ಭಾರತ -ಪಾಕ್ ಪಂದ್ಯದ ನಡುವೆ ಮಳೆ, ಸಚಿನ್ ಎಂಬ ಮಿಂಚು!
ಬರ್ಮಿಂಗ್ ಹ್ಯಾಮ್, ಜೂನ್ 04: ಭಾರತ -ಪಾಕಿಸ್ತಾನ ನಡುವಿನ ಭಾನುವಾರದು ನಡೆದಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ನಿರೀಕ್ಷೆಯಂತೆ ಮಳೆ ಅಡ್ಡಿಯಾಗಿತ್ತು. ಆದರೆ, ಬೇಸರಗೊಂಡ ಅಭಿಮಾನಿಗಳಿಗೆ ಮಿಂಚಂತೆ ಕಂಡವರು ಅಭಿಮಾನಿಗಳ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್.
ಮೈದಾನದಲ್ಲಿ ಒಂದೆಡೆ ಮಳೆ ಬೀಳುವಾಗ ಪೆವಿಲಿಯನ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರು ಕಾಣಿಸಿಕೊಂಡರು. ಅನೇಕ ಅಭಿಮಾನಿಗಳು ಸಚಿನ್ ಅವರು ಮೈದಾನಕ್ಕೆ ಬಂದಿದ್ದಾರೆ ಎಂದು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. [In Pics : ಪಾಕ್ ವಿರುದ್ಧ ಜಯದ ನಗೆ ಬೀರಿದ ಭಾರತ]

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ನಿರಂಜನ್ ಶಾ ಅವರ ಜತೆ ಸಚಿನ್ ಅವರು ಮಾತನಾಡುವ ದೃಶ್ಯವನ್ನು ಬೃಹತ್ ಪರದೆ ಮೇಲೆ ನೋಡಿ ಪ್ರೇಕ್ಷಕರು ಸಚಿನ್ ಸಚಿನ್ ಎಂದು ಹರ್ಷೋದ್ಗಾರ ಮಾಡಿದರು.
ಇದಕ್ಕೂ ಮುನ್ನ ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಅವರು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ವಿರಾಟ್ ಕೊಹ್ಲಿ ಹಾಗೂ ಸರ್ಫರಾಜ್ ಇಬ್ಬರಿಗೂ ನಾಯಕರಾಗಿ ಐಸಿಸಿ ಆಯೋಜನೆಯಲ್ಲಿ ಮೊದಲ ಬಾರಿ ಮುಖಾಮುಖಿ ಹಾಗೂ ಉಭಯ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದು ನಾಲ್ಕನೇ ಸೆಣಸಾಟ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಮಾತ್ರ ಭಾರತದ ಮೇಲೆ ಪಾಕಿಸ್ತಾನ ಮೇಲುಗೈ ಸಾಧಿಸಿದೆ. 2-1 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications