ಗೆಳತಿ ಜೀವ ಉಳಿಸಿದ ಟ್ರಾಫಿಕ್ ಪೊಲೀಸ್ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ಸಚಿನ್ ತೆಂಡೂಲ್ಕರ್

ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲಿಸಿ ಮತ್ತು ವಾಹನ ಚಲಾಯಿಸುವಾಗ ತಪ್ಪದೇ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಿ ಎಂದು ತಮ್ಮ ಅಭಿಮಾನಿಗಳಿಗೆ ಹಾಗೂ ಅನುಯಾಯಿಗಳಿಗೆ ಪದೇ ಪದೇ ಸಂದೇಶಗಳನ್ನು ನೀಡುವ ಸಚಿನ್ ತೆಂಡೂಲ್ಕರ್ ಇದೀಗ ಟ್ರಾಫಿಕ್ ಪೊಲೀಸರಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.
ಹೌದು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಒಂದನ್ನು ಮಾಡಿದ್ದು ತನ್ನ ಸ್ನೇಹಿತೆಯ ಪ್ರಾಣ ಉಳಿಸಿದ ಟ್ರಾಫಿಕ್ ಪೊಲೀಸರೊಬ್ಬರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದನ್ನು ಬರೆದುಕೊಂಡಿದ್ದಾರೆ. ಈ ಕುರಿತಾಗಿ ವಿಶೇಷ ಪತ್ರವೊಂದನ್ನು ಬರೆದು ಟ್ವಿಟ್ಟರ್ ಮೂಲಕ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್ ಪ್ರಪಂಚವನ್ನು ಸುಂದರವನ್ನಾಗಿ ಮಾಡಲು ಪ್ರಯತ್ನಿಸುತ್ತಿರುವ ಸುಂದರ ಹೃದಯಗಳನ್ನು ಹಾಡಿ ಹೊಗಳಿ ಕೊಂಡಾಡಿದ್ದಾರೆ.
ಹೀಗೆ ಟ್ವಿಟ್ಟರ್ ಮೂಲಕ ಬಹಿರಂಗ ಪತ್ರವೊಂದನ್ನು ಬರೆದು ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್ ಕೆಲ ದಿನಗಳ ಹಿಂದಷ್ಟೇ ನನಗೆ ಹತ್ತಿರವಾದ ಸ್ನೇಹಿತೆಯೋರ್ವಳು ಅಪಘಾತಕ್ಕೊಳಗಾಗಿ ಗಂಭೀರ ಪರಿಸ್ಥಿತಿಯಲ್ಲಿದ್ದಳು. ದೇವರ ಕೃಪೆಯಿಂದ ಸದ್ಯ ಈಗ ಅವಳು ಚೇತರಿಸಿಕೊಂಡಿದ್ದು ಆರೋಗ್ಯವಾಗಿದ್ದಾಳೆ. ಹೀಗೆ ಅಪಘಾತಕ್ಕೊಳಗಾದ ನನ್ನ ಸ್ನೇಹಿತೆಗೆ ಆ ಸಮಯದಲ್ಲಿ ಸಹಾಯ ಮಾಡಿದ್ದು ಓರ್ವ ಟ್ರಾಫಿಕ್ ಪೋಲಿಸ್. ಆಕೆ ತೀವ್ರ ಗಾಯಕ್ಕೊಳಗಾಗಿದ್ದನ್ನು ಗಮನಿಸಿದ ಆ ಟ್ರಾಫಿಕ್ ಪೋಲಿಸ್ ಕೂಡಲೇ ಆಕೆಯನ್ನು ಆಟೋದಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವುದರ ಮೂಲಕ ಸಮಯಪ್ರಜ್ಞೆ ಮೆರೆದು ಜೀವ ಉಳಿಸಿದ್ದಾರೆ.
ಹೀಗೆ ನನ್ನ ಗೆಳತಿಯ ಜೀವ ಉಳಿಸಿದ ಆ ಸಂಚಾರಿ ಆರಕ್ಷಕನನ್ನು ನಾನು ಖುದ್ದಾಗಿ ಭೇಟಿ ಮಾಡಿ ಕೃತಜ್ಞತೆಯನ್ನು ಸಲ್ಲಿಸಿದೆ. ಹೀಗೆ ನಮ್ಮ ನಿಮ್ಮ ಸುತ್ತಮುತ್ತ ಕಷ್ಟದಲ್ಲಿದ್ದವರಿಗೆ ತಮ್ಮ ಮಿತಿಯನ್ನು ಮೀರಿ ಸಹಾಯ ಮಾಡುವುದರ ಮೂಲಕ ಜೀವ ಉಳಿಸುವ ಹಲವಾರು ಮಂದಿ ಇದ್ದಾರೆ. ಅಂತಹ ಸುಂದರ ಹೃದಯಗಳಿರುವ ಜನರಿಂದ ಪ್ರಪಂಚ ಕೂಡ ಸುಂದರವಾಗಿದೆ. ಈ ರೀತಿ ಯಾವುದೇ ಲಾಭವನ್ನು ಬಯಸದೇ ಸಹಾಯ ಮಾಡುವ ಸಹೃದಯಿಗಳನ್ನು ಗುರುತಿಸಿ ನಾವು ಕೃತಜ್ಞತೆಯನ್ನು ಸಲ್ಲಿಸಬೇಕು. ಇನ್ನೂ ಕೆಲವರು ನಮಗೆ ತಿಳಿಯದಂತೆಯೇ ಇಂತಹ ಹಲವಾರು ಒಳ್ಳೆಯ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅದರಲ್ಲಿಯೂ ದೇಶದ ಜನರ ರಕ್ಷಣೆಯನ್ನು ಮಾಡುತ್ತಿರುವ ಪ್ರತಿಯೊಬ್ಬ ಟ್ರಾಫಿಕ್ ಪೊಲೀಸರಿಗೂ ಸಹ ತುಂಬು ಧನ್ಯವಾದಗಳು.
ನಾವೆಲ್ಲರೂ ಟ್ರಾಫಿಕ್ ನಿಯಮಗಳನ್ನು ತಪ್ಪದೇ ಪಾಲಿಸೋಣ ಹಾಗೂ ಸಮಯವನ್ನು ಉಳಿಸಲು ಅಡ್ಡದಾರಿಯಲ್ಲಿ ಚಾಲನೆ ಮಾಡಿ ಇನ್ನೊಬ್ಬರ ಜೀವವನ್ನು ಬಲಿ ಕೊಡುವುದು ಬೇಡ ಎಂದು ಸಚಿನ್ ತೆಂಡೂಲ್ಕರ್ ಪತ್ರದಲ್ಲಿ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications