Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿ, ರೋಹಿತ್ ನಾಯಕತ್ವದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಸಚಿನ್

IPL 2019 : ಸಚಿನ್ ಕೊಟ್ರು ಶಾಕಿಂಗ್ ಹೇಳಿಕೆ..!?
Sachin Tendulkar has his say on MS Dhoni and Rohit Sharma’s captaincy

ಹೈದರಾಬಾದ್, ಮೇ 12: ಮೊದಲ ಎಸೆತದಿಂದಲೇ ಪಂದ್ಯದ ಸನ್ನಿವೇಶಗಳಿಗೆ ತಕ್ಕಂತೆ ಜಾಗೃತವಾಗುವ ಗುಣದಿಂದ ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ನಲ್ಲಿ ಯಶಸ್ವಿ ನಾಯಕರನ್ನಾಗಿಸಿದೆ ಎಂದು ಭಾರತದ ಕ್ರಿಕೆಟ್‌ ದಂತಕತೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

'ಧೋನಿಯ ಆಟದ ಜಾಗೃತಿ ಉತ್ತಮವಾಗಿ ದಾಖಲಿಸಲ್ಪಟ್ಟಿದೆ. ಇತ್ತ ರೋಹಿತ್ ಕೂಡ ರಾಷ್ಟ್ರೀಯ ತಂಡದಲ್ಲಿ ಉಪ ನಾಯಕ ಸ್ಥಾನದಲ್ಲಿರುವ ಆಟಗಾರ. ಇಬ್ಬರೂ ಐಪಿಎಲ್‌ನ ಯಶಸ್ವಿ ನಾಯಕರು. ಇಬ್ಬರೂ ನಾಯಕರಾದಾಗಿನಿಂದ ಎರಡೂ ತಂಡಗಳು ಮೂರು ಬಾರಿ ಪ್ರಶಸ್ತಿ ಗೆದ್ದಿವೆ' ಎಂದು ಸಚಿನ್ ಹೇಳಿಕೊಂಡಿದ್ದಾರೆ.

ಐಪಿಎಲ್ 2019 ಫೈನಲ್: ಮುಂಬೈ vs ಚೆನ್ನೈ, Live ಸ್ಕೋರ್‌ಕಾರ್ಡ್

1
45949

ಇಬ್ಬರ ನಾಯಕತ್ವದ ಬಗ್ಗೆ ಮಾತನಾಡುತ್ತ ತೆಂಡೂಲ್ಕರ್, 'ಧೋನಿ ಕೆಲ ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್ ನಾಯಕತ್ವವೂ ಚೆನ್ನಾಗಿದೆ. ಇಬ್ಬರಲ್ಲೂ ಆಟದ ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವ ಗುಣವಿದೆ. ಇಬ್ಬರೂ ಶಾರ್ಪ್ ಇದ್ದಾರೆ ಎಂದು ನನಗನ್ನಿಸುತ್ತಿದೆ' ಎಂದರು.

ಧೋನಿ ನಾಯಕತ್ವದ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್ ಮತ್ತು ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಗಳು 2019ರಲ್ಲೂ ಐಪಿಎಲ್ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದವು. ಎರಡೂ ತಂಡಗಳು ಐಪಿಎಲ್ ಫೈನಲ್ ಜಯದಲ್ಲಿ 3-3ರ ಸಮಬಲ ಸಾಧಿಸಿವೆ.

Story first published: Sunday, May 12, 2019, 21:57 [IST]
Other articles published on May 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+