ತಮಿಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್

ಮುಂಬೈ, ಜುಲೈ 31: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ಚಿತ್ರದಲ್ಲಿ ತೆಂಡೂಲ್ಕರ್ ಕೂಡ ನಟಿಸಲಿದ್ದಾರೆ. '800' ತಮಿಳು ಚಿತ್ರದ ಮೂಲಕ ಹಿರಿತೆರೆಗೆ ಸಚಿನ್ ಬಂದು ಹೋಗಲಿದ್ದಾರೆ.
ಕ್ರಿಕೆಟ್ ಜಗತ್ತಿನ 'ನಗೆ ಹಂತಕ' ಮುರಳೀಧರನ್ ಅವರ ಬಯೋಪಿಕ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ನಟಿಸುತ್ತಿರುವ ವಿಚಾರವನ್ನು 'ಡಿಎಆರ್ ಮೋಷನ್' ಸಿನಿಮಾ ನಿಮಾರ್ಣ ಸಂಸ್ಥೆ ಖಾತರಿಪಡಿಸಿದೆ. ಈ ಬಯೋಪಿಕ್ ಮುಂದಿನ ವರ್ಷ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲಿದೆ.
'ಸಚಿನ್ ಒಬ್ಬ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಮತ್ತು ಮುರಳಿ ಕೂಡ ವಿಶ್ವಶ್ರೇಷ್ಠ ಬೌಲರ್. ಇಬ್ಬರ ಕ್ರಿಕೆಟ್ ವೃತ್ತಿ ಜೀವನವೂ ಸಮಾನಾಂತರ ರೇಖೆಯಲ್ಲಿ ಸಾಗಿತ್ತು. ಹೀಗಾಗಿ ಸಚಿನ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ,' ಎಂದು ಚಿತ್ರ ನಿರ್ದೇಶಕ ಸೇತುಮಾಧವನ್ ಡೆಕನ್ ಕ್ರಾನಿಕಲ್ ಜೊತೆ ಹೇಳಿಕೊಂಡಿದ್ದಾರೆ.
ಸಚಿನ್ ಮತ್ತು ಮುರಳೀಧರನ್ ಇಬ್ಬರೂ ವೃತ್ತಿ ಜೀವನದಲ್ಲಿ ಅಪೂರ್ವ ದಾಖಲೆಗಳನ್ನು ಹೊಂದಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ತೆಂಡೂಲ್ಕರ್ ಮತ್ತು ಮುರಳೀಧರನ್ ಇಬ್ಬರೂ ಶ್ರೇಷ್ಠ ಬ್ಯಾಟ್ಸ್ಮನ್, ಬೌಲರ್ ಅನ್ನಿಸಿಕೊಂಡವರು. ಸಚಿನ್ ಅತ್ಯಧಿಕ ರನ್ ದಾಖಲೆ ಹೊಂದಿದ್ದರೆ, ಮುರಳೀಧರನ್ ಅತ್ಯಧಿಕ ವಿಕೆಟ್ ಸರದಾರರಾಗಿ ಗುರುತಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications