Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭಿಮಾನಿಗಳನ್ನು 'ಬಸ್' ಹತ್ತಿಸಿದ ಕ್ರಿಕೆಟ್ ದೇವರು

ಬೆಂಗಳೂರು, ಜು. 14: ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಲಕ್ಷಾಂತರ ಅಭಿಮಾನಿಗಳನ್ನು ಬಸ್ ಹತ್ತಿಸಿದ್ದಾರೆ! ಲಾಸ್ಟ್ ಬಸ್ ಜಸ್ಟ್ ಮಿಸ್ ಎಂದಿದ್ದ ಸಚಿನ್ ಅದು ಮಿಸ್ ಅಲ್ಲ ಜಸ್ಟ್ ಜೋಕ್ ಎಂದಿದ್ದಾರೆ.

ಎರಡು ದಿನದ ಹಿಂದೆ ನಾನು ಬಸ್ ತಪ್ಪಿಸಿಕೊಂಡಿದ್ದೇನೆ, ಡ್ರಾಪ್ ಕೊಡುತ್ತೀರಾ? ಎಂದು ಕೇಳಿದ್ದ ಟ್ವೀಟ್ ನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಮಾಸ್ಟರ್ ಕೇಳಿಕೊಂಡಿದ್ದಾರೆ.[ಕ್ರಿಕೆಟ್ ದೇವರು ಬಸ್ ತಪ್ಪಿಸಿಕೊಂಡರೆ?]

cricket

ಸಚಿನ್ ತಾವು ಬಸ್ ತಪ್ಪಿಸಿಕೊಂಡಿದ್ದೇನೆ ಎಂದು ಬರೆದ ಕೆಲವೇ ಕ್ಷಣದಲ್ಲಿ ಪ್ರತಿಕ್ರಿಯೆಗಳು ಆಗಮಿಸತೊಡಗಿದ್ದವು. ಅಲ್ಲದೇ ಕೆಲ ಅಭಿಮಾನಿಗಳು ಕೂಡಲೇ ಆಗಮಿಸಿ ಡ್ರಾಪ್ ನೀಡುತ್ತೇವೆ ಎಂದು ಹೇಳಿದ್ದರು. ಬ್ಯಾಟಿಂಗ್ ದಿಗ್ಗಜನನ್ನು ತಮ್ಮಕಾರಿನಲ್ಲಿ ಕುಳ್ಳಿರಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ಆದರೆ, ಸೋಮವಾರ ಬೆಳಗ್ಗೆ ಜುಲೈ 10 ರಂದು ಹಾಕಿದ್ದೇ ಫೋಟೋವನ್ನು ಹಾಕಿರುವ ಸಚಿನ್ 'ಇದು ಬಸ್ ಗಾಗಿ ಅಲ್ಲ, ಕುಚೇಷ್ಟೆ ಮಾಡಿದೆ' ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ತಮ್ಮ 7.15 ಮಿಲಿಯನ್ ಟ್ವಿಟ್ಟರ್ ಫಾಲೋವರ್ ಗಳ ಜತೆ ಎಲ್ಲರನ್ನು ಸಚಿನ್ 'ಬಸ್' ಹತ್ತಿಸಿದ್ದಾರೆ. ಗೆಳೆಯನ ಭೇಟಿಗೆ ತೆರಳಿದ್ದಾಗ ಬಸ್ ನಿಲ್ದಾಣದಲ್ಲಿ ತೆಗೆದಿದ್ದ ಫೋಟೋವನ್ನು ಸಚಿನ್ ಹಾಕಿ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದು ಈಗ ಬಹಿರಂಗವಾಗಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+