For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಆಡುವ 11ರ ಬಳಗ ಹೆಸರಿಸಿದ ಸಂಜಯ್ ಮಂಜ್ರೇಕರ್

ಭಾರತ ಕ್ರಿಕೆಟ್ ತಂಡದ ಆಟಗಾರ ಸಂಜಯ್ ಮಂಜ್ರೇಕರ್ ಅವರು 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತದ ಆಡುವ 11ರ ಬಳಗವನ್ನು ಆಯ್ಕೆ ಮಾಡಿದ್ದಾರೆ.

ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡದ ವಿರುದ್ಧ ಭಾರತವು ಸೆಪ್ಟೆಂಬರ್ 2ರಂದು ಸೆಣಸಾಡಲಿದೆ.

ಪಾಕಿಸ್ತಾನದ ವಿರುದ್ಧ ಹೈ-ವೋಲ್ಟೇಜ್ ಪಂದ್ಯಕ್ಕೆ 10 ದಿನಗಳು ಬಾಕಿ ಇರುವಾಗ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ತನ್ನ ಆಯ್ಕೆಯ ಭಾರತದ ಆಡುವ 11ರ ಬಳಗವನ್ನು ಹೆಸರಿಸಿದರು.

sanjay-manjrekar-names-indias-playing-11

ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ರೂಪದಲ್ಲಿ ಮೂವರು ಸ್ಪೆಷಲಿಸ್ಟ್ ವೇಗಿಗಳನ್ನು ಆಯ್ಕೆ ಮಾಡಿಕೊಂಡರೆ, ಹಾರ್ದಿಕ್ ಪಾಂಡ್ಯ ಅವರನ್ನು ನಾಲ್ಕನೇ ಆಯ್ಕೆ ಮಾಡಿದ್ದಾರೆ.

ಇದೇ ವೇಳೆ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಗಾಯದ ನಂತರ ತಂಡಕ್ಕೆ ಹಿಂತಿರುಗಿದ ಕೆಎಲ್ ರಾಹುಲ್ ಅವರು ಸಂಜಯ್ ಮಂಜ್ರೇಕರ್ ಆಯ್ಕೆಯ ಭಾರತದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಆರಂಭಿಕ ಜೋಡಿಯಾಗಿ ಇನ್ನಿಂಗ್ಸ್ ಆರಂಭಿಸಲು ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರಿಗೆ ಸಂಜಯ್ ಮಂಜ್ರೇಕರ್ ಆದ್ಯತೆ ನೀಡಿದರು.

"ನನ್ನ ಮೂವರು ವೇಗಿಗಳು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ. ಹಾರ್ದಿಕ್ ಪಾಂಡ್ಯ ನನ್ನ ನಾಲ್ಕನೇ ವೇಗಿ ಆಗಲಿದ್ದಾರೆ. ನನ್ನ ಸ್ಪಿನ್ನರ್‌ ಆಯ್ಕೆಯಾಗಿ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಇರಲಿದ್ದಾರೆ," ಎಂದರು.

sanjay-manjrekar-names-indias-playing-11

"ಇನ್ನು ನನ್ನ ಆರಂಭಿಕ ಆಟಗಾರರು ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಆಗಿರುತ್ತಾರೆ ಮತ್ತು 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಗಿರುತ್ತಾರೆ. ಕೆಎಲ್ ರಾಹುಲ್ ಅವರು ಕೀಪರ್ ಆಗಿರುವುದರಿಂದ ಅವರು ಆಡುತ್ತಾರೆ," ಎಂದು ಸಂಜಯ್ ಮಂಜ್ರೇಕರ್ ಇಎಸ್‌ಪಿಎನ್‌ಕ್ರಿಕ್ ಇನ್‌ಫೋಗೆ ತಿಳಿಸಿದರು.

