For Quick Alerts
ALLOW NOTIFICATIONS  
For Daily Alerts
 

India Pakistan match: ಶಮಿ ಹೊರಗುಳಿಯಲು ಶಾಕಿಂಗ್ ಕಾರಣ ವಿವರಿಸಿದ ಸಂಜಯ್ ಮಂಜ್ರೇಕರ್

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಅನುಭವಿ ಮೊಹಮ್ಮದ್ ಶಮಿಗೆ ಅವಕಾಶ ದೊರೆತಿಲ್ಲ. ಈ ವಿಚಾರವಾಗಿ ಈಗ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಈ ಬಗ್ಗೆ ಮಾತನಾಡಿದ್ದು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರ ತೆಗೆದ್ಉಕೊಳ್ಳಲು ಕಾರಣವೇನೆಂದು ಅಚ್ಚರಿಯ ಅಂಶವನ್ನು ವಿವರಿಸಿದ್ದಾರೆ

ಈ ಪಂದ್ಯದಲ್ಲಿ ಭಾರತ ತಂಡ ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ವೇಗಿಗಳಾಗಿ ತಂಡದಲ್ಲಿದ್ದು ಶಾರ್ದೂಲ್ ಠಾಕೂರ್ ಅವರನ್ನು ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿ ಅವಕಾಶ ನೀಡಲಾಗಿದೆ. ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರ ಕೆಲ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿಯುಂಟು ಮಾಡಿದೆ. ಏಷ್ಯಾಕಪ್ ಹಾಗೂ ವಿಶ್ವಕಪೊ್ ದೃಷ್ಟಿಯಲ್ಲಿಟ್ಟುಕೊಂಡು ವೆಸ್ಟ್ ಇಂಡೀಸ್ ಪ್ರವಾಸದಿಮದ ಶಮಿಗೆ ವಿಶ್ರಾಂತಿ ನೀಡಿದ ಬಳಿಕ ಪಾಕಿಸ್ತಾನದಂತಾ ಪ್ರಮುಖ ಪಂದ್ಯದಲ್ಲಿ ಶಮಿಗೆ ಅವಕಾಶ ನೀಡದಿರುವುದು ಪ್ರಶ್ನೆ ಏಳಲು ಕಾರಣವಾಗಿದೆ.

Sanjay Manjrekars Shocking Remarks on Excluding Mohammed Shami from Asia Cup Match Against Pakistan

ಈ ಹಿನ್ನೆಲೆಯಲ್ಲಿ ಮಾತನಾಡಿದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಟೀಮ್ ಇಂಡಿಯಾದ ಬ್ಯಾಟಿಂಗ್ ಆಳದ ಬಗ್ಗೆ, ತಂಡದ ಅಸ್ಥಿರತೆಯ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ತಂಡದ ಬ್ಯಾಟಿಂಗ್ ವಿಭಾಗದ ಮೇಲೆ ಅಪನಂಬಕಕೆಯಿರುವುದೇ ಶಮಿ ಅವರನ್ನು ಹೊರಗಿಡುವ ನಿರ್ಧಾರಕ್ಕೆ ಕಾರಣ ಎಂದಿದ್ದಾರೆ.

Asia cup 2023: ಭಾರತ vs ಪಾಕಿಸ್ತಾನ, ಸಂಕಷ್ಟದಲ್ಲಿ ಟೀಮ್ ಇಂಡಿಯಾ, Live ಸ್ಕೋರ್, ಆಡುವ ಬಳಗ
"ಭಾರತದ ಬ್ಯಾಟಿಂಗ್ ಆಳದ ಬಗ್ಗೆ ಗೊಣಗಾಟವನ್ನು ಕೇಳಿದ್ದೇನೆ. ಆದರೆ ಯಾರೂ ಕೂಡ ಬೌಲಿಂಗ್ ವಿಭಾಗದ ಆಳದ ಬಗ್ಗೆ ಚರ್ಚಿಸುವುದಿಲ್ಲ. ಶಾರ್ದೂಲ್ ಠಾಕೂರ್‌ಗೆ ಅವಕಾಶ ದೊರೆತಿದೆ. ಈ ಯೋಚನೆಯ ಬಗ್ಗೆ ನಾನು ಸ್ವಲ್ಪ ವಿರೋಧವಿದ್ದೇನೆ. ಪಾಕಿಸ್ತಾನದ ಬ್ಯಾಟರ್‌ಗಳಿಗೆ ಶಾರ್ದೂಲ್ ಠಾಕೂರ್ ಹೆಚ್ಚು ಸಂಕಷ್ಟ ನೀಡುತ್ತಾರಾ ಅಥವಾ ಮೊಹಮ್ಮದ್ ಶಮಿ ನೀಡುತ್ತಾರಾ?" ಎಂದು ಪ್ರಶ್ನಿಸಿದ್ದಾರೆ ಮಂಜ್ರೇಕರ್.

"ನಾನು ಬ್ಯಾಟಿಂಗ್ ವಿಭಾಗದ ಆಳದ ಬಗ್ಗೆ ಆತಂಕ ಪಡುವುದಿಲ್ಲ. ಆದರೆ ಇಂಥಾ ಪಿಚ್‌ನಲ್ಲಿ ಶಮಿ ಅವರಂಥಾ ಬೌಲರ್‌ಗಳ ಅಗತ್ಯವಿದೆ. ವಿಶೇಷವಾಗಿ ಚೆಂಡು ತಿರುವು ಪಡೆದುಕೊಳ್ಳುತ್ತಿರುವಾಗ ಭಾರತ ಮೂರು ವೇಗದ ಬೌಲರ್‌ಗಳಿಂದಿಗೆ ಸ್ಪೆಶಲಿಸ್ಟ್ ಬೌಲರ್‌ಗಳೊಂದಿಗೆ ಆಡಬೇಕಾಗಿತ್ತು. ಬೂಮ್ರಾ, ಶಮಿ, ಸಿರಾಜ್ ಇದ್ದರೆ ಪಾಕ್ ತಂಡವನ್ನು ಕಟ್ಟಿಹಾಕಲು ಸಿಲಭ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕ ನೀರಸ ಪ್ರದರ್ಶನ ನೀಡಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್ ಹಾಗೂ ಶುಬ್ಮನ್ ಗಿಲ್ ತಂಡದ ಮೊತ್ತ 66 ರನ್‌ಗಳಾಗುವಷ್ಟರಲ್ಲಿ ಔಟಾಗಿದ್ದರು. ನಂತರ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ನಡೆಸಿದ್ದಾರೆ.

ಪಾಕಿಸ್ತಾನ ಆಡುವ ಬಳಗ: ಇಮಾಮ್-ಉಲ್-ಹಕ್, ಫಖರ್ ಜಮಾನ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್
ಬೆಂಚ್: ಫಹೀಮ್ ಅಶ್ರಫ್, ಮೊಹಮ್ಮದ್ ವಾಸಿಂ ಜೂನಿಯರ್, ಅಬ್ದುಲ್ಲಾ ಶಫೀಕ್, ಸೌದ್ ಶಕೀಲ್, ಉಸಾಮಾ ಮಿರ್, ಮೊಹಮ್ಮದ್ ಹ್ಯಾರಿಸ್

ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ
ಬೆಂಚ್: ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್ , ತಿಲಕ್ ವರ್ಮ

Story first published: Saturday, September 2, 2023, 18:16 [IST]
Other articles published on Sep 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+