For Quick Alerts
ALLOW NOTIFICATIONS  
For Daily Alerts
 

Sachin Tendulkar ನಿರ್ಮಿಸಿದ ಮುರಿಯಲು ಸಾಧ್ಯವಾಗದ ಟಾಪ್‌ 5 ದಾಖಲೆಗಳ ಪಟ್ಟಿ

ಭಾರತದಲ್ಲಿ ಕ್ರಿಕೆಟ್‌ ಕ್ರೇಜ್ ಬೆಳೆಯಲು ಅದೆಷ್ಟೋ ಜನರು ಶ್ರಮಿಸಿದ್ದಾರೆ. ಆದರೆ ಈ ಎಲ್ಲರಿಗಿಂತಲೂ ಒಂದು ಸ್ಟೆಪ್‌ ಮೇಲೆ ನಿಲ್ಲುವ ಆಟಗಾರ ಸಚಿನ್ ತೆಂಡೂಲ್ಕರ್. ಅಭಿಮಾನಿಗಳು ಇವರನ್ನು ಕ್ರಿಕೆಟ್‌ ದೇವರು ಎಂದೇ ಕರೆಯುತ್ತಾರೆ. ಅಕ್ಷರಶಃ 22 ಯಾರ್ಡ್‌ ಪಿಚ್‌ನಲ್ಲಿ 24 ವರ್ಷ ರಾಜನಂತೆ ಮೆರೆದ ಬ್ಯಾಟರ್‌, ಸಚಿನ್ ತೆಂಡೂಲ್ಕರ್. ಮುಂಬೈನ ಬೀದಿಗಳಲ್ಲಿ ಬ್ಯಾಟಿಂಗ್ ನಡೆಸಿ ವಿಶ್ವ ಮಟ್ಟದ ಗುರುತಿಸಿಕೊಟ್ಟ ಆಟಗಾರ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್. 53ನೇ ವಸಂತಕ್ಕೆ ಕಾಲಿಟ್ಟಿರುವ ಸಚಿನ್‌ಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಈ ವೇಳೆ ಇವರ ದಾಖಲೆಯ ಮೆಲುಕ ನೋಟ ಇಲ್ಲಿದೆ.

ಮರಾಠಿ ಸಾಹಿತಿ ರಮೇಶ್ ಹಾಗೂ ರಜನಿ ಅವರಿಗೆ 1973ರ ಏಪ್ರಿಲ್‌ 24 ರಂದು ಜನಿಸಿದ ಸಚಿನ್ ತೆಂಡೂಲ್ಕರ್ ಚಿಕ್ಕ ವಯಸ್ಸಿನಲ್ಲೇ ಬ್ಯಾಟ್ ಹಿಡಿದು ಆಡಲು ಆರಂಭಿಸಿದರು. ತಮಗಿಂತ ಉದ್ದದ ಬ್ಯಾಟ್‌ಗಳನ್ನು ಹಿಡಿದು ಅಭ್ಯಾಸ ಮಾಡುತ್ತಿದ್ದರು. ಕ್ರಿಕೆಟ್ ಮೇಲಿನ ಇವರ ಪೋಷಕರು ಇವರನ್ನು ಕ್ರಿಕೆಟ್ ಅಕಾಡಮಿಗೆ ಸೇರಿಸಿದರು. ಸಚಿನ್ ಅಲ್ಲಿಂದ ಸಿಕ್ಕ ಅವಕಾಶವನ್ನೆಲ್ಲಾ ಬಳಸಿಕೊಂಡು ಮೇಲೆದ್ದರು. ಶಾಲಾ ಟೂರ್ನಿಗಳಲ್ಲಿ ಗೆಳೆಯ ವಿನೋದ್ ಕಾಂಬ್ಳೆ ಅವರೊಂದಿಗೆ ದಾಖಲೆಯ ಜೊತೆಯಾಟವಾಡಿದ ಹದಿ ಹರಿಯದ ಹುಡುಗ ಸಚಿನ್ ಮೀಸೆ ಚಿಗುರುವ ಮುನ್ನವೇ ಭಾರತ ತಂಡಕ್ಕೆ ಆಯ್ಕೆ ಆದರು.

