Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಶ್ರೇಷ್ಠ ‍XI : ಸಚಿನ್ -ಗೇಲ್ ಓಪನಿಂಗ್ ಜೋಡಿ

ಮೆಲ್ಬೋರ್ನ್, ಫೆ.10: ವಿಶ್ವಕಪ್ ಟೂರ್ನಿಗೂ ಸಚಿನ್ ತೆಂಡೂಲ್ಕರ್ ಬಿಡಿಸಲಾರದ ನಂಟು. ವಿಶ್ವಕಪ್ ನ ಅನೇಕಾನೇಕ ದಾಖಲೆಗಳ ಪುಟಗಳಲ್ಲಿ ಸಚಿನ್ ಹೆಸರು ಅಗ್ರಪಂಕ್ತಿಯಲ್ಲಿರುತ್ತದೆ. ಈ ಬಾರಿ ವಿಶ್ವಕಪ್ ಗೆ ರಾಯಭಾರಿಯಾಗಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ವಿಶ್ವಶ್ರೇಷ್ಠ XI ಓಪನರ್ಸ್ ಟೀಂನಲ್ಲಿ ಹೆಸರಿಸಲಾಗಿದೆ.

ಬ್ರಿಟನ್ ಜನತೆ ಆಯ್ಕೆ ಮಾಡಿರುವ ವಿಶ್ವ ಶ್ರೇಷ್ಠ ಆರಂಭಿಕ ಆಟಗಾರರ 11 ಜನರಿರುವ ತಂಡದಲ್ಲಿ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಮೊದಲ ಸ್ಥಾನ ನೀಡಲಾಗಿದೆ. ಸಚಿನ್ ಅವರಿಗೆ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ರನ್ನು ಜೋಡಿ ಮಾಡಲಾಗಿದೆ. ಟಾಪ್ ಓಪನರ್ಸ್ ಇರುವ ತಂಡವನ್ನು ಕ್ರಿಕೆಟ್.ಕಾಂ.ಎಯುನಲ್ಲಿ ಪ್ರಕಟಿಸಲಾಗಿದೆ.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ವೆಬ್ ಸೈಟ್ ನಡೆಸಿದ ಸಮೀಕ್ಷೆಯಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಶೇ 29ರಷ್ಟು ಮತಗಳು ಲಭಿಸಿದೆ. ಗೇಲ್ ಅವರಿಗೆ ಶೇ 25ರಷ್ಟು ಮತ ಹಾಗೂ ಗಿಲ್ ಕ್ರಿಸ್ಟ್ ಗೆ ಶೇ 20ರಷ್ಟು ಸಿಕ್ಕಿದೆ. ಉಳಿದಂತೆ ಹಶೀಂ ಅಮ್ಲಾ ಶೇ 12ರಷ್ಟು ಮತ ಪಡೆದು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಸನತ್ ಜಯಸೂರ್ಯ ಅವರಿಗೆ ಕೇವಲ ಶೇ 8ರಷ್ಟು ಜನರ ಮೆಚ್ಚುಗೆ ಲಭಿಸಿದೆ. [ಶತಕ ವೀರರ ಪೈಕಿ ಸಚಿನ್ ಇಸ್ ಬೆಸ್ಟ್]

Sachin Tendulkar voted as top opener in greatest ODI XI

ಕ್ರಿಕೆಟ್ ದಿಗ್ಗಜರಾದ ಬ್ರಿಯಾನ್ ಲಾರಾ ಹಾಗೂ ವಿವಿಯನ್ ರಿಚರ್ಡ್ಸ್ ರನ್ನು ನಾಲ್ಕು ಹಾಗೂ ಐದನೇ ಸ್ಥಾನಕ್ಕೆ ದೂಡಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲೆಯರ್ಸ್ ಮೂರನೇ ಸ್ಥಾನಕ್ಕೇರಿದ್ದಾರೆ.ನಾಲ್ವರು ಆಸ್ಟ್ರೇಲಿಯನ್ ಆಟಗಾರರು ತಂಡದಲ್ಲಿದ್ದಾರೆ.

ಟಫರ್ಸ್ ಹಾಗೂ ವಾಗನ್ ಶೋನಲ್ಲಿ ಇಂಗ್ಲೆಂಡಿನ ಮಾಜಿ ನಾಯಕ ಮೈಕಲ್ ವಾಗನ್ ಅವರು ಈ ತಂಡವನ್ನು ಪ್ರಕಟಿಸಿದರು. ಲಂಕಾಷೈರ್ ನ ಅಶ್ಲೆ ಗೈಲ್ಸ್ ಹಾಗೂ ಆಸ್ಟ್ರೇಲಿಯಾದ ವೇಗಿ ಜೇಸನ್ ಗಿಲಿಪ್ಸಿ ಅವರು ಕೂಡಾ ಸಮೀಕ್ಷೆ ಪಟ್ಟಿಯಲ್ಲಿದ್ದರು.

ವಿಶ್ವಶ್ರೇಷ್ಠ ತಂಡ ಇಂತಿದೆ: ಸಚಿನ್ ತೆಂಡೂಲ್ಕರ್, ಕ್ರಿಸ್ ಗೇಲ್, ಎಬಿ ಡಿವಿಲೆಯರ್ಸ್, ಬ್ರಿಯಾನ್ ಲಾರಾ, ವಿವಿಯನ್ ರಿಚರ್ಡ್ಸ್, ಆಡಂ ಗಿಲ್ ಕ್ರಿಸ್ಟ್, ಜಾಕ್ವಲಿಸ್ ಕಾಲಿಸ್, ವಾಸೀಂ ಅಕ್ರಂ, ಬ್ರೆಟ್ ಲೀ, ಶೇನ್ ವಾರ್ನ್, ಗ್ಲೆನ್ ಮೆಗ್ರಾಥ್ (ಐಎಎನ್ಎಸ್)

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+