For Quick Alerts
ALLOW NOTIFICATIONS  
For Daily Alerts
 

ಬಸ್ ತಪ್ಪಿಸಿಕೊಂಡ ಕ್ರಿಕೆಟ್ ದೇವರು ಮಾಡಿದ್ದೇನು?

ಲಂಡನ್‌, ಜು. 13: : ಶೋಯೆಬ್ ಅಕ್ತರ್ ಯಾರ್ಕರ್, ಬ್ರೇಟ್ ಲೀ ಬೌನ್ಸರ್, ಶೆನ್ ಬಾಂಡ್ ವೇಗ, ಸ್ಟೇನ್, ಮಾಲಿಂಗ ನೇರ ಎಸೆತಗಳನ್ನು ತಡೆದು ಬೌಂಡರಿಗಟ್ಟುವ ಮಾಸ್ಟರ್ ಬ್ಲಾಸ್ಟರ್ ಗೆ ಬಸ್ ಒಂದನ್ನು ತಡೆಯಲು ಸಾಧ್ಯವಾಗಲಿಲ್ಲ.

ಇಂಗ್ಲೆಂಡಿನಲ್ಲಿದ್ದ ಕ್ರಿಕೆಟ್ ದೇವರಿಗೆ ಬಸ್ ಮಿಸ್ ಆಗಿದೆ. ವಿಂಬಲ್ಡನ್ ಸವಿಯುತ್ತಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಿಡುವಿನ ವೇಳೆಯಲ್ಲಿ ಹ್ಯಾಸ್‌ಲೇ ಆಕ್ಸ್‌ಫ‌ರ್ಡ್‌ಶಯರ್‌ನ ಹೊರವಲಯಕ್ಕೆ ಭೇಟಿ ನೀಡಿದ್ದರು. ಆದರೆ ಅಲ್ಲಿಂದ ನಗರಕ್ಕೆ ಆಗಮಿಸಲು ಇದ್ದ ಕೊನೆ ಬಸ್ ನ್ನು ತಪ್ಪಿಸಿಕೊಂಡಿದ್ದಾರೆ.[ವಿಂಬಲ್ಡನ್ ಅಂಗಳದಲ್ಲಿ ಕ್ರಿಕೆಟ್ ದಿಗ್ಗಜ]

cricket


ಆಗ ಕ್ರಿಕೆಟ್ ದೇವರ ನೆರವಿಗೆ ಬಂದಿದ್ದು ಕೈಯಲ್ಲಿದ್ದ ಸ್ಮಾರ್ಟ್ ಫೋನ್. ತಕ್ಷಣ ಫೋನ್ ಕೈಗೆತ್ತಿಕೊಂಡ ಮಾಸ್ಟರ್ ಬ್ಲಾಸ್ಟರ್, 'ನಾನೀಗ ಗ್ರೇಟ್‌ ಹ್ಯಾಸ್‌ಲೇ ಆಕ್ಸಫ‌ರ್ಡ್‌ಶಯರ್‌ನಲ್ಲಿದ್ದೇನೆ. ಕೊನೆಯ ಬಸ್ಸು ತಪ್ಪಿಹೋಗಿದೆ. ಯಾರಾದರೂ ನನಗೆ ಲಿಫ್ಟ್ ಕೊಡಲು ಬರುವಿರಾ' ಎಂಬ ಟ್ವಿಟ್ ಮಾಡಿದ್ದಾರೆ. ಅಲ್ಲದೇ ಬಸ್‌ ಸ್ಟಾಪ್‌ನಲ್ಲಿ ಒಬ್ಬಂಟಿಯಾಗಿ ಇರುವ ಫೋಟೋ ಹಾಕಿದ್ದಾರೆ. [ರೋಮ್ ರೋಮ್ ರೋಮಾಂಚನ ಎಂದ 'ಸಚಿನ್ನ']

ಇದಾದ ಕೆಲವೇ ಕ್ಷಣದಲ್ಲಿ ಅಭಮಾನಿಗಳಿಂದ ಪ್ರತಿಕ್ರಿಯೆಗಳ ಮಹಾಪೂರ ಹರಿದು ಬರಲು ಆರಂಭಿಸಿದೆ. 'ಹೆದರಬೇಡಿ - ದೇವರಿಗೆ ಕೂಡ ಬಸ್‌ ಮಿಸ್‌ ಆಗುತ್ತೆ'. ನಿಮ್ಮನ್ನು ಹತ್ತಿಸಿಕೊಳ್ಳುವ ಅದೃಷ್ಟ ಬಸ್ ಗಿಲ್ಲ, ಈಗಷ್ಟೇ ನಿಮ್ಮ ಸಂದೇಶ ನೋಡಿದೆ -ಒಂದು ತಾಸಿನೊಳಗೆ ಅಲ್ಲಿರುತ್ತೇನೆ, ಇಂಗ್ಲೆಂಡ್ ಕೂಡಾ ನಿಮ್ಮ ಮನೆಯೇ ಹೀಗೆ ನೂರಾರು ಸಂದೇಶಗಳು ಹರಿದು ಬಂದವು. ಅಂತೂ ಕ್ರಿಕೆಟ್ ದೇವರು ಹೇಗೋ ಮನೆ ಸೇರಿಕೊಂಡರು.[ನರಸಿಂಹರಾಜು ಮೊಮ್ಮಕ್ಕಳಿಂದ ಲಾಸ್ಟ್ ಬಸ್]



ಸಚಿನ್‌, ಪತ್ನಿ ಅಂಜಲಿ, ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ರೋಜರ್‌ ಫೆಡರರ್‌ ಮತ್ತು ಆಂಡಿ ಮರೇ ನಡುವಿನ ವಿಂಬಲ್ಡನ್‌ ಸೆಮಿಫೈನಲ್ ಪಂದ್ಯವನ್ನು ಜತೆಯಾಗಿ ವೀಕ್ಷಣೆ ಮಾಡಿದ್ದರು.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+