Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ಓಪನಿಂಗ್ ಬ್ಯಾಟಿಂಗ್ ಮಾಡಿದನ್ನು ಕಂಡು ಆಶ್ಚರ್ಯಗೊಂಡ್ರಂತೆ ಸಚಿನ್ ತೆಂಡೂಲ್ಕರ್

tendulkar

ವಿರಾಟ್ ಕೊಹ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಲಿಮಿನೇಟರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಓಪನಿಂಗ್ ಬ್ಯಾಟಿಂಗ್ ಮಾಡುವುದನ್ನು ನೋಡಿ ಭಾರತದ ಮಾಜಿ ಬ್ಯಾಟ್ಸ್‌ಮನ್ ಮತ್ತು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್ 2020 ರಲ್ಲಿ ಮೊದಲ ಬಾರಿಗೆ ಓಪನಿಂಗ್ ಬ್ಯಾಟಿಂಗ್ ಮಾಡಿದರು. ಎಸ್‌ಆರ್‌ಹೆಚ್ ವಿರುದ್ಧ ಕೇವಲ ಆರು ರನ್ ಗಳಿಸಲು ಸಾಧ್ಯವಾಯಿತು

ಸಚಿನ್ ತೆಂಡೂಲ್ಕರ್ ಜೇಸನ್ ಹೋಲ್ಡರ್ ಅವರ ಆರಂಭಿಕ ಸ್ಪೆಲ್ ಇಡೀ ಪಂದ್ಯವನ್ನ ಸನ್‌ರೈಸರ್ಸ್‌ ಹೈದರಾಬಾದ್ ಕಡೆಗೆ ತಿರುಗಿಸಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ
ವಿರಾಟ್ ಕೊಹ್ಲಿ ಇನ್ನಿಂಗ್ಸ್ ಅನ್ನು ತೆರೆಯುವುದನ್ನು ನೋಡಿ ಆಶ್ಚರ್ಯವಾಯಿತು ಮತ್ತು ಇದು ವಿಭಿನ್ನ ತಂತ್ರವಾಗಿದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಹೈದ್ರಾಬಾದ್ ಪರ ಬೊಂಬಾಟ್ ಬೌಲಿಂಗ್ ಮಾಡಿದ ಜೇಸನ್ ಹೋಲ್ಡರ್ ಮೂರು ವಿಕೆಟ್ ಪಡೆದು ಮಿಂಚಿದ್ರು. ಆರ್‌ಸಿಬಿ ಏಳು ವಿಕೆಟ್ ನಷ್ಟಕ್ಕೆ 131ರನ್ ಕಲೆಹಾಕಿತು.

132ರನ್ ಗುರಿ ಬೆನ್ನತ್ತಿದ ಎಸ್‌ಆರ್‌ಹೆಚ್ ಕೂಡ ಮೊದಲ ಓವರ್‌ನಲ್ಲೇ ಗೋಸ್ವಾಮಿ ವಿಕೆಟ್ ಕಳೆದುಕೊಂಡಿತು. ಡೇವಿಡ್ ವಾರ್ನರ್ ಕೂಡ 17ರನ್‌ಗೆ ಸಿರಾಜ್‌ಗೆ ಔಟಾದ್ರು. ಮನೀಶ್ ಪಾಂಡೆ ಆಟ 24ರನ್‌ಗೆ ಮುಕ್ತಾಯವಾಯಿತು. ಆದರೆ ತನ್ನ ತಾಳ್ಮೆಯ ಆಟದೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟ ಕೇನ್ ವಿಲಿಯಮ್ಸನ್ ಅಜೇಯ 50 ರನ್‌ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ವಿಲಿಯಮ್ಸನ್‌ಗೆ ಸಾಥ್ ಕೊಟ್ಟ ಜೇಸನ್ ಹೋಲ್ಡರ್ 24ರನ್‌ಗಳಿಸಿ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಧಾರವಾದ್ರು.

Story first published: Saturday, November 7, 2020, 22:57 [IST]
Other articles published on Nov 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+