ಭಾರತ ತಂಡ ತಿಲಕ್ ವರ್ಮಾರಲ್ಲಿ ಎಡಗೈ ಆಟಗಾರನನ್ನು ಕಾಣಬೇಕಾಗುತ್ತದೆ
ಇನ್ನು ಮಧ್ಯಮ ಕ್ರಮಾಂಕದ ಬಗ್ಗೆ ಮಾತನಾಡಿದ ಸಂಜಯ್ ಮಂಜ್ರೇಕರ್, ಶ್ರೇಯಸ್ ಅಯ್ಯರ್ ಅಥವಾ ತಿಲಕ್ ವರ್ಮಾ ಅವರು ಏಷ್ಯಾ ಕಪ್ 2023ರ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ತಂಡದಲ್ಲಿ ಕಾಣಿಸಿಕೊಳ್ಳಬಹುದು ಎಂದು ಗಮನಸೆಳೆದರು.

ಆದಾಗ್ಯೂ, ತಂಡದಲ್ಲಿ ಸ್ಥಾನ ಪಡೆದಿರುವ ಬಲಗೈ ಆಟಗಾರ ಶ್ರೇಯಸ್ ಅಯ್ಯರ್ ಬದಲಿಯಾಗಿ ತಿಲಕ್‌ ವರ್ಮಾರನ್ನು ಪ್ರಯೋಗಿಸಬಹುದು. ಆದ್ದರಿಂದ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಬೆರೆಸಬಹುದು ಎಂದು ಸಂಜಯ್ ಮಂಜ್ರೇಕರ್ ವಿವರಿಸಿದರು.

"ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಅಥವಾ ತಿಲಕ್ ವರ್ಮಾ ಆಡಬಹುದು. ಏಕೆಂದರೆ ಭಾರತದ ಮೊದಲ ಆಯ್ಕೆಯ ಆಡುವ 11ರ ಬಳಗದಲ್ಲಿ ಹಾರ್ದಿಕ್ ಪಾಂಡ್ಯ ಸೇರಿದಂತೆ ಮೊದಲ ಏಳು ಬ್ಯಾಟರ್‌ಗಳು ಬಲಗೈ ಆಟಗಾರರಾಗಿದ್ದಾರೆ. ಹೀಗಾಗಿ ತಿಲಕ್ ವರ್ಮಾರಲ್ಲಿ ಭಾರತವು ಎಡಗೈ ಆಟಗಾರನಿಗೆ ಹುಡುಕಿಕೊಳ್ಳಬೇಕಾಗುತ್ತದೆ. ಇದು ಭಾರತದ ಸಮಸ್ಯೆಯಾಗಿದೆ," ಎಂದು ಸಂಜಯ್ ಮಂಜ್ರೇಕರ್ ತಿಳಿಸಿದರು.

ಯುವ ಎಡಗೈ ಆಟಗಾರ ತಿಲಕ್ ವರ್ಮಾ ಈವರೆಗೆ ಏಳು ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 34.80ರ ಸರಾಸರಿಯಲ್ಲಿ 174 ರನ್ ಗಳಿಸಿದ್ದಾರೆ. ಇದಲ್ಲದೆ, ಅವರ ಅದ್ಭುತ ಐಪಿಎಲ್ ಅಭಿಯಾನದ 11 ಪಂದ್ಯಗಳಲ್ಲಿ 42.88ರ ದೊಡ್ಡ ಸರಾಸರಿಯಲ್ಲಿ 343 ರನ್‌ಗಳನ್ನು ಗಳಿಸಿದರು.

ಪಾಕಿಸ್ತಾನ ವಿರುದ್ಧ ಸಂಜಯ್ ಮಂಜ್ರೇಕರ್ ಆಯ್ಕೆಯ ಭಾರತದ ಆಡುವ 11ರ ಬಳಗ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್/ತಿಲಕ್ ವರ್ಮಾ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

Story first published: Friday, August 25, 2023, 18:36 [IST]
Other articles published on Aug 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+