Sachin Tendulkar

16 ವರ್ಷದವರಾಗಿದ್ದಾಗ ಸಚಿನ್ ಭಾರತ ತಂಡವನ್ನು ಪ್ರತಿನಿಧಿಸಲು ಆರಂಭಿಸಿದರು. ಆಗಿನ ಕಾಲದ ಶ್ರೇಷ್ಠ ಬೌಲರ್‌ಗಳನ್ನು ತಮ್ಮ ಚಾಣಕ್ಷತನದಿಂದ ಎದುರಿಸಿದ ಸಚಿನ್ ವಿಶ್ವ ಮಟ್ಟದಲ್ಲಿ ಬಹು ಬೇಗನೆ ಗುರುತಿಸಿಕೊಂಡರು. ದಿನ ಕಳೆದಂತೆ ಇವರ ಮುಡಿಗೆ ಒಂದೊಂದೆ ದಾಖಲೆಗಳು ಸೇರುತ್ತಾ ಸಾಗಿದವು. ಕೊನೆಗೆ ಹಲವು ದಾಖಲೆಗಳಿಗೆ ಇವರೇ ಮೊದಲ ಹೆಸರು ಸಹ ಆದರು. ಕ್ರಿಕೆಟ್‌ ಮೈದಾನದಲ್ಲಿ ಸಚಿನ್ ನಿರ್ಮಿಸಿದ ಆ ಐದು ದಾಖಲೆಗಳ ಅವುಗಳನ್ನು ಮುರಿಯುವುದು ತುಂಬ ಕಷ್ಟ ಆ ಬಗ್ಗೆ ವರದಿ ಇಲ್ಲಿದೆ.

24 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಸುಮಾರು 24 ವರ್ಷ ಆಳಿದ್ದಾರೆ. ಈ ವೇಳೆ ಇವರು ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ 2 ದಶಕಗಳ ಕಾಲ ಸ್ಥಿರ ಬ್ಯಾಟಿಂಗ್ ನಡೆಸುವುದು ಸಹ ಒಂದು ದೊಡ್ಡ ದಾಖಲೆಯಾಗಿದೆ. ಇವರಿಗಿಂತಲೂ ಹೆಚ್ಚು ಇಂಗ್ಲೆಂಡ್ ತಂಡದ ವಿಲ್ಫ್ರೆಡ್ ರೋಡ್ಸ್, ಬ್ರಿಯಾನ್ ಕ್ಲೋಸ್ ಕ್ರಿಕೆಟ್‌ ಮೈದಾನದಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಆದರೆ ಸಚಿನ್ ಸ್ಥಿರ ಪ್ರದರ್ಶನ ಎಲ್ಲರಿಗಿಂತಲೂ ಕೊಂಚ ಇವರನ್ನು ಭಿನ್ನರನ್ನಾಗಿ ಮಾಡಿದೆ.

RCB vs GT: ಬೆಂಗಳೂರಿನಲ್ಲಿ ಆರ್‌ಸಿಬಿ ಲೀಗ್‌ ಹಂತದ ಕೊನೆಯ ಪಂದ್ಯ- ಇಲ್ಲಿದೆ ಸಂಪೂರ್ಣ ಮಾಹಿತಿ RCB vs GT: ಬೆಂಗಳೂರಿನಲ್ಲಿ ಆರ್‌ಸಿಬಿ ಲೀಗ್‌ ಹಂತದ ಕೊನೆಯ ಪಂದ್ಯ- ಇಲ್ಲಿದೆ ಸಂಪೂರ್ಣ ಮಾಹಿತಿ

200 ಟೆಸ್ಟ್‌ ಪಂದ್ಯ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅದೆಷ್ಟೋ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಆಟಗಾರನಾಗಿ 200 ಟೆಸ್ಟ್‌ ಪಂದ್ಯವನ್ನು ಆಡಿದ ದೊಡ್ಡ ದಾಖಲೆ ಇವರ ಹೆಸರಿನಲ್ಲಿದೆ. ಇವರ ಪಕ್ಕದಲ್ಲೂ ಯಾವೊಬ್ಬ ಬ್ಯಾಟರ್ ಇಲ್ಲ. ಈ ಸಾಧನೆಯನ್ನು ಅಳಿಸುವುದು ಕಷ್ಟವೇ ಸರಿ. ಇವರು 200 ಟೆಸ್ಟ್ ಪಂದ್ಯಗಳ 329 ಇನಿಂಗ್ಸ್‌ಗಳಲ್ಲಿ 51 ಶತಕ, 68 ಅರ್ಧಶತಕ ಸಿಡಿಸಿದ್ದಾರೆ. ಅಲ್ಲದೆ 53ರ ಸರಾಸರಿಯಲ್ಲಿ 15921 ರನ್‌ ಕಲೆ ಹಾಕಿದ್ದಾರೆ.

