಇದಕ್ಕೆ ಮಸಾಜರ್‌ ಇಲ್ಲ ಅವರು ಎಚ್ಚರ ವಿದ್ದಾರೆ ಎಂದರು,'' ಎಂದು ಸಚಿನ್ ಡ್ರೆಸಿಂಗ್‌ ರೂಮ್‌ ಒಳಗಿನ ತಮಾಷೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

"2011ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಕುರಿತಾಗಿ ಆಲೋಚಿಸಿದರೆ ನನಗೆ ನೆನಪಾಗುವುದು ಇವರೆಡೇ ಸಂಗತಿ,'' ಎಂದು ಸಚಿನ್‌ ತೆಂಡೂಲ್ಕರ್‌ ಹೇಳಿದ್ದಾರೆ. ಟೂರ್ನಿಯಲ್ಲಿ ಸಚಿನ್‌ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು.

Story first published: Sunday, June 9, 2019, 15:57 [IST]
Other articles published on Jun 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+