ಒಂದೇ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್

ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಮಿಂಚಿ ಅಬ್ಬರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರ. ಇವರು 1998ರಲ್ಲಿ 1894 ರನ್‌ ಕಲೆ ಹಾಕಿದ್ದಾರೆ. ಈ ದಾಖಲೆಯ ಸನಿಹಕ್ಕೂ ಸಹ ಯಾವೊಬ್ಬ ಬ್ಯಾಟರ್ ಬಂದಿಲ್ಲ. ಸಚಿನ್ ತಮ್ಮ ಅಮೋಘ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಒಟ್ಟು 463 ಏಕದಿನ ಪಂದ್ಯಗಳನ್ನು ಆಡಿದ್ದು, 44ರ ಸರಾಸರಿಯಲ್ಲಿ 18426 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 49 ಶತಕ, 96 ಅರ್ಧಶತಕಗಳು ಸೇರಿವೆ. ಇನ್ನು ಬೌಲಿಂಗ್‌ನಲ್ಲೂ ಇವರು 154 ವಿಕೆಟ್ ಪಡೆದಿದ್ದಾರೆ.

ಧೂಮಪಾನ ಮಾಡಿ ಸಿಕ್ಕಿಬಿದ್ದರಾ ಜಿಟಿ ವೇಗಿ ರಬಾಡ? ಇಲ್ಲಿದೆ ವಿಡಿಯೋಧೂಮಪಾನ ಮಾಡಿ ಸಿಕ್ಕಿಬಿದ್ದರಾ ಜಿಟಿ ವೇಗಿ ರಬಾಡ? ಇಲ್ಲಿದೆ ವಿಡಿಯೋ

ಶತಕಗಳ ಜೊತೆಯಾಟ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಜೊತೆಯಾಟಗಳಲ್ಲಿ ಭಾಗಿಯಾದ ಆಟಗಾರ ಎಂಬ ಹೆಗ್ಗಳಿಕೆ ಸಹ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. ಟೆಸ್ಟ್‌, ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌, ಸೌರವ್ ಗಂಗೂಲಿ ಅವರೊಂದಿಗೆ 247 ಪಂದ್ಯಗಳಲ್ಲಿ 38 ಶತಕ ಹಾಗೂ 45 ಅರ್ಧಶತಕದ ಜೊತೆಯಾಟವನ್ನು ನೀಡಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಶ್ರೀಲಂಕಾದ ದಿಗ್ಗಜ ಆಟಗಾರರಾದ ಮಹೇಲ್ ಜಯವರ್ಧನೆ ಹಾಗೂ ಕುಮಾರ್ ಸಂಗಕ್ಕಾರ (36 ಶತಕ) ಇದ್ದು, ಮೂರನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್, ಸಚಿನ್ ಜೋಡಿ ಇದೆ. ಈ ಜೋಡಿ 31 ಶತಕದ ಜೊತೆಯಾಟವನ್ನು ನೀಡಿದೆ.

Sachin Tendulkar

ರನ್‌ ದಾಖಲೆ

ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 15,921 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 18,426 ರನ್‌ ಸಿಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 34357 ರನ್‌ ಕಲೆ ಹಾಕಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕುಮಾರ್ ಸಂಗಕ್ಕಾರ 28016 ರನ್‌ ಸಿಡಿಸಿದ್ದಾರೆ. ಸಂಗಾ ಸಚಿನ್‌ ಅವರಿಗಿಂತ 6300ಕ್ಕೂ ಹೆಚ್ಚು ರನ್ ಹಿಂದೆ ಇದ್ದಾರೆ. ಕ್ರಿಕೆಟ್‌ ಮೈದಾನದಲ್ಲಿ ನೂರು ಶತಕಗಳ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಸಹ ಇವರದ್ದೇ ಆಗಿದೆ.

Story first published: Friday, April 24, 2026, 13:07 [IST]
Other articles published on Apr 24